ರಾಮನಗರ: ಸಾವಿರಾರು ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಹೃದಯಗೆದ್ದು ಸಂಸದರಾಗಿರುವ, ಡಾ.ಸಿ.ಎನ್.ಮಂಜುನಾಥ್ ಅವರು ಅಪಘಾತಕ್ಕೀಡಾದ ಇಬ್ಬರು ಬೈಕ್ ಸವಾರರ ನೆರವಾಗಿ ಮತ್ತೊಮ್ಮೆ ಹೃದಯಗೆದ್ದಿರುವ ಘಟನೆ ನಡೆದಿದೆ.
ಸಂಸದ ಮಂಜುನಾಥ್ ಅವರು ರಾಮನಗರ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ವೇಳೆ, ನೆಟ್ಟಿಗೆರೆ ಗೇಟ್ ಬಳಿ ಬೈಕ್ ಸವಾರರಿಗೆ ಅಪಘಾತವಾಗಿರುವುದನ್ನು ಗಮನಿಸಿದ್ದಾರೆ. ತಕ್ಷಣ ತಮ್ಮ ಕಾರನ್ನು ನಿಲ್ಲಿಸಿ ಬೈಕ್ ಸವಾರರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಡಾ.ಮಂಜುನಾಥ್ ಅವರು ಗಾಯಗೊಂಡವರಲ್ಲಿ ಒಬ್ಬರನ್ನು ಪರೀಕ್ಷಿಸುತ್ತಿರುವುದನ್ನು ನೋಡಬಹುದಾಗಿದೆ.
ಸವಾರನನ್ನು ಪರೀಕ್ಷಿಸಿ ಗಂಭೀರ ಅಪಾಯದಲ್ಲಿಲ್ಲ ಎಂದು ಖಚಿತಪಡಿಸಿದ ನಂತರ ಸಂಸದ ಡಾ.ಮಂಜುನಾಥ್ ಅಲ್ಲಿಂದ ತಮ್ಮ ಪ್ರಯಾಣವನ್ನು ಮುಂದುವರಿಸಿದರು.