ಚಿಕ್ಕಬಳ್ಳಾಪುರ: ನೀರಿನ ಕುಂಟೆಯಲ್ಲಿ ಈಜಾಡಲು ಹೋದ ಮೂವರು ನೀರುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ದುರ್ದೈವಿಗಳನ್ನು ರಂಜಿತ್(27), ಅಭಿಲಾಷ್ (21) ಹಾಗೂ ರಮ್ಯ (24) ವರ್ಷ ಎಂದು ಗುರುತಿಸಲಾಗಿದೆ.
ಮೃತ ರಮ್ಯ ಎಂಬಿಎ ವಿದ್ಯಾರ್ಥಿನಿ. ಈಕೆಯ ದೊಡ್ಡಪ್ಪ ಮತ್ತು ಚಿಕ್ಕಪ್ಪನ ಮಕ್ಕಳಾದ ಅಭಿಲಾಷ್ ಮತ್ತು ಎಸ್. ರಂಜಿತ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮೂವರು ದೀಪಾವಳಿ ಹಬ್ಬಕ್ಕೆಂದು ಸ್ವಗ್ರಾಮಕ್ಕೆ ಆಗಮಿಸಿದ್ರು.. ಕುಂಟೆಯಲ್ಲಿ ಈಜಲು ಹೋಗಿ ಈಜುಬಾರದೆ ಮೂವರು ನೀರುಪಾಲಾಗಿದ್ದಾರೆ.
ಘಟನೆಯ ನಂತರ ಸ್ಥಳೀಯರು, ಆಗ್ನಿಶಾಮಕ ದಳ ಸಿಬ್ಬಂದಿ ನೆರವಿನೊಂದಿಗೆ ಮೃತ ದೇಹಗಳನ್ನು ಹೊರ ತೆಗೆದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಪೇರೇಸಂದ್ರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.