ಬೆಳಗಾವಿ: ಮದ್ಯಪಾನ ಮಾಡಲು ಹಣ ನೀಡದ್ದಕ್ಕೆ ಕೋಪಗೊಂಡ ಮಗ ನೋರ್ವ ಹೆತ್ತ ತಂದೆಯನ್ನೇ ಹೊಡೆದು ಕೊಂದಿರುವ (Murder) ದಾರುಣ ಘಟನೆ ಅಥಣಿ ತಾಲ್ಲೂಕಿನ ಮದಬಾವಿ ಗ್ರಾಮದಲ್ಲಿ ನಡೆದಿದೆ.
ಮಲ್ಲು ತುಕಾರಾಮ ವನಖಂಡೆ (89) ಮೃತ ತಂದೆ. ಕುಡಿಯುವ ಚಟ ಬೆಳೆಸಿಕೊಂಡಿದ್ದ ಮಗ ಬಾಳಾಸಾಬ(49) ಅಪ್ಪನಲ್ಲಿ ಹಣ ಕೇಳಿ ಕಾಡಿದ್ದಾನೆ. ಹಣ ಕೊಡುವುದಿಲ್ಲ ಎಂದು ಅವರು ಮಗನಿಗೆ, ಕುಡಿತದ ಚಟ ಬಿಟ್ಟುಬಿಡುವಂತೆ ಬುದ್ಧಿಮಾತು ಹೇಳಿದ್ದಾರೆ.
ಇದರಿಂದ ಕೆರಳಿದ ಬಾಳಾಸಾಬ ಮಾರಣಾಂತಿಕವಾಗಿ ಅಪ್ಪನ ಮೇಲೆ ಹಲ್ಲೆ ಮಾಡಿ, ದುಡ್ಡು ಬೇಡ ನೀನೂ ಬೇಡ ಎಂದು ಹೋಗಿದ್ದಾನೆ.
ತಕ್ಷಣವೇ ಮನೆಯಲ್ಲಿದ್ದವರು ಅಕ್ಕಪಕ್ಕದವರ ನೆರವಿನಿಂದ ತೀವ್ರ ಗಾಯಗೊಂಡಿದ್ದ ಮಲ್ಲುವನ್ನು ಮೀರಜ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದು, ಅಥಣಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಆತ್ಮಹತ್ಯೆಗೆ ಮುಂದಾದವನ ರಕ್ಷಿಸಿದ ಪೊಲೀಸರು: ಕೊನೆಯ ಕ್ಷಣದ ಕಾರ್ಯಾಚರಣೆ ರೋಚಕ.. ವ್ಯಾಪಕ ಪ್ರಶಂಸೆ
Murder: ಥಳಿಸಿ ತಂದೆಯನ್ನೇ ಕೊಂದ
ಊಟದ ವಿಷಯದಲ್ಲಿ ಉಂಟಾದ ತಂದೆ, ಮಗನ ಜಗಳ ಕೊಲೆಯಲ್ಲಿ (Murder) ಅಂತ್ಯವಾದ ಘಟನೆ ನಡೆದಿದೆ.
ಹಿರಿಯೂರು ತಾಲ್ಲೂಕಿನ ಕುಂದಲಪುರ ಗ್ರಾಮದ ರಂಗಸ್ವಾಮಿ (50) ಕೊಲೆಗೀಡಾದ ದುರ್ದೈವಿ ತಂದೆ. ಮಗ ದೇವರಾಜ (27) ಕೊಲೆ ಆರೋಪಿ.
ಇಬ್ಬರೂ ಮನೆಯಲ್ಲಿ ಊಟ ಮಾಡುವ ಸಂದರ್ಭದಲ್ಲಿ ಊಟದ ವಿಚಾರಕ್ಕೆ ಸಂಬಂಧಿಸಿದಂತೆ ಮಗ ಕೆಲ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ತಂದೆ ಆಕ್ಷೇಪ ವ್ಯಕ್ತಪಡಿಸಿದಾಗ ಜಗಳ ಉಂಟಾಗಿದೆ.
ರೊಚ್ಚಿಗೆದ್ದ ಮಗ ತಂದೆಯನ್ನು ಕೈ ಕಾಲಿನಿಂದ ಹಿಗ್ಗಾ ಮುಗ್ಗ ಥಳಿಸಿದ್ದಾನೆ. ಮನೆಯಲ್ಲಿದ್ದ ತಾಯಿ, ತಂಗಿ ದೇವರಾಜನನ್ನು ತಡೆಯಲು ಯತ್ನಿಸಿದರೂ ಪ್ರಯೋಜನ ಆಗಿಲ್ಲ. ಕೊನೆಗೆ ತಂದೆ ಕೊನೆಯುಸಿರೆಳೆದಿದ್ದಾರೆ.
ಅಬ್ಬಿನಹೊಳೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಕ್ಕನ ಮಗುವನ್ನೇ ಅಪಹರಿಸಿದ್ದ ಯುವಕ ಪೊಲೀಸರ ವಶಕ್ಕೆ
ದಾವಣಗೆರೆ: ಯುವಕನೊಬ್ಬ ತನ್ನ ಅಕ್ಕನ ಮಗುವನ್ನೇ ಅಪಹರಿಸಿ, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಗ್ಗೆ ದೊರೆತ ಮಾಹಿತಿ ಆಧರಿಸಿ, ದಾವಣಗೆರೆ ರೈಲ್ವೆ ಪೊಲೀಸರು ಮಗು ಹಾಗೂ ಆತನನ್ನು ವಶಕ್ಕೆ ಪಡೆದ ಘಟನೆ ಭಾನುವಾರ ನಡೆದಿದೆ.
ಬೆಂಗಳೂರಿನಿಂದ ತನ್ನ ಅಕ್ಕನ ಮೂರು ವರ್ಷದ ಗಂಡು ಮಗುವನ್ನು ಅಪಹರಿಸಿ. ನಿಜಾಮುದ್ದೀನ್ ರೈಲಿನಲ್ಲಿ ಹೊರಟಿದ್ದ 17 ವರ್ಷದ ಯುವಕನ ಬಗ್ಗೆ ದಾವಣಗೆರೆ ರೈಲ್ವೆ ಪೊಲೀಸರಿಗೆ ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದರು. ನಿಜಾಮುದ್ದೀನ್ ರೈಲು ದಾವಣಗೆರೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಮಗುವಿನ ಸಮೇತ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಹಾರ ಮೂಲದ ಅವನ ಅಕ್ಕ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಳು. ಆಕೆ ಅಕ್ರಮ ಸಂಬಂಧ ಇಟ್ಟು ಕೊಂಡು, ಬೇರೊಬ್ಬ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ಅಪ್ರಾಪ್ತ ಸಹೋದರ ಸಾಕಷ್ಟು ತಿಳಿ ಹೇಳಿ, ಬುದ್ದಿ ಹೇಳಿದರೂ ಅಕ್ರಮ ಸಂಬಂಧ ಬಿಡಲು ಆಕೆ ಒಪ್ಪಲಿಲ್ಲ. ಹೀಗಾಗಿ ಆಕೆಯ 3 ವರ್ಷದ ಮಗುವನ್ನು ಅಪಹರಿಸಿ ಬಿಹಾರ ರಾಜ್ಯಕ್ಕೆ ಹೊರಟ್ಟಿದ್ದ.
ದಾವಣಗೆರೆ ರೈಲ್ವೆ ಪೊಲೀಸ್ ಇನ್ಸ್‌ಪೆಕ್ಟರ್ ಎ.ಕೆ.ರೆಡ್ಡಿ, ಸಿಬ್ಬಂದಿ ಶಿವಾನಂದ, ಅಮಿತ್, ಬಿಂದು, ಮಾಧುರಿ, ಸತೀಶ್ ಬೆಂಕಿಕೆರೆ ತಂಡವು ಅಪಹರಣಕ್ಕೊಳಗಾದ ಮಗುವನ್ನು