ಶುಕ್ರವಾರ, ನವೆಂಬರ್ 15, 2024, ದೈನಂದಿನ ರಾಶಿ ಭವಿಷ್ಯ| / astrology predictions
ಮೇಷ ರಾಶಿ: ನೂತನ ಆಲೋಚನೆಗಳು ನಿಮ್ಮಿಂದ ಹರಿದು ಬರಲಿದೆ. ಸಂಗಡಿಗರು ಸಹಕಾರ ತೋರುವುದರಿಂದ ನಿರಾತಂಕ ಜೀವನ ಇರುವುದು. ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು.
ಆರ್ಥಿಕ ಸಂಕಷ್ಟ ದೂರಾಗುವುದು.
ವೃಷಭ ರಾಶಿ: ಉದ್ಯೋಗದಲ್ಲಿ ಬಡ್ತಿ ದೊರೆಯಲಿದ್ದು, ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ವ್ಯಾಪಾರದ ವಿಷಯದಲ್ಲಿ ಮೋಸವಾಗುವ ಸಾಧ್ಯತೆ ಇದೆ. ಸಾಲಗಾರರು ಸಹಕಾರ ತೋರುವರು.
ಮಿಥುನ ರಾಶಿ: ಹೊಸ ಪ್ರದೇಶಕ್ಕೆ ಹೋಗುವ ಅವಕಾಶವೊಂದು ನಿಮಗೆ ಒದಗಿ ಬರಲಿದೆ. ಕೋರ್ಟನಲ್ಲಿ ಇರುವ ನ್ಯಾಯ ಬಗೆಹರಿಯುವುದು. ಆರ್ಥಿಕ ಸುಧಾರಣೆ ಕಂಡುಬರುವುದು. ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಮೂಡುವುದು. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಕಂಡುಬರುವುದು.
ಕಟಕ ರಾಶಿ: ಎಲ್ಲರೂ ನಿಮ್ಮ ಮಾತೇ ಕೇಳಬೇಕು ಎಂಬ ಹಠ ಬಿಟ್ಟು ವಿಶಾಲವಾಗಿ ಚಿಂತನೆ ಮಾಡಿ. ಉನ್ನತ ವ್ಯಾಸಂಗದ ಯೋಗವಿದೆ. ವಿದೇಶಾಗಮನ, ವ್ಯವಹಾರಿಕ ತಿರುಗಾಟದ ಸಾಧ್ಯತೆ ಇದೆ. ಶತ್ರುಬಾಧೆ ಕಂಡುಬರುವುದು. ಆರೋಗ್ಯದ ಮೇಲೆ ನಿಗಾ ಇರಲಿ.
ಸಿಂಹ ರಾಶಿ: ನಿಮ್ಮದಲ್ಲದ ತಪ್ಪಿಗೆ ಸಣ್ಣ ಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ. ಅತ್ಯಂತ ಎಚ್ಚರ ಅಗತ್ಯ. ನಿಮ್ಮ ಕಾರ್ಯ ಪ್ರವೃತ್ತಿಯ ಸಾಧನೆಯ ಮೂಲಕ ವಿಶೇಷ ವ್ಯಕ್ತಿಯನ್ನು ಸೆಳೆಯುತ್ತೀರಿ.
ಕನ್ಯಾ ರಾಶಿ: ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ದೊಡ್ಡಮೊತ್ತದ ಹಣಹೂಡಿಕೆ ಈಗ ಬೇಡ.
ತುಲಾ ರಾಶಿ: ಹಲವು ದಿನಗಳ ನಂತರ ಮಾಡಬೇಕು ಎಂದುಕೊಂಡಿದ್ದ ಕೆಲಸ ಯಶಸ್ವಿಯಾಗಲಿದೆ. ವ್ಯಾಪಾರಿಗಳು ಇಂದು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾಗುತ್ತದೆ ಮತ್ತು ನಿಮ್ಮ ವ್ಯಾಪಾರವು ಬೆಳೆಯುತ್ತದೆ.
ವೃಶ್ಚಿಕ ರಾಶಿ: ಮಾಡಿದ ತಪ್ಪನ್ನೇ ಪುನಃ ಪುನಃ ಮಾಡಿ ಅಪಹಾಸ್ಯಕ್ಕೆ ಒಳಗಾಗಬೇಡಿ. ಎಚ್ಚರ. ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಒಪ್ಪಂದಗಳ ಮಾಡಿಕೊಳ್ಳಲು ಒತ್ತು ನೀಡಿ.
ಧನಸ್ಸು ರಾಶಿ: ಸಮಾಧಾನದಿಂದ ಕಾರ್ಯ ನಿರ್ವಹಿಸಿದರೆ ಜಯ ನಿಮಗೆ ಕಟ್ಟಿಟ್ಟ ಬುತ್ತಿ ಎಂಬ ಅರಿವಿರಲಿ. ಸ್ಪರ್ಧೆ ಹೆಚ್ಚಾದಂತೆ ಕೆಲಸದ ವೇಳಾಪಟ್ಟಿಯು ತೀವ್ರವಾಗಿರುತ್ತದೆ. ಸೆಮಿನಾರ್‌ಗಳು ಮತ್ತು ಪ್ರದರ್ಶನಗಳು ನಿಮಗೆ ಹೊಸ ಜ್ಞಾನ ಮತ್ತು ಸಂಪರ್ಕಗಳನ್ನು ಒದಗಿಸುತ್ತವೆ.
ಮಕರ ರಾಶಿ: ಉದ್ಯೋಗದಲ್ಲಿ ಬಡ್ತಿ ದೊರೆಯಲಿದ್ದು, ಶ್ರಮಕ್ಕೆ ತಕ್ಕ ಫಲ ದೊರಯಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ.
ಕುಂಭ ರಾಶಿ: ಸಮಾನ ಮನಸ್ಕರು ಸೇರಿ ಹೊಸ ಸಾಧನೆ ಮಾಡಲಿದ್ದು, ಎಲ್ಲರಿಂದ ಶ್ಲಾಘನೆ. ಆರ್ಥಿಕ ಮಟ್ಟವೂ ಏರಿಕೆಯಾಗಲಿದ್ದು, ಸ್ಥಿರಪ್ರಾಪ್ತಿ ಯೋಗವಿದೆ, ಸಂಸಾರ ಸುಖ, ಸಂಬ್ರಮಗಳ ವಾತಾವರಣ ಮೂಡಲಿದೆ. ಶುಭ ಕಾರ್ಯ
ಪ್ರಯತ್ನ ಫಲಕೊಡುವ ಯೋಗವಿದೆ.
ಮೀನ ರಾಶಿ: ಭೂ ವ್ಯವಹಾರದಲ್ಲಿ ಲಾಭ ಗಳಿಸುವುವಿರಿ. ಹಲವು ದಿನಗಳ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ನಿಮ್ಮ ಹಾದಿಯಲ್ಲಿ ಇತರರು ಬರದಂತೆ ನೋಡಿಕೊಳ್ಳಿ. ಗೊಂದಲಕ್ಕೊಳಕಾಗದಿರಿ. ದೃಢ ನಿರ್ಧಾರವಿರಲಿ. ಮುಂದೆ ದೊಡ್ಡ ಸವಾಲುಗಳು ಎದುರಾಗಲಿದ್ದು, ಅದನ್ನು ಎದುರಿಸಲು ಸಿದ್ಥರಾಗಿರಿ.
ರಾಹುಕಾಲ: 10:47 ರಿಂದ 12:21
ಗುಳಿಕಕಾಲ: 07:39 ರಿಂದ 09:13
ಯಮಗಂಡಕಾಲ: 03:29 ರಿಂದ 05:03