ದೈನಂದಿನ ರಾಶಿ ಭವಿಷ್ಯ (astrology); ಬುಧವಾರ, 27 2024
ಮೇಷ ರಾಶಿ: ಕೋಪದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಹಾನಿಕಾರಕವಾಗಿದೆ. ನಿಮ್ಮ ಮನಸ್ಸು ಹೇಳಿದಂತೆ, ಕೆಲವು ಕೆಲಸಗಳನ್ನು ಮಾಡದಿದ್ದರೆ ಅತೃಪ್ತಿ. ವಿದ್ಯಾರ್ಥಿಗಳು ಅತೀ ಪರಿಶ್ರಮ ಹಾಕಲೇ ಬೇಕಾಗುವುದು.
ವೃಷಭ ರಾಶಿ: ಪತಿ-ಪತ್ನಿ ಯರ ಸಂಬಂಧದಲ್ಲಿ ಸಾಮರಸ್ಯ. ಆರೋಗ್ಯ ಚೆನ್ನಾಗಿರುತ್ತದೆ. ಕುಟುಂಬದಲ್ಲಿ ಮಂಗಳಕಾರ್ಯ ಯೋಗವಿದೆ.
ಮಿಥುನ ರಾಶಿ: ಯೋಜನೆಯಂತೆ ಎಲ್ಲವೂ ನಡೆದರೆ ಮನಸ್ಸಿನಲ್ಲಿ ಸಂತೋಷ. ಸಂಬಂಧಗಳನ್ನು ಗೌರವಿಸುವುದರಿಂದ, ಮನೆಯಲ್ಲಿ ನೆಮ್ಮದಿ ನೆಲೆಸುವುದು. ವ್ಯಾಪಾರ, ವ್ಯವಹಾರಗಳು ಉತ್ತಮ ಲಾಭದಾಯಕವಾಗಲಿವೆ. ಮಹಿಳೆಯರು ಆರೋಗ್ಯದಲ್ಲಿ ಜಾಗ್ರತೆ ವಹಿಸಿರಿ.
ಕಟಕ ರಾಶಿ: ಕುಟುಂಬದ ಸದಸ್ಯರ ಅಗತ್ಯಗಳನ್ನು ಸಹ ನೋಡಿಕೊಳ್ಳಿ. ಹೂಡಿಕೆಗೆ ಸಂಬಂಧಿಸಿದ ಕೆಲಸದಲ್ಲಿ ಕೆಲವು ರೀತಿಯ ಲೋಪ ಉಂಟಾಗಬಹುದು. ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಬಲವಿದೆ. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ದೊರೆಯುವ ಯೋಗವಿದೆ.
ಸಿಂಹ ರಾಶಿ: ಕಷ್ಟದ ಸಮಯದಲ್ಲಿ ನೆರೆಯವರಿಗೆ ಸಹಾಯ ಮಾಡುವುದು ನಿಮಗೆ ಖುಷಿ ನೀಡುತ್ತದೆ. ಮಾರ್ಕೆಟಿಂಗ್ ಸಂಬಂಧಿತ ಕೆಲಸಗಳಲ್ಲಿ ಹೊಸ ತಂತ್ರಜ್ಞಾನವನ್ನು ಬಳಸಿ. ಉದ್ಯೋಗಿಗಳಿಗೆ ಉತ್ತಮ ಉದ್ಯೋಗದ ಅವಕಾಶಗಳು ಸಿಗಲಿವೆ. ದಿನಾಂತ್ಯ ಶುಭವಿದೆ.
ಕನ್ಯಾ ರಾಶಿ: ಕುಟುಂಬದ ಸದಸ್ಯರಲ್ಲಿ ವಾತ್ಸಲ್ಯ ಮತ್ತು ಪ್ರೀತಿ ಉಳಿಯುತ್ತದೆ. ಯಾವು ದೇ ಕೆಲಸದಲ್ಲಿ ಯಶಸ್ಸಿ ನಿಂದ ಮನಸ್ಸಿನಲ್ಲಿ ಸಂತೋಷ. ಸದ್ಯದಲ್ಲೇ ವೃತ್ತಿ ಕ್ಷೇತ್ರದಲ್ಲಿ ಮುಂಭಡ್ತಿ ಯೋಗವಿದೆ.ವಿದ್ಯಾರ್ಥಿಗಳಿಗೆ ಶುಭ ಫಲಿತಾಂಶ.
ತುಲಾ ರಾಶಿ: ಯಾವುದೇ ಸಂದಿಗ್ಧತೆಯ ಸಂದರ್ಭದಲ್ಲಿ, ಕುಟುಂಬದ ಸದಸ್ಯರ ಬೆಂಬಲವು ನಿರ್ಧಾರ ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಗಮನ ಹರಿಸಬೇಕು.ದಾಂಪತ್ಯದಲ್ಲಿ
ಉತ್ತಮ ಹೊಂದಾಣಿಕೆ ಇರುತ್ತದೆ.
ವೃಶ್ಚಿಕ ರಾಶಿ: ಆತ್ಮಾವಲೋಕ ನದಲ್ಲಿಯೂ ಸ್ವಲ್ಪ ಸಮಯ ಕಳೆಯಿರಿ. ಭಾವೋದ್ವೇಗಕ್ಕೆ ಒಳಗಾಗುವ ಮೂಲಕ, ನೀವೇ ಹಾನಿ ಮಾಡಿ ಕೊಳ್ಳಬಹುದು. ಗೃಹದಲ್ಲಿ ಧಾರ್ಮಿಕ ಪೂಜಾ ಯೋಗವಿದೆ ವಿದ್ಯಾರ್ಥಿಗಳಿಗೆ ಶುಭವಿದೆ . ಅತಿಥಿಗಳ ಆಗಮನದಿಂದ ಸಂತಸ.
ಧನಸ್ಸು ರಾಶಿ: ಸ್ವಲ್ಪ ಪ್ರಾಯೋಗಿಕ ಮತ್ತು ಸ್ವಾರ್ಥಿಯಾಗಿರುವುದು ಸಹ ಅಗತ್ಯವಾಗಿದೆ. ಇತರ ರಿಗೆ ಸಹಾಯ ಮಾಡು ವಾಗ ನಿಮ್ಮ ಸ್ವಂತ ಸುರಕ್ಷತೆ ಯನ್ನು ನೋಡಿಕೊಳ್ಳಿ. ಹಾಗಾಗಿ ಆರ್ಥಿಕ ಸಮಸ್ಯೆಗಳು ಬಂದರೂ ಪರಿಹಾರವಾಗಲಿವೆ . ಹಿರಿಯರೊಡನೆ ವಾದ ವಿವಾದಕ್ಕೆ ಕಾರಣರಾಗದಿರಿ.
ಮಕರ ರಾಶಿ: ನಕಾರಾತ್ಮಕ ಆಲೋಚನೆ ಗಳು ನಿಮ್ಮನ್ನು ಆಳಲು ಬಿಡಬೇಡಿ. ಕೆಲಸದ ಸ್ಥಳದಲ್ಲಿ ಕೆಲ ದಿನಗಳಿಂದ ಇದ್ದ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಸುಧಾರಿಸುವ ಸಾಧ್ಯತೆ ಇದೆ. ಶುಭ ಕಾರ್ಯಗಳಿಗೆ ಇದು ಸಕಾಲ.
ಕುಂಭ ರಾಶಿ: ಪ್ರತಿಯೊಂದು ವಿಷಯ ದಲ್ಲೂ ಲಾಭ, ಮನಸ್ಸಿಗೆ ಸಂತೋಷ. ವಿಶೇಷ ವ್ಯಕ್ತಿ ಯನ್ನು ಭೇಟಿಯಾಗುವು ದರಿಂದ ಮನಸ್ಥಿತಿಯಲ್ಲಿ ಬದಲಾವಣೆ. ಆಗಾಗ ದೇಹಾರೋಗ್ಯದಲ್ಲಿ ಮಾರ್ಪಾಡು ವಾಗಬಹುದು. ಸಂಚಾರದಲ್ಲಿ ವಾಹನ ಚಾಲನೆಯಲ್ಲಿ ಹೆಚ್ಚಿನ ಗಮನ ಹರಿಸಿರಿ .ದಿನಾಂತ್ಯ ಶುಭವಿದೆ.
ಮೀನ ರಾಶಿ: ಆರ್ಥಿಕ ಮತ್ತು ಕೌಟುಂಬಿಕ ಸ್ಥಿತಿ ಇಂದು ಉತ್ತಮವಾಗಿರುತ್ತದೆ. ನಿಮ್ಮ ಪ್ರಮುಖ, ಗೌಪ್ಯ ವಿಚಾರಗಳನ್ನು ಯಾರಿಗೂ ತಿಳಿಸದಿರಿ. ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಇರುತ್ತದೆ .ಕೆಲಸ ಕಾರ್ಯಗಳಿಗೆ ಶ್ರೀ ದೇವತಾನುಗ್ರಹ ವಿರುವುದರಿಂದ ಧೈರ್ಯದಿಂದ ಮುನ್ನಡೆಯಿರಿ.
ರಾಹುಕಾಲ: 12:00 ರಿಂದ 01:30
ಗುಳಿಕಕಾಲ: 10:30 ರಿಂದ 12:00
ಯಮಗಂಡಕಾಲ: 07:30 ರಿಂದ 09:00