ವಿಜಯನಗರ: ಸೆಲ್ಫಿ ಹುಚ್ಚಿಗೆ ತುಂಬಿದ ಕೆರೆಗೆ ಬಿದ್ದು ಯುವಕ ನೋರ್ವ ಸಾವನಪ್ಪಿರುವ ಘಟನೆ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಗಂಡಬೊಮ್ಮನಹಳ್ಳಿ ಕೆರೆಯಲ್ಲಿ ಸಂಭವಿಸಿದೆ.
ಮೃತ ದುರ್ದೈವಿಯನ್ನು ಕೆ.ದಿಬ್ಬದಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಪಾಲಯ್ಯ ಅವರ 21 ವರ್ಷದ ಮಗ ಚೇತನ್ ಕುಮಾರ್ ಎಂದು ಗುರುತಿಸಲಾಗಿದೆ.
ಮೃತ ಚೇತನ್ ಕುಮಾರ್ ತನ್ನ ಕುಟುಂಬದವರ ಜೊತೆ ಕೋಡಿ ಬಿದ್ದ ಗಂಡಬೊಮ್ಮನಹಳ್ಳಿ ಕೆರೆಯನ್ನು ನೋಡಲು ತೆರಳಿದ್ದರು. ಇಬ್ಬರು ಸ್ನೇಹಿತರೊಂದಿಗೆ ತುಂಬಿದ ಕೆರೆ ಕೋಡಿ ಬಳಿ ಫೋಟೊ ತೆಗೆದುಕೊಳ್ಳಲು ಹೋದಾಗ ಅಕಸ್ಮಾತ್ ಕಾಲು ಜಾರಿ ಚೇತನ್ ಕುಮಾರ್ ಕೆಳಗಡೆ ಬಿದ್ದಿದ್ದಾರೆ.
ಈ ವೇಳೆ ನೀರಿನ ರಭಸಕ್ಕೆ ಸಿಲುಕಿ ಚೇತನ್ ಮೃತಪಟ್ಟಿದ್ದು, ಆತನ ರಕ್ಷಿಸಲು ಸ್ಥಳದಲ್ಲಿದ್ದವರು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ ಎಂದು ವರದಿಯಾಗಿದೆ.