ಚೆನ್ನೈ: ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ತೀವ್ರ ಸ್ವರೂಪದ ವಾಯುಭಾರ ಕುಸಿತ ಉಂಟಾಗಿದ್ದು, ಚಂಡಮಾರುತವಾಗಿ (FengalCyclone) ಪರಿವರ್ತನೆಗೊಂಡಿದೆ. ಪರಿಣಾಮ ಗಂಟೆಗೆ 65 ಕಿಮೀ ವೇಗದಲ್ಲಿ ಗಾಳಿ ಬೀಸಲಾರಂಭಿಸಿದೆ.
ಚಂಡಮಾರುತ ತಮಿಳುನಾಡು ಕರಾವಳಿಯತ್ತ ಚಲಿಸುತ್ತಾ ಇದೆ. ಮುಂದಿನ ಒಂದೆರಡು ದಿನಗಳಲ್ಲಿ ಶ್ರೀಲಂಕಾ ಕರಾವಳಿಯನ್ನು ದಾಟುತ್ತದೆ. ತಮಿಳುನಾಡಿನ ಕರಾವಳಿ ಪ್ರದೇಶಗಳ ಮೇಲೆ ಪರಿಣಾಮ ಬೀರಲಿದೆ.
ಕಡಲೂರು ಮತ್ತು ಮೈಲಾಡುತುರೈ ಜಿಲ್ಲೆಗಳು ಮತ್ತು ಕಾರೈಕಲ್‌ಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಸದ್ಯ ಫೆಂಗಲ್ ಚಂಡಮಾರುತ ಲಂಕಾದ ಟ್ರಿಂಕೋಮಲಿಯ ಆನ್ನೇಯಕ್ಕೆ 310 ಕಿಮೀ ದೂರದಲ್ಲಿ, ಪುದುಚೇರಿಯ ದಕ್ಷಿಣ ಆಗ್ನಿಯಕ್ಕೆ 710 ಕಿಮೀ ಮತ್ತು ಚೆನ್ನೈನಿಂದ 800 ಕಿಮೀ ಆಗ್ನೆಯದಲ್ಲಿದೆ ಎಂದು ಹವಾಮಾನ ಇಲಾಖೆ ಬುಧ ವಾರ ತಿಳಿಸಿದೆ.
ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್ಪಟ್ಟು, ವಿಲ್ಲುಪುರಂ, ಅರಿಯಲೂರ್, ತಂಜಾವೂರು, ತಿರುವರೂರ್, ನಾಗಪಟ್ಟಣಂ ಮತ್ತು ಪುದು ಕೊಟ್ಟೆ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಗಂಟೆಗೆ 65 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ, ಕರಾವಳಿಯುದ್ದಕ್ಕೂ ಸಮುದ್ರದ ಪ್ರಕ್ಷುಬ್ದತೆ ಕಾಣಬರುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡು ಕರಾವಳಿಗೆ ಚಂಡಮಾರುತ ಅಪ್ಪಳಿಸುವ ನಿರೀಕ್ಷೆಯಿದೆ.
ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.