ದೊಡ್ಡಬಳ್ಳಾಪುರ: ಮೊಬೈಲ್ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿದ್ದ ಜಿಯೋ (Jio)ನೆಟ್ವರ್ಕ್ಗೆ ಏಕಾಏಕಿ ಗ್ರಹಣ ಬಡಿದಂತಾದ್ದು, ಗ್ರಾಹಕರು Jioಗೆ ಟಾಟಾ ಹೇಳಿ ಏರ್ಟೆಲ್ (Airtel) ನತ್ತ ಮುಖ ಮಾಡುತ್ತಿರುವ ಕುರಿತು ಮಾಹಿತಿ ತಿಳಿದು ಬಂದಿದೆ.
ಮೊಬೈಲ್ ಮಾರಾಟಗಾರ ಮೂಲಗಳ ಮಾಹಿತಿ ಅನ್ವಯ ಜಿಯೋ (Jio) 5g ಆರಂಭಿಸಿದ ನಂತರ 4g ನೆಟ್ವರ್ಕ್ ಸ್ಪೀಡನ್ನು ತಗ್ಗಿಸಿದ್ದು, 2gಗೂ ಕಡಿಮೇ ಸ್ಪೀಡ್ ಗ್ರಾಹಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅಲ್ಲದೆ ಪೂರ್ಣ ಪ್ರಮಾಣ ನೆಟ್ವರ್ಕ್ ದೊರಕುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
5g ಮೊಬೈಲ್ ಗೆ ಗ್ರಾಹಕರು ಬದಲಾಗಲೆಂದು ಸಂಸ್ಥೆ ಈ ರೀತಿಯ ಷಡ್ಯಂತ್ರ ರೂಪಿಸಿದೆ ಎಂದು ಗ್ರಾಹಕ ರಾಮಚಂದ್ರ ಆರೋಪಿಸುತ್ತಿದ್ದು, ಜಿಯೋ ನೆಟ್ವರ್ಕ್ ಸ್ಲೋ ಕಾರಣ ಬೇಸತ್ತು ಏರ್ಟೆಲ್ ಗೆ ಪೋರ್ಟ್ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರತನ್ ಟಾಟಾ ಅವರಿಗೆ ಭಾರತ ರತ್ನ.. ಮಹಾ ಸರ್ಕಾರ ಆಗ್ರಹ
ನೆಟ್ವರ್ಕ್ ಸಮಸ್ಯೆ ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರವಲ್ಲದೆ ದೊಡ್ಡಬಳ್ಳಾಪುರ ನಗರ ಪ್ರದೇಶಗಳಲ್ಲಿ ಕೂಡ ವ್ಯಾಪಕವಾಗಿ ಜಿಯೋ ಗ್ರಾಹಕರುನ್ನು ಸಂಕಷ್ಟಕ್ಕೆ ತಳ್ಳಿದ್ದು, 5g ಮೊಬೈಲ್ ಕೊಂಡರು ಸಮಸ್ಯೆ ಬಗೆಹರಿಯುತ್ತಿಲ್ಲ ಈ ಕುರಿತು ದೂರು ನೀಡಿದರು ಹೇಳುವವರು, ಕೇಳುವವರು ಇಲ್ಲವಾಗಿದೆ.
ಇನ್ನೂ ಬೇಸಿಕ್ ಮೊಬೈಲ್‌ಗೂ ಇಂಟರ್ನೆಟ್ ಕಡ್ಡಾಯವಾಗಿದ್ದು, ಗ್ರಾಹಕರು ಅನಾವಶ್ಯಕವಾಗಿ ಹೆಚ್ಚಿನ ಬೆಲೆ ತೆರಬೇಕಿದೆ ಎಂಬ ಆಕ್ರೋಶ ಮತ್ತೊಂದೆಡೆ ಯಾಗಿದೆ.
ನೆಟ್ವರ್ಕ್ ಸಂಸ್ಥೆಗಳ ನಿಯಂತ್ರಣದಲ್ಲಿಡ ಬೇಕಾದ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ಕೇಂದ್ರ ಸರ್ಕಾರದ ಮಿತ್ರರ ಸಂಸ್ಥೆಯಾದ ಕಾರಣ ಯಾವುದೇ ಕ್ರಮಕೈಗೊಳ್ಳದೆ ಉಳಿದಿದೆ ಎಂಬ ಆರೋಪ ನ್ಯಾಯವಾದಿ ಲಕ್ಷ್ಮೀನಾರಾಯಣ ಅವರು ಅವರದ್ದಾಗಿದೆ.
ಒಟ್ಟಾರೆ ದೊಡ್ಡ ಮಟ್ಟದ ಸದ್ದು ಮಾಡಿ, ಮೊಬೈಲ್ ಕ್ಷೇತ್ರಕ್ಕೆ ಬಂದ ಜಿಯೋ ಅವ್ಯವಸ್ಥೆಯಿಂದ ಬೇಸತ್ತ ಗ್ರಾಹಕರು ಏರ್ಟೆಲ್ ಮೊರೆ ಹೋಗುತ್ತಿರುವುದು ಜಿಯೋ ಸಂಸ್ಥೆಗೆ ಹೊರೆಯಾಗಲಿದ್ದು, ಹೆಚ್ಚೆತ್ತುಕೊಳ್ಳದಿದ್ದರೆ ಸಂಸ್ಥೆ ನಷ್ಟಕ್ಕೆ ಒಳಗಾಗಲಿದೆ ಎಂಬ ಸಲಹೆ ಜಿಯೋ ಇಷ್ಟಪಡುವ ಗ್ರಾಹಕರದ್ದಾಗಿದೆ.