ಕನಕಪುರ (crime news): ಸಾಲ ಕೊಡಲಿಲ್ಲವೆಂಬ ಕಾರಣಕ್ಕೆ ಚಿಕ್ಕಪ್ಪನ ಮಗ, ಆತನ ಪತ್ನಿ, ತಮ್ಮ ದೊಡ್ಡಪ್ಪನ ಮಗನ ಮನೆ ಬಳಿ ಬಂದು ಗಲಾಟೆ ಮಾಡಿದ್ದಲ್ಲದೆ ಕುಡುಗೋಲಿನಿಂದ ಹಲ್ಲೆ ಮಾಡಿದ್ದಾರೆಂದು ಮೂವರ ವಿರುದ್ಧ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಕಸಬಾ ಹೋಬಳಿಯ ಪಿ.ರಾಂಪುರ ಗ್ರಾಮದ ನಾಗರಾಜು ಹಲ್ಲೆಗೊಳಗಾದವರು. ಅದೇ ಗ್ರಾಮದ ಬೋಜ ಹಲ್ಲೆ ಮಾಡಿದವರು ಎಂದು ಆರೋಪಿಸಲಾಗಿದೆ.
ಈತನ ಹೆಂಡತಿ ರೂಪಿಣಿ, ಈತನ ತಮ್ಮ ಸೀನಾ ಮೂವರು ಸೇರಿ ನಾಗರಾಜು ಹಲ್ಲೆ ಮಾಡಿದ್ದಾರೆ ಎಂದು ಪ್ರಕರಣದಲ್ಲಿ ದೂರಿದ್ದಾರೆ.
ಆರೋಪಿ ಭೋಜ, ತಿಂಗಳ ಹಿಂದೆ ಹಲ್ಲೆಗೊಳಗಾದ ನಾಗರಾಜು ಬಳಿ 50 ಸಾವಿರ ಸಾಲ ಕೇಳಿದ್ದರು. ಅವರು ನನ್ನ ಬಳಿ ಇಲ್ಲ ಎಂದು ಹೇಳಿದ್ದರು ಅದೇ ಕಾರಣಕ್ಕೆ ನ.26 ರಂದು ರಾತ್ರಿ ಆರೋಪಿ ಭೋಜ, ಈತನ ಪತ್ನಿ ರೂಪಿಣಿ, ತಮ್ಮ ಸೀನ ಮೂವರು ನಾಗರಾಜು ಮನೆ ಬಳಿ ಬಂದು ಗಲಾಟೆ ಮಾಡಿದ್ದಲ್ಲದೆ, ಕುಡುಗೋಲಿನಿಂದ ಹಲ್ಲೆ ಮಾಡಿದ್ದಾರೆ.
ಸ್ಥಳೀಯರ ಸಹಾಯದಿಂದ ತಪ್ಪಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಹಣ ಕೊಡಲಿಲ್ಲವೆಂದು ಮನೆ ಬಳಿ ಬಂದು ಗಲಾಟೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಾಗರಾಜು ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.