ಬೆಂ.ಗ್ರಾ ಜಿಲ್ಲೆ: ಎಲ್ಲಾ ಪೋಸ್ಟ್ ಆಫೀಸ್ ಸೇವೆಗಳು ಸಾರ್ವಜನಿಕರಿಗೆ ಸುಲಭವಾಗಿ ಕೈಗೆಟುಕುವಂತೆ ಮಾಡಲು ಗ್ರಾಮಒನ್ (grama one) ಕೇಂದ್ರದಲ್ಲಿ ಭಾರತೀಯ ಪೋಸ್ಟ್ ಆಫೀಸ್ ಸೇವೆಗಳನ್ನು ಕಲ್ಪಿಸಲಾಗಿದ್ದು ಸಾರ್ವಜನಿಕರು ಹತ್ತಿರದ ಗ್ರಾಮಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಂಚೆ ಸೇವೆಗಳ ಸೌಲಭ್ಯ ಪಡೆಯಬಹುದಾಗಿದೆ.
ದೊಡ್ಡಬಳ್ಳಾಪುರ ಟೌನ್ ನಲ್ಲಿರುವ ದೊಡ್ಡಬಳ್ಳಾಪುರ ಶಾಖೆಯ ಪೋಸ್ಟ್ ಆಫೀಸ್ ಮುಂಭಾಗ ಗ್ರಾಮ ಒನ್ ಕೇಂದ್ರಗಳಲ್ಲಿ ಪೋಸ್ಟ್ ಆಫೀಸ್ ಸೇವೆಗಳು ಪ್ರಾರಂಭದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಅಂಚೆ ಕಚೇರಿಯ ಐಪಿಪಿಬಿ ವ್ಯವಸ್ಥಾಪಕರಾದ ಶ್ರವಣಕುಮಾರ, ಬೆಂಗಳೂರು ಗ್ರಾಮಾಂತರ ಯೋಜನಾ ವ್ಯವಸ್ಥಾಪಕರಾದ (ಡಿಪಿಎಂ) ಪ್ರೇಮಕುಮಾರ, ಜಿಲ್ಲೆಯ ಗ್ರಾಮಒನ್ ಕೇಂದ್ರಗಳ ಪ್ರಾಂಚೈಸಿಗಳು ಉಪಸ್ಥಿತರಿದ್ದರು.