ದೊಡ್ಡಬಳ್ಳಾಪುರ: ಮಾಕಳಿ ದುರ್ಗ ಮತ್ತು ತೊಂಡೆಬಾವಿ ರೈಲು ನಿಲ್ದಾಣಗಳ ನಡುವೆ ಅಪರಿಚಿತ ಸುಮಾರು 27 ವರ್ಷದ ವ್ಯಕ್ತಿಯೋರ್ವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತನ ಹೆಸರು ಮತ್ತು ವಾರಸುದಾರರು ಪತ್ತೆ ಆಗಿರುವುದಿಲ್ಲ.
ಮೃತನ ಚಹರೆ: ಮೃತರು ಸುಮಾರು 5.5ಅಡಿ ಎತ್ತರ, ಸಾಧಾರಣ ಗೋಧಿ ಮೈಬಣ್ಣ, ಕೋಲು ಮುಖ, ಗಿಡ್ಡನೆಯ ಮೂಗು, ತಲೆಯಲ್ಲಿ ಅರ್ಧ ಇಂಚು ಉದ್ದದ ಕಪ್ಪನೆಯ ತಲೆ ಕೂದಲು, ಸಣ್ಣನೆಯ ಗಡ್ಡ ಮೀಸೆ, ಸಾಧಾರಣ ಶರೀರವನ್ನು ಹೊಂದಿರುತ್ತಾರೆ.
ಮೃತ ಶವದ ಮೈಮೇಲೆ ಕಡು ಆಕಾಶ ನೀಲಿ ತಿಳಿ ಕೆಂಪು ಬಣ್ಣದ ಉದ್ದ ಮತ್ತು ಅಡ್ಡನೆಯ ಗೆರೆಗಳಿರುವ ಚೌಕಳಿ ಶರ್ಟ್, ಬಿಳಿ ಬಣ್ಣದ ಉದ್ದನೆಯ ಗೆರೆಗಳಿರುವ ಶರ್ಟ್, ಕಡು ಕಂದು ಬಣ್ಣದ ಬನಿಯನ್, ತಿಳಿಹಸಿರು ಬಣ್ಣದ ಬರ್ಮುಡಾ ನಿಕ್ಕರ್ ತೊಟ್ಟಿರುತ್ತಾರೆ.
ಮೃತನ ವಾರಸುದಾರರು ಇದ್ದಲ್ಲಿ ಯಶವಂತಪುರ ರೈಲ್ವೆ ಪೊಲೀಸ್ ಠಾಣೆ ಪಿಎಸ್‌ಐ ಜಗದೀಶ್.ಆರ್.ಪಿ., ಮೊಬೈಲ್ ಸಂಖ್ಯೆ: 9480 8021 18
ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್ ಹೊರಉಪ ಠಾಣೆ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಶ್ವತ್ಥ.ಜಿಎನ್ Ph no 9480 8021 43 ಇವರುಗಳನ್ನು ಸಂಪರ್ಕಿಸಬೇಕಾಗಿ ಪ್ರಕಟಣೆ ತಿಳಿಸಿದೆ.