ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ನಟ ಅತುಲ್ ಪರ್ಚುರೆ (atul parchure) ಅವರು ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು.
ಅತುಲ್ ಪರ್ಚುರೆ (atul parchure) ಅವರು ಸೋಮವಾರ ಅವರು ಮೃತಪಟ್ಟಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಸಹುದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.
ಈ ಹಿಂದೆ ಟಾಕ್ ಶೋನಲ್ಲಿ ನಟ ಅತುಲ್ ಪರ್ಚುರೆ ಅವರು ತಮ್ಮ ಕ್ಯಾನ್ಸರ್ನೊಂದಿಗಿನ ಹೋರಾಟವನ್ನು ಬಹಿರಂಗಪಡಿಸಿದರು. ತಮ್ಮ ಲಿವರ್ನಲ್ಲಿ 5 ಸೆಂ.ಮೀ ಗಡ್ಡೆಯಿದೆ ಎಂದು ತಿಳಿಸಿದ್ದರು. ತಮ್ಮ ಚಿಕಿತ್ಸೆ ವೇಳೆ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ.
ರೋಗ ಇರುವುದು ತಿಳಿದ ನಂತರ ನನ್ನ ಮೊದಲ ವಿಧಾನ ತಪ್ಪಾಗಿತ್ತು, ಇದು ನನ್ನ ಮೇದೋಜೀರಕ ಗ್ರಂಥಿ ಮೇಲೆ ಪರಿಣಾಮ ಬೀರಿತ್ತು, ವಿವಿಧ ತೊಡಕುಗಳಿಗೆ ಕಾರಣವಾಯ್ತು ಎಂದು ವಿವರಿಸಿದ್ದರು.
ವೈದ್ಯರನ್ನು ಬದಲಿಸಿ ಸೂಕ್ತ ಚಿಕಿತ್ಸೆ ಪಡೆದ ಬಳಿಕ ಗುಣಮುಖರಾಗುವ ಭರವಸೆ ಹೊಂದಿದ್ದ ನಟ ದುರಾದೃಷ್ಟವಶಾತ್ ಸೋಮವಾರ ಅನಾರೋಗ್ಯಕ್ಕೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ
ಮರಾಠಿ ಮತ್ತು ಹಿಂದಿ ಮನರಂಜನಾ ಕ್ಷೇತ್ರದಲ್ಲಿ ಅತುಲ್ ಪರ್ಚುರೆ (atul parchure) ತಮ್ಮ ಬಹುಮುಖ ಪ್ರತಿಭೆ, ಹಾಸ್ಯಕ್ಕಾಗಿ ಹೆಸರು ವಾಸಿಯಾಗಿದ್ದರು.
ನಟನ ನಿಧನದ ಸುದ್ದಿ ಚಿತ್ರರಂಗಕ್ಕೆ ಬರಸಿಡಿಲು ಬಡಿದಂತಾಗಿದೆ. ಬಾಲಿವುಡ್ನ ಬೇಡಿಕೆಯ ನಟ ಅರ್ಜುನ್ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.
ರಂಗಭೂಮಿ, ಹಿರಿತೆರೆ ಮತ್ತು ಕಿರುತೆರೆಗೆ ಅತುಲ್ ಅವರ ಮಹತ್ವದ ಕೊಡುಗೆಗಳಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡಾ ಗೌರವ ಸಲ್ಲಿಸಿದ್ದಾರೆ.