ಶಿಕಾಗೊ: ಅಮೆರಿಕದ ಶಿಕಾಗೊದಲ್ಲಿನ ಷಾಪಿಂಗ್ ಮಾಲ್‌ನಲ್ಲಿ ಅರೆಕಾಲಿಕ ಉದ್ಯೋಗ ಮಾಡುತ್ತಾ ಎಂಬಿಎ ವ್ಯಾಸಂಗವನ್ನೂ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಯನ್ನು ದುಷ್ಕರ್ಮಿಗಳು ಶುಕ್ರವಾರ ಮಾಲ್‌ನಲ್ಲಿಯೇ ಗುಂಡಿಕ್ಕಿ ಕೊಂದಿದ್ದಾರೆ (Murder).
ತೆಲಂಗಾಣ ರಾಜ್ಯದ ಖಮ್ಮಮ್ ಜಿಲ್ಲೆಯ 22 ವರ್ಷದ ಸಾಯಿತೇಜ್ ನುಕರಾಪು ಹತ್ಯೆಯಾದ ವಿದ್ಯಾರ್ಥಿ.
ತೆಲಂಗಾಣದಲ್ಲಿ ಬಿಬಿಎ ಪದವಿ ಪೂರ್ಣಗೊಳಿಸಿದ್ದ ಸಾಯಿತೇಜ್, ಎಂಬಿಎ ವ್ಯಾಸಂಗಕ್ಕಾಗಿ ನಾಲ್ಕು ತಿಂಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು.
2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ.
ಇವರಲ್ಲಿ ತೆಲಂಗಾಣದ ವಿದ್ಯಾರ್ಥಿಗಳ ಸಂಖ್ಯೆ ಶೇ.34ರಷ್ಟು ಪ್ರಮಾಣದಲ್ಲಿದೆ.