ನಿಖಿಲ್ ಕುಮಾರಸ್ವಾಮಿಯವರನ್ನು ಗೆಲ್ಲಿಸುವ ಕರ್ತವ್ಯ ನಮ್ಮೆಲ್ಲರದೂ ಇದೆ: ಬಿವೈ ವಿಜಯೇಂದ್ರ

ಬೆಂಗಳೂರು: ರಾಜ್ಯ ಸರಕಾರ ಮಣ್ಣು ತಿನ್ನುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿವೈ ವಿಜಯೇಂದ್ರ ಅವರು ಆಕ್ಷೇಪಿಸಿದರು.

ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತಲತಲಾಂತರದಿಂದ ಇದ್ದ ಪಿತ್ರಾರ್ಜಿತ ಆಸ್ತಿಯನ್ನು ರಾತ್ರೋರಾತ್ರಿ ವಕ್ಫ್ ಪ್ರಾಪರ್ಟಿ ಎಂದು ಘೋಷಿಸಿದರೆ ರೈತರು ಬೀದಿಗೆ ಬಂದು ಏನು ಮಾಡಬೇಕು ಎಂದು ಪ್ರಶ್ನಿಸಿದರು.

ನಾವಿದರ ವಿರುದ್ಧ ಹೋರಾಟ ಮಾಡುತ್ತೇವೆ, ರೈತರಿಗೆ ಧ್ವನಿಗೂಡಿಸುತ್ತೇವೆ; ಅವರ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದರೆ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ನಮ್ಮ ಮೇಲೆ ಆರೋಪ ಮಾಡುತ್ತಾರೆ ಎಂದು ಟೀಕಿಸಿದರು.

ಈ ರೀತಿ ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ, ಈ ದೇಶವನ್ನು ಜಾತಿ, ಧರ್ಮದ ಆಧಾರದಲ್ಲಿ ವಿಭಜಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಮಾಡುತ್ತ ಬರುತ್ತಿದೆ. ಅದೇನಿಟ್ಟಿನಲ್ಲಿ ಜಮೀರ್ ಅಹ್ಮದ್ ನೇತೃತ್ವದಲ್ಲಿ ಇವತ್ತು ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ನಡೆದಿದೆ ಎಂದು ಆರೋಪಿಸಿದರು. ಅವರ ನೇತೃತ್ವದಲ್ಲೇ ರೈತರಿಗೆ ಅನ್ಯಾಯ ಮಾಡುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು.

ನಿನ್ನೆ ಸಚಿವರು 120 ಜನ ರೈತರಿಗೆ ನೋಟಿಸ್ ಕೊಟ್ಟಿದ್ದನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಬಿಜೆಪಿ ಹೊಣೆಗಾರನೇ? ಅದಕ್ಕೆ ಬಿಜೆಪಿ ಕಾರಣವೇ ಎಂದು ಕೇಳಿದರು. ಇದನ್ನು ಬಿಜೆಪಿ ಗಟ್ಟಿಯಾಗಿ ತೆಗೆದುಕೊಳ್ಳದೆ ಇದ್ದರೆ ರಾಜ್ಯ ಸರಕಾರದ ಕ್ರಮದಿಂದ ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ರೈತರು ಬೀದಿಗೆ ಬರಬೇಕಾಗುತ್ತಿತ್ತು ಎಂದು ವಿಶ್ಲೇಷಿಸಿದರು.

ಬಿಜೆಪಿ ರೈತರ ಜೊತೆ ದೃಢವಾಗಿ ನಿಲ್ಲಲಿದೆ; ಕಾಂಗ್ರೆಸ್ಸಿನವರು ಈಗ ಟಾಸ್ಕ್ ಫೋರ್ಸ್ ಮಾಡಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಹೋಗಿ ಮನವಿ ಕೊಡಲಿ ಈ ರೀತಿ ಆಟವನ್ನು ಶುರು ಮಾಡಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.

ಬಳಿಕ ಪ್ರಶ್ನೆಗೆ ಉತ್ತರಿಸಿದ ಅವರು, ಮಾಜಿ ಉಪ ಮುಖ್ಯಮಂತ್ರಿ ಮತ್ತು ಹಿರಿಯರಾದ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಬಿಜೆಪಿ ತಂಡ ಈಗಾಗಲೇ ಬಿಜಾಪುರ ತಲುಪಿದೆ. ಬಿಜಾಪುರ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಭೇಟಿ ಕೊಟ್ಟು ರೈತರನ್ನು ಸಂಪರ್ಕಿಸಿ ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡಲಿದ್ದಾರೆ ಎಂದರು.

ಬಿಜೆಪಿ ವಿಚಾರ ಸ್ಪಷ್ಟವಾಗಿದೆ. ರಾಜ್ಯ ಸರಕಾರ ರೈತರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದು, ಬಿಜೆಪಿ ರೈತರ ಪರ ಇದೆ. ನಾವು ಅವರ ಜೊತೆಯಲ್ಲಿದ್ದೇವೆ. ರೈತರ ಈ ಸಮಸ್ಯೆ ಪರಿಹಾರಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು. ಕಾನೂನಿನ ಸಹಾಯ ಸೇರಿ ಯಾವುದೇ ರೀತಿಯ ಸಹಕಾರವನ್ನು ಬಿಜೆಪಿ ಕೊಡಲಿದ್ದು, ಅವರ ಜೊತೆ ಗಟ್ಟಿಯಾಗಿ ನಿಲ್ಲಲಿದೆ ಎಂದು ತಿಳಿಸಿದರು.

ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟ ಅವರು, ನಿಖಿಲ್ ಕುಮಾರಸ್ವಾಮಿಯವರು ಹಿರಿಯರಾದ ಮಾಜಿ ಪ್ರಧಾನಮಂತ್ರಿ ದೇವೇಗೌಡರ ಮೊಮ್ಮಗ ಇರಬಹುದು, ಆದರೆ ಅವರು ಇವತ್ತು ಎನ್‍ಡಿಎ ಅಭ್ಯರ್ಥಿ. ನಿಖಿಲ್ ಕುಮಾರಸ್ವಾಮಿಯವರನ್ನು ಗೆಲ್ಲಿಸುವ ಕರ್ತವ್ಯ ನಮ್ಮೆಲ್ಲರದೂ ಇದೆ. ಯಾವ ರೀತಿ ರಾಜಕಾರಣದಲ್ಲಿ ಹುಚ್ಚುಚ್ಚಾಗಿ ಆಡಿ ಪಕ್ಷ ಬಿಟ್ಟು ಹೋಗಿದ್ದಾರೆ, ಇವೆಲ್ಲವನ್ನೂ ಆ ಕ್ಷೇತ್ರದ ಜನರೂ ಗಮನಿಸುತ್ತಿದ್ದಾರೆ. ಈ ವಯಸ್ಸಿನಲ್ಲೂ ಮಾಜಿ ಪ್ರಧಾನಮಂತ್ರಿ ದೇವೇಗೌಡರ ಉತ್ಸಾಹವನ್ನು ಮೆಚ್ಚಿಕೊಳ್ಳಬೇಕು.

ಯುವಕರಿಗೂ ದೇವೇಗೌಡರು ಪ್ರೇರಣೆ. ಅವರು ಬಂದು ಪ್ರಚಾರ ಮಾಡುತ್ತಾರೆಂದರೆ ಕಾಂಗ್ರೆಸ್ ಪಕ್ಷದವರಿಗೆ ಆತಂಕ ಶುರುವಾಗಿದೆ. ದೇವೇಗೌಡರು ಬಂದರೆ ಆ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಅನ್ನುವ ಸತ್ಯ ಅವರಿಗೆ ಅರ್ಥವಾಗಿದೆ. ಹಾಗಾಗಿ ಈ ರೀತಿ ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಯತ್ನಾಳ್ ಆಕ್ರೋಶಕ್ಕೆ ಮಣಿದ ವಿಜಯೇಂದ್ರ..!

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಂಬಂಧ ಏಕಸದಸ್ಯ ಆಯೋಗ ರಚಿಸಿದ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒಳ ಮೀಸಲಾತಿ ವಿಚಾರದಲ್ಲಿ ಪ್ರಾಮಾಣಿಕತೆ ಇದ್ದರೆ, ಅವರಿಗೆ ಕಾಂತರಾಜ್ ವರದಿ ಕುರಿತು ಗಂಭೀರತೆ ಇರುತ್ತಿದ್ದರೆ ಬಹಳಷ್ಟು ಹಿಂದೆಯೇ ಅವರು ಇದರ ಕುರಿತು ಕ್ರಮ ಕೈಗೊಳ್ಳುತ್ತಿದ್ದರು.

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷವು ರಾಜಕೀಯ ಲಾಭ ಪಡೆಯುವ ಕುರಿತು ಯೋಚಿಸುತ್ತದೆ. ಈ ವಿಚಾರದಲ್ಲಿ ಹೆಚ್ಚು ಗೊಂದಲ ಮೂಡಿಸುವ ಬಗ್ಗೆ ಅವರು ಪ್ರಯತ್ನಿಸುತ್ತಾರೆ.

ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಪ್ರಾಮಾಣಿಕತೆಯನ್ನು ಹೊಂದಿಲ್ಲ ಎಂಬುದು ನನ್ನ ಭಾವನೆ ಎಂದರು. ಉಪ ಚುನಾವಣೆ ಕಾರಣಕ್ಕೆ ಈ ವಿಚಾರವನ್ನು ತರುತ್ತಿದ್ದಾರೆ ಈ ವಿಷಯದಲ್ಲಿ ಅವರಿಗೆ ಬದ್ಧತೆ ಇಲ್ಲ ಎಂದು ನುಡಿದರು.

ರಾಜಕೀಯ

ಎತ್ತಿನ ಬಂಡಿಯಲ್ಲಿ ಮತ ಶಿಕಾರಿ

ಎತ್ತಿನ ಬಂಡಿಯಲ್ಲಿ ಮತ ಶಿಕಾರಿ

ರಾಮನಗರ: ಚನ್ನಪಟ್ಟಣ ಕ್ಷೇತ್ರದ ಮಾರ್ಚನಹಳ್ಳಿಯಲ್ಲಿ NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಎತ್ತಿನ ಬಂಡಿ ಮೂಲಕ ಗ್ರಾಮಕ್ಕೆ ತೆರಳಿ ಮತಯಾಚನೆ ಮಾಡಿದರು. ರಾತ್ರಿ 9 ಗಂಟೆಯಾದ್ರೂ ಸ್ಥಳೀಯ ರೈತರು, ಯುವಕರ ಒತ್ತಾಸೆಯಂತೆ ಎತ್ತಿನಗಾಡಿ ಮೂಲಕ

[ccc_my_favorite_select_button post_id="95174"]
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಗಡಿನಾಡ ಉತ್ಸವ; ಗ್ರಾಮದಲ್ಲಿ ಸಡಗರ, ಸಂಭ್ರಮ

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಗಡಿನಾಡ ಉತ್ಸವ; ಗ್ರಾಮದಲ್ಲಿ ಸಡಗರ,

ಮಡಿಕೇರಿ: ಕೇರಳದ ಬಂದಡ್ಕದಲ್ಲಿ ನಡೆದ ಗಡಿನಾಡ ಅರೆಭಾಷೆ ಉತ್ಸವ ಊರಿಡೀ ಹಬ್ಬದ ವಾತಾವರಣ ಮೂಡಿಸಿತು. ಸಭಾ ಕಾರ್ಯಕ್ರಮಕ್ಕೂ ಮುಂಚಿತವಾಗಿ ನಡೆದ ಮೆರವಣಿಗೆಯಂತು ಇಡೀ ಕಾರ್ಯಕ್ರಮಕ್ಕೆ ಮುಕುಟವಿದ್ದಂತಿತ್ತು. ಬಂದಡ್ಕದ ಆರ್ಟ್ ಆಫ್ ಲಿವಿಂಗ್ ಜ್ಞಾನ ಮಂದಿರದಿಂದ

[ccc_my_favorite_select_button post_id="95102"]
Army dog: ಉಗ್ರರ ದಾಳಿಗೆ ಭಾರತೀಯ ಸೇನೆಯ ಶ್ವಾನ ಫ್ಯಾಂಟಮ್ ದುರ್ಮರಣ..!

Army dog: ಉಗ್ರರ ದಾಳಿಗೆ ಭಾರತೀಯ ಸೇನೆಯ ಶ್ವಾನ ಫ್ಯಾಂಟಮ್ ದುರ್ಮರಣ..!

ಅನ್ನೂರ್: ಜಮ್ಮು ಕಾಶ್ಮೀರದ ಅನ್ನೂರ್ ನಲ್ಲಿ ನಡೆದ ಭಯೋತ್ಪಾದಕರ ಗುಂಡಿನ ದಾಳಿಗೆ ನಾಲ್ಕು ವರ್ಷದ ಫ್ಯಾಂಟಮ್ ಎಂಬ ಆರ್ಮಿ ಶ್ವಾನ (Army dog) ಸಾವನ್ನಪ್ಪಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಭಯೋತ್ಪಾದಕರ ದಾಳಿಗಿರುವ ಹಿನ್ನಲೆ

[ccc_my_favorite_select_button post_id="95119"]
ರೊವಾಂಡಾ ದೇಶದಲ್ಲಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ: ಸ್ಥಳೀಯ ಉದ್ಯಮಿಗಳಿಗೆ ಆಹ್ವಾನ| ಇಂಡಿಯನ್ ಕ್ರೀಡಾ ಶಾಲೆ ಸ್ಥಾಪನೆ: ಸಚಿವ ಸತೀಶ್ ಜಾರಕಿಹೊಳಿ

ರೊವಾಂಡಾ ದೇಶದಲ್ಲಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ: ಸ್ಥಳೀಯ ಉದ್ಯಮಿಗಳಿಗೆ ಆಹ್ವಾನ| ಇಂಡಿಯನ್

ಬೆಳಗಾವಿ, (ಸೆ.9): ರೊವಾಂಡಾ ದೇಶದಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಗಣಿಗಾರಿಕೆ, ಇಂಧನ ಹಾಗೂ ಮೂಲಸೌಕರ್ಯಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಕೈಗಾರಿಕೋದ್ಯಮಿಗಳು ಮತ್ತು ಬಂಡವಾಳ ಹೂಡಿಕೆದಾರರಿಗೆ ಅನುಕೂಲವಾಗುವಂತಹ ಉದ್ಯಮಸ್ನೇಹಿ ವಾತಾವರಣ ಹೊಂದಿದ್ದು, ಇಲ್ಲಿನ ಹೂಡಿಕೆದಾರರಿಗೆ ಮುಕ್ತ ಸ್ವಾಗತವಿದೆ ಎಂದು ಪೂರ್ವ

[ccc_my_favorite_select_button post_id="89581"]

ಕ್ರೀಡೆ

Doddaballapura: ರಾಜ್ಯಮಟ್ಟದ ಯೋಗ ಪಂದ್ಯಾವಳಿಯಲ್ಲಿ 14 ಮಂದಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ..

Doddaballapura: ರಾಜ್ಯಮಟ್ಟದ ಯೋಗ ಪಂದ್ಯಾವಳಿಯಲ್ಲಿ 14 ಮಂದಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ..

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವತಿಯಿಂದ ನಗರದ ದೇವರಾಜ ಅರಸು ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಯೋಗ ಪಂದ್ಯಾವಳಿಯ ಸಮಾರೋಪ ಸಮಾರಂಭ

[ccc_my_favorite_select_button post_id="94463"]
ಯೂಟ್ಯೂಬ್ ಬ್ಲಾಗರ್ ದಂಪತಿ ಶವವಾಗಿ ಪತ್ತೆ..!

ಯೂಟ್ಯೂಬ್ ಬ್ಲಾಗರ್ ದಂಪತಿ ಶವವಾಗಿ ಪತ್ತೆ..!

ತಿರುವನಂತಪುರಂ: ಯೂಟ್ಯೂಬ್‌ನಲ್ಲಿ ಸಾವಿರಾರು ಫಾಲೊವರ್ಸ್ ಹೊಂದಿದ್ದ ಬ್ಲಾಗರ್ ದಂಪತಿ ಕೇರಳದ ತಿರುವನಂತಪುರಂ ನಿಂದ 40 ಕಿಮೀ ಪರಸ್ಸಾಲದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಇಲ್ಲಿನ ಚೆರುವರಕೋಣಂ ಮೂಲದ 45 ವರ್ಷದ ಸೆಲ್ವರಾಜ್ ವೃತ್ತಿಯಲ್ಲಿ ಮೇಸ್ತ್ರಿ ಹಾಗೂ ಅವರ ಪತ್ನಿ 37 ವರ್ಷದ

[ccc_my_favorite_select_button post_id="95052"]
Doddaballapura: ಹಿಟ್ ಆಂಡ್ ರನ್‌ಗೆ ಬೈಕ್ ಸವಾರ ಬಲಿ..!

Doddaballapura: ಹಿಟ್ ಆಂಡ್ ರನ್‌ಗೆ ಬೈಕ್ ಸವಾರ ಬಲಿ..!

ದೊಡ್ಡಬಳ್ಳಾಪುರ: ಯಲಹಂಕ – ಹಿಂದೂಪುರ ನಡುವಿನ ರಾಜ್ಯ ಹೆದ್ದಾರಿಯ ಹಸನಘಟ್ಟ ಗೇಟ್ ಸಮೀಪ ಇಂದು (ಮಂಗಳವಾರ) ರಾತ್ರಿ 7 ಗಂಟೆ ಸುಮಾರಿನಲ್ಲಿ ನಡೆದ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಬೈಕ್ ಸವಾರ ಕೋಲಾರ ಜಿಲ್ಲೆ

[ccc_my_favorite_select_button post_id="95156"]

ಆರೋಗ್ಯ

ಸಿನಿಮಾ

ಅಪ್ಪು ನಮ್ಮನ್ನಗಲಿ ಇಂದಿಗೆ 3 ವರ್ಷ!; ದೊಡ್ಡಬಳ್ಳಾಪುರ ರೈಲ್ವೆ ಸ್ಟೇಷನ್ ಬಳಿ ಅಭಿಮಾನಿಗಳಿಂದ ರಕ್ತದಾನ ಶಿಬಿರ| Puneeth rajkumar

ಅಪ್ಪು ನಮ್ಮನ್ನಗಲಿ ಇಂದಿಗೆ 3 ವರ್ಷ!; ದೊಡ್ಡಬಳ್ಳಾಪುರ ರೈಲ್ವೆ ಸ್ಟೇಷನ್ ಬಳಿ ಅಭಿಮಾನಿಗಳಿಂದ

ದೊಡ್ಡಬಳ್ಳಾಪುರ; ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ (Puneeth rajkumar) ಮೂರನೇ ವರ್ಷದ ಪುಣ್ಯಸ್ಮರಣೆ ಇಂದು ನಡೆದಿದೆ. ಪುನೀತ್ ರಾಜ್‍ಕುಮಾರ್ (Puneeth rajkumar) ಅವರು ನಮ್ಮನ್ನಗಲಿ ಇಂದಿಗೆ ಭರ್ತಿ ಮೂರು ವರ್ಷಗಳಾಗಿವೆ. ಮೂರನೇ ವರ್ಷದ ಪುಣ್ಯಸ್ಮರಣೆ

[ccc_my_favorite_select_button post_id="95151"]
error: Content is protected !!