ಚಿಕ್ಕಬಳ್ಳಾಪುರ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯರಾದ ಡಾ.ಕೆ.ಸುಧಾಕರ್ ಅವರನ್ನು ಕಾಮನ್‌ವೆಲ್ತ್ ಸಂಸದೀಯ ಸಂಘದ ಮಧ್ಯಂತರ ಮಂಡಳಿಗೆ ನಾಮನಿರ್ದೇಶನ ಮಾಡಿದ್ದಾರೆ.
ಕಾಮನ್‌ವೆಲ್ತ್ ಸಂಸದೀಯ ಸಂಘದ 67ನೇ ವಾರ್ಷಿಕ ಸಮ್ಮೇಳನ ನವೆಂಬರ್ 3 ರಿಂದ 8 ರವರೆಗೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯಲಿದೆ.
ಸಂಸದ ಡಾ.ಕೆ.ಸುಧಾಕರ್ ಅವರು, ಮಂಡಳಿಯ ಸದಸ್ಯರಾಗಿ, ಕಾಮನ್‌ವೆಲ್ತ್ ಸಂಸದೀಯ ಸಂಘದ ಸಂವಿಧಾನದ ತಿದ್ದುಪಡಿ ಮಾಡುವ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸರ್ಕಾರದ ನೀತಿ ನೀತಿ ಎತ್ತಿಹಿಡಿಯುವೆ: ಈ ಕುರಿತು ಸಂಸದ ಡಾ.ಕೆ.ಸುಧಾಕರ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ಪೀಕರ್‌ಓಂ ಬಿರ್ಲಾ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಕಾಮನ್‌ವೆಲ್ತ್ ಸಂಘದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ. ಭಾರತ ಸರ್ಕಾರದ ನೀತಿಗಳನ್ನು ಎತ್ತಿ ಹಿಡಿಯಲು ನಾನು ಬದ್ಧನಾಗಿದ್ದೇನೆ. ಈ ಸಮ್ಮೇಳನವು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರು ತಂದುಕೊಡಲಿದ್ದು, ”ವಿಶ್ವ ಬಂಧು” ಎಂಬ ಹೆಗ್ಗಳಿಕೆ ಇನ್ನಷ್ಟು ಹರಡಲಿದೆ ಎಂದು ಹೇಳಿದ್ದಾರೆ.
ಸಮ್ಮೇಳನದಲ್ಲಿ, ‘ಮಾನದಂಡ ಮತ್ತು ಮಾರ್ಗಸೂಚಿಗಳು, ಉತ್ತಮ ನಡಾವಳಿಗಳನ್ನು ಅನುಸರಿಸುವ ಮೂಲಕ ಸಂಸದೀಯ ಸಂಸ್ಥೆಗಳ ಬಲವರ್ಧನೆ’ ಎಂಬ ವಿಷಯದ ಕುರಿತಾದ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಸಂಸದ ಡಾ.ಕೆ.ಸುಧಾಕರ್ ವಹಿಸಲಿದ್ದಾರೆ.