ಮಹಿಳೆಯರನ್ನು ಮಂಚಕ್ಕೆ ಕರೆದ, ಅಶ್ಲೀಲ ಸಂದೇಶ ಕಳಿಸಿದ ವ್ಯಕ್ತಿಯನ್ನು ನ್ಯಾಷನಲ್ ಹೀರೋ ಮಾಡಲಾಗಿದೆ: ನ್ಯಾಯಾಧೀಶರಿಗೆ Darshan ಪರ ವಕೀಲರ ಮನವರಿಕೆ

ಬೆಂಗಳೂರು: ಗೆಳತಿಗೆ ಸಂದೇಶ ಕಳುಹಿಸಿದ ರೇಣುಕಾಸ್ವಾಮಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ (Darshan) ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಸಂಜೆ ನಾಲ್ಕು ಗಂಟೆಗೆ ಕರ್ನಾಟಕ ಹೈಕೋರ್ಟ್ನಲ್ಲಿ ಮತ್ತೆ ಆರಂಭಿಸಲಾಯಿತು.

ದರ್ಶನ್ ಪರ ಹಿರಿಯ ವಕೀಲರಾದ ಸಿ.ವಿನಾಗೇಶ್ ಅವರು ಪ್ರಕರಣದ ತನಿಖೆಯ ಲೋಪದೋಷಗಳನ್ನು ಮುಂದಿಟ್ಟು ದರ್ಶನ್ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಷಡ್ಯಂತ್ರ ರೂಪಿಸಿದ್ದಾರೆ ಎಂಬ ಕುರಿತು ಪ್ರಬಲ ವಾದ ಮಂಡಿಸುತ್ತಿದ್ದಾರೆ.

ಕೊಲೆಯಾಗಿರುವ ರೇಣುಕಾಸ್ವಾಮಿ ಹಿನ್ನೆಲೆಯ ಬಗ್ಗೆ ಮತ್ತು ಮಹಿಳೆಯರ ಕುರಿತು ರೇಣುಕಾಸ್ವಾಮಿ ನಡೆದುಕೊಂಡ ರೀತಿ ಕುರಿತಾಗಿ ಪೀಠಕ್ಕೆ ನಾಗೇಶ್ ಅವರು ವಿವರಿಸುತ್ತಾ, ಮೃತ ರೇಣುಕಾಸ್ವಾಮಿ 4-1 ಆರೋಪಿ ಪವಿತ್ರಾಗೌಡ ಅವರನ್ನು ಮಂಚಕ್ಕೆ ಕರೆದಿದ್ದ ಮಂಚಕ್ಕೆ ಕರೆದಂತಹ ಅವರನ್ನು ನ್ಯಾಷನಲ್ ಹೀರೋ ಎಂಬಂತೆ ಬಿಂಬಿಸಲಾಗುತ್ತಿದೆ.

ಗೌತಮ್ ಹೆಸರಿನಲ್ಲಿ ರೇಣುಕಾಸ್ವಾಮಿ ಕಳುಹಿಸಿರುವ ಅಶ್ಲೀಲ ಫೋಟೋ ಚಿತ್ರ ಸಂದೇಶಗಳನ್ನು ಪೀಠಕ್ಕೆ ಸಲ್ಲಿಸಿದರು.

ಸಮಾಜದಲ್ಲಿ ಮಹಿಳೆರನ್ನು ಗೌರವಿಸದ ವ್ಯಕ್ತಿ ರೇಣುಕಾಸ್ವಾಮಿಯನ್ನು ಹೀರೋ, ನಮ್ಮ ಕಕ್ಷಿದಾರ ದರ್ಶನ್‌ರನ್ನು ಖಳನಾಯಕನಂತೆ ಸಮಾಜದಲ್ಲಿ ಬಿಂಬಿಸಲಾಗುತ್ತಿದೆ. ಇನ್ನು ರೇಣುಕಾಸ್ವಾಮಿಯ ಹತ್ಯೆಯಾದ ನಂತರದಲ್ಲಿ ಮೃತದೇಹ ಪತ್ತೆಯಾಗಿರುವುದು ಮತ್ತು ಪ್ರಕರಣ ದಾಖಲಾಗಿರುವ ನಿಧಾನಗತಿಯ ಬಗ್ಗೆ ನಾಗೇಶ್ ಅವರ ಪೀಠದ ಗಮನಕ್ಕೆ ತಂದರು.

ಕೊಲೆ ಮಾಡಲೇಬೇಕು ಎಂಬ ಉದ್ದೇಶದಿಂದ ಕಿಡ್ನಾಪ್ ಮಾಡಿಲ್ಲ. ಸಾಕ್ಷ್ಯ ನಾಶವಾಗಲಿ, ಕೊಲೆ, ಹಲ್ಲೆ ಸುಳ್ಳು ಆರೋಪವನ್ನು ದರ್ಶನ್ ವಿರುದ್ಧ ಮಾಡಲಾಗಿದೆ. IPC ಸೆಕ್ಷನ್ 364 & 302 ಜಾಮೀನುರಹಿತ ಅಪಾದನೆಗಳನ್ನು ಹೊರಿಸಲಾಗಿದೆ IPC 364 ಆರೋಪ ಒಪ್ಪಲಾಗದು. ಇದು ಅಪಹರಣಕ್ಕೆ ಸಂಬಂಧಿಸಿದೆ. ಆದರೆ ರೇಣುಕಾಸ್ವಾಮಿ ಇಲ್ಲಿ ಅಪ್ರಾಪ್ತನಲ್ಲ. ಅವರನ್ನು ಹೊರದೇಶಕ್ಕೆ ಕರೆದುಕೊಂಡು ಹೋಗಿಲ್ಲ.

ಕಿಡ್ಯಾಪ್ ಮಾಡಲು ಯಾವುದೇ ಟೀಂ ಕೂಡ ಮಾಡಿಲ್ಲ ಈ ಬಗ್ಗೆ ಚಾರ್ಜ್ ಶೀಟ್‌ನಲ್ಲೂ ಸಾಕ್ಷಿ ಉಲ್ಲೇಖಿಸಿಲ್ಲ. ನಾಲ್ವರು ಸ್ನೇಹಿತರ ಜೊತೆ ಊಟಕ್ಕೆ ಹೋಗುತ್ತಿರುವುದಾಗಿ ತಾಯಿ ಜೊತೆ ಖುದ್ದು ರೇಣುಕಾಸ್ವಾಮಿ ಹೇಳಿದ್ದಾನೆ ಎಂದು ರೇಣುಕಾಸ್ವಾಮಿಯವರ ತಂದೆ ಕಾಶಿನಾಥಯ್ಯ ಅವರ ಹೇಳಿಕೆಯನ್ನು ಉಲ್ಲೇಖಿಸುತ್ತಾ ನಾಗೇಶ್ ಅವರು ಸಂಕ್ಷಿಪ್ತವಾಗಿ ಪೀಠಕ್ಕೆ ವಿವರ ಸಲ್ಲಿಸಿದರು.

ಹಗ್ಗ ಮರದ 2 ರೆಕ್ಕೆಯನ್ನು ಹತ್ಯೆ ಸ್ಥಳದಲ್ಲಿ ಸಾಕ್ಷ್ಯವಾಗಿ ಪ್ರಾಸಿಕ್ಯೂಷನ್ ಜಪ್ತಿ ಮಾಡಿದ್ದಾರೆ. ಇನ್ನು ಪಟ್ಟಣಗೆರೆ ಶೆಡ್ಗೆ ಜೂನ್ 9ರಂದು ಬೀಗ ಹಾಕಿ ತಮ್ಮ ಬಳಿ ಇಟ್ಟುಕೊಂಡಿದ್ದರು.

ಜೂ.1ರಂದು ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಜೂ.12ದು ಶೆಡ್ಗೆ ತನಿಖಾಧಿಕಾರಿಗಳು ಭೇಟಿ ನೀಡಿದ್ದರು. ಇದಕ್ಕೂ ಮುನ್ನ 3 ದಿನ ಸುಮ್ಮನೇ ಸಮಯ ವ್ಯರ್ಥ ಮಾಡಿದ್ದಾರೆ. ವಶಕ್ಕೆ ಪಡೆದ ವಸ್ತುಗಳು ಶೆಡ್‌ನಲ್ಲೇ 3 ದಿನ ಬಿದ್ದಿರುತ್ತವೆ.

ದರ್ಶನ್ ತೊಟ್ಟ ಬಟ್ಟೆಯನ್ನು ಕುಕ್ಕಿ ಕುಕ್ಕಿ ಒಗೆಯಲಾಗಿದೆ ಆದರೂ ರಕ್ತದ ಕಲೆ ದೊರೆತಿದೆ. ದರ್ಶನ್ ಚಪ್ಪಲಿ ತೊಟ್ಟಿದ್ದರೆ ಪೊಲೀಸರು ಶೂ ತರ್ತಾರೆ ಎಂದು ನಾಗೇಶ್ ಅವರು ತನಿಖೆಯ ಹಂತದ ಲೋಪದೋಷಗಳ ಕುರಿತು ವಾದ ಮಂಡಿಸಿದ್ದರು.

ಈ ನಡುವೆ ನ್ಯಾಯಾಧೀಶರು ಅರ್ಜಿಯ ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿದರು.

ರಾಜಕೀಯ

ನಾಳೆ ಬೆಂಗಳೂರಿನಲ್ಲಿ ಜೆಡಿಎಸ್ ಪ್ರತಿಭಟನೆ: ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವಂತೆ ನಿಖಿಲ್ ಕುಮಾರಸ್ವಾಮಿ ಕರೆ

ನಾಳೆ ಬೆಂಗಳೂರಿನಲ್ಲಿ ಜೆಡಿಎಸ್ ಪ್ರತಿಭಟನೆ: ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವಂತೆ ನಿಖಿಲ್ ಕುಮಾರಸ್ವಾಮಿ ಕರೆ

ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ.. ಇದು ನಮ್ಮ ಸ್ಲೋಗನ್ ಅಲ್ಲ, ಇದು ಕನ್ನಡಿಗರ ಭಾವನೆ. ಇದು ಜೆಡಿಎಸ್ (JDS) ಪಕ್ಷದ ದನಿಯಲ್ಲ,

[ccc_my_favorite_select_button post_id="105188"]
ಸಂಸದ ಡಾ.ಕೆ ಸುಧಾಕರ್ ಅವರಿಂದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಸಂಸದ ಡಾ.ಕೆ ಸುಧಾಕರ್ ಅವರಿಂದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ 40.50 ಲಕ್ಷ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಿಕ್ಕಬಳ್ಳಾಪುರ ಸಂಸದರಾದ ಡಾ.ಕೆ ಸುಧಾಕರ್ (Dr.K Sudhakar)

[ccc_my_favorite_select_button post_id="105198"]
ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ರಾಮೇಶ್ವರಂ: ತಮಿಳುನಾಡಿನ ಪಂಬನ್ ಮತ್ತು ಹಿಂದೂ ಮಹಾಸಾಗರದಲ್ಲಿನ ದ್ವೀಪದ ರಾಮೇಶ್ವರಂ ನಗರವನ್ನು ಸಂಪರ್ಕಿಸುವ ಪಂಬನ್ ವರ್ಟಿಕಲ್ ಲಿಫ್ಟ್ (ಮೇಲ್ಮುಖ ತೆರೆದುಕೊಳ್ಳುವ) ಪಂಬನ್ ಸೇತುವೆಯನ್ನು (Pamban pridge) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ 12.30ರಲ್ಲಿ

[ccc_my_favorite_select_button post_id="105011"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಚೆಸ್ ಮೈಗೂಡಿಸಿಕೊಳ್ಳುವ ಮಕ್ಕಳು ಶಿಸ್ತನ್ನು ಕಲಿಯುತ್ತಾರೆ: ಡಿಕೆ ಶಿವಕುಮಾರ್

ಚೆಸ್ ಮೈಗೂಡಿಸಿಕೊಳ್ಳುವ ಮಕ್ಕಳು ಶಿಸ್ತನ್ನು ಕಲಿಯುತ್ತಾರೆ: ಡಿಕೆ ಶಿವಕುಮಾರ್

ರಾಜಕೀಯ ಚೆಸ್ ಆಟವಿದ್ದಂತೆ ಎಂದು ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ನಾವು ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆಯಿಂದ ಇರಬೇಕು. ರಾಜಕೀಯದಲ್ಲಿ DK Shivakumar

[ccc_my_favorite_select_button post_id="105178"]
ಸಾಲ ಬಾಧೆ: ತೊಂಡೇಬಾವಿಯಲ್ಲಿ ಯುವ ರೈತ ಆತ್ಮಹತ್ಯೆ

ಸಾಲ ಬಾಧೆ: ತೊಂಡೇಬಾವಿಯಲ್ಲಿ ಯುವ ರೈತ ಆತ್ಮಹತ್ಯೆ

ಪವನ್ ತನ್ನ ತಂದೆಯ ಜೊತೆಯಲ್ಲಿ ಕೃಷಿಯಲ್ಲಿ ತೊಡಗಿದ್ದ, ಕಳೆದ ಮೂರು ವರ್ಷದಿಂದ ಸರಿಯಾಗಿ ಬೆಳೆ ಬಾರದೇ ಪವನ್ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದರು. Suicide

[ccc_my_favorite_select_button post_id="105172"]
Video: ಹೆಲಿಕಾಪ್ಟರ್ ಪತನ.. ಮಕ್ಕಳು ಸೇರಿ 6 ಮಂದಿ ದುರ್ಮರಣ

Video: ಹೆಲಿಕಾಪ್ಟರ್ ಪತನ.. ಮಕ್ಕಳು ಸೇರಿ 6 ಮಂದಿ ದುರ್ಮರಣ

ಹೆಲಿಕಾಪ್ಟರ್‌ನ ಮುಖ್ಯ ರೋಟರ್‌ಗಳು ಬಾಲ ಬೂಮ್‌ಗೆ ಬಡಿದು ತುಂಡಾಗಿರುವ ಸಾಧ್ಯತೆ ಇದೆ. helicopter

[ccc_my_favorite_select_button post_id="105183"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!