ದೈನಂದಿನ ರಾಶಿ ಭವಿಷ್ಯ: ಶುಕ್ರವಾರ, ಜುಲೈ 8, 2022| astrology predictions
ಮೇಷ ರಾಶಿ: ಕ್ಷಣಕ್ಷಣಕ್ಕೂ ಆತಂಕ ಎದುರಾಗುವ ಘಟನೆ ನಡೆಯಲಿದೆ. ಎಚ್ಚರವಿರಲಿ. ಹೊಗಳಿಕೆಗೆ ಮರುಳಾಗದಿರಿ. ಹಂತ ಹಂತವಾಗಿ ಯಶಸ್ಸು ಕಂಡು ಬಂದೀತು.
ವೃಷಭ ರಾಶಿ: ಭೂ ವ್ಯವಹಾರದಲ್ಲಿ ತೊಡಗಿಸಿಕೊಂಡ ನಿಮಗೆ ಅಲ್ಪ ಪ್ರಮಾಣದ ಲಭವಾಗಲಿದೆ. ಮುಖ್ಯವಾಗಿ ದೂರ ಸಂಚಾರ, ಪ್ರಯಾಣದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವಿದೆ. ದಿನಾಂತ್ಯದಲ್ಲಿ ಸಂಭ್ರಮವಿದೆ.
ಮಿಥುನ ರಾಶಿ: ದೂರ ಪ್ರಯಾಣ ಯೋಗ ನಿಮಗೆ ಒದಗಿ ಬರಲಿದೆ. ಸದುಪಯೋಗ ಮಾಡಿಕೊಳ್ಳಿ. ಕೋರ್ಟು ಕಚೇರಿ ಕೆಲಸದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ, ಮುಖ್ಯವಾಗಿ ಯಾವುದೇ ಕೆಲಸಕಾರ್ಯ ಅರ್ಧಕ್ಕೆ ನಿಂತು ಆರ್ಥಿಕ ಮುಗ್ಗಟ್ಟು ಕಾಡಬಹುದು ಜಾಗರೂಕರಾಗಿರಿ.
ಕಟಕ ರಾಶಿ: ಕೆಲಸದ ಒತ್ತಡದಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಅತ್ಯಂತ ಎಚ್ಚರ. ಕೌಟುಂಬಿಕ ಸಮಸ್ಯೆಗಳು ಕಾಡಬಹುದು. ನೌಕರ ವರ್ಗದವರಿಗೆ ಉತ್ತಮ ಬದಲಾವಣೆ ಕಂಡು ಬರಲಿದೆ.
ಸಿಂಹ ರಾಶಿ: ಹವಾಮಾನ ವೈಪರೀತ್ಯ ದಿಂದಾಗಿ ದೂರ ಪ್ರಯಾಣ ರದ್ದುಗೊಳಿಸಬೇಕಾಗಲಿದೆ. ಹಲವು ಸಂದರ್ಭಗಳಲ್ಲಿ ತಾಳ್ಮೆಯೇ
ಉತ್ತರ ನೀಡಲಿದೆ. ಆರೋಗ್ಯದ
ಬಗ್ಗೆ ಹೆಚ್ಚಿನ ಗಮನ ವಹಿಸಿ.
ಕನ್ಯಾ ರಾಶಿ: ಸರ್ಕಾರಿ ಕೆಲಸದಲ್ಲಿ ಇರುವ ವ್ಯಕ್ತಿಗಳಿಗೆ ಶೀಘ್ರ ಶುಭ ಸುದ್ದಿ ಕಿವಿಗೆ ಬೀಳಲಿದೆ. ಸಿಟ್ಟಿನ ನಿರ್ಣಯಗಳಿಂದ ಅನಾವಶ್ಯಕ ತೊಂದರೆ ಅನುಭವಿಸುವಿರಿ ಸಂಯಮದಿಂದ ವ್ಯವಹರಿಸಿ.
ತುಲಾ ರಾಶಿ: ನಿಮ್ಮನ್ನು ನಿರ್ಲಕ್ಷ್ಯ ಮಾಡುವವರ ವಿರುದ್ಧ ಹೆಚ್ಚು ಗಮನಹರಿಸಬೇಡಿ. ಉದ್ಯೋಗಿಗಳಿಗೆ ವೇತನ ಹೆಚ್ಚಳ ತರಲಿದೆ.
ವೃಶ್ಚಿಕ ರಾಶಿ: ಹಲವು ದಿನಗಳಿಂದ ಮಾಡ ಬೇಕು ಎಂದುಕೊಂಡಿದ್ದ ಕೆಲಸ ಯಶಸ್ವಿಯಾಗಲಿದೆ. ಎಚ್ಚರವಿರಲಿ. ಸಂಧಿ ನೋವು ಮೂಳೆ ಮುರಿತ, ಅವಘಡಗಳಿಗೆ ಕಾರಣವಾದೀತು. ಆಲಸ್ಯ,ಉದಾ ಸೀನತೆ ಉಂಟಾಗಬಹುದು.
ಧನಸ್ಸು ರಾಶಿ: ಕೌಟುಂಬಿಕ ಕಲಹ ಬೀದಿಗೆ ಬರುವ ಸಾಧ್ಯತೆ ಇದ್ದು, ಮಾತಿಗಿಂತ ಮೌನವಾಗಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಕಂಡುಕೊಳ್ಳಲು ಇದು ಸಕಾಲ. ವ್ಯಾಪಾರ ವ್ಯವಹಾರಗಳು ಚೇತರಿಕೆ ಕೊಟ್ಟು ಆದಾಯ ವೃದ್ಧಿಸಲಿವೆ.
ಮಕರ ರಾಶಿ: ಯಾರೋ ಮಾಡಿದ ತಪಿಗೆ ನಿಮಗೆ ಸಣ್ಣದೊಂದು ಶಿಕ್ಷೆ ಉಂಟಾಗುವ ಸಾಧ್ಯತೆ. ಮುಖ್ಯವಾಗಿ ನಿಮ್ಮ ವಿಶ್ವಾಸದ ದುರುಪಯೋಗ ವಾಗದಂತೆ ನಿಮ್ಮಲ್ಲಿ ಎಚ್ಚರವಿರಲಿ. ಮಾತಿನಿಂದ ಅನಾವಶ್ಯಕ ಮನಸ್ತಾಪ ವಾಗದಂತೆ ಜಾಗ್ರತೆ ವಹಿಸಿರಿ.
ಕುಂಭ ರಾಶಿ: ಅನವಶ್ಯಕ ವಿಚಾರಗಳಿಂದ ಆದಷ್ಟು ದೂರ ಇರಿ. ಎಲ್ಲವೂ ಬೇಕೆಂಬ ಅತಿಯಾಸೆ ಬೇಡ. ಕೃಷಿ ಹಾಗೂ ರೈತವರ್ಗಕ್ಕೆ ಸಕಾಲದಲ್ಲಿ ಬೆಳೆಗಳ ವಿಲೇವಾರಿ ಧನಲಾಭವನ್ನು ಕೊಡಲಿದೆ. ಆರೋಗ್ಯದಲ್ಲಿ ಜಾಗ್ರತೆ.
ಮೀನ ರಾಶಿ: ಮಾನಸಿಕ ಕಿರಿಕಿರಿಯಿಂದ ಬಳಲುವ ಸಾಧ್ಯತೆ ಇದೆ. ಹೆಚ್ಚು ಮಾತನಾಡದಿರಿ. ಹಳೆಯ ಬಾಕಿ ಕೆಲಸಗಳು ಅತೀ ಶೀಘ್ರದಲ್ಲಿ ನೆರವೇರಲಿವೆ. ರಾಜಕೀಯ ವರ್ಗದವರಿಗೆ ಉತ್ತಮ ಭವಿಷ್ಯವಿದೆ.
ರಾಹುಕಾಲ: 10:30 ರಿಂದ 12:00
ಗುಳಿಕಕಾಲ: 07:30 ರಿಂದ 09:00
ಯಮಗಂಡಕಾಲ: 03:00 ರಿಂದ 04:30