![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ಚೆನ್ನೈ: ದಕ್ಷಿಣ ಭಾರತದ ಜನಪ್ರಿಯ ಸನ್ ಟಿವಿ ಸಂಸ್ಥೆಯ ಕನ್ನಡದ ಮನರಂಜನಾ ವಾಹಿನಿ ಯಾಗಿದ್ದ ‘ಉದಯ ಟಿವಿ’ಯ ಮುಖ್ಯಸ್ಥರಾಗಿದ್ದ ಎಸ್.ಸೆಲ್ವಂ (84 ವರ್ಷ) ಗುರುವಾರ ಬೆಳಗ್ಗೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.
![hulukudi maharathotsava](https://www.harithalekhani.com/wp-content/uploads/2025/02/IMG-20250205-WA0002.jpg)
ಚೆನ್ನೈ ಯಲ್ಲಿ ಶುಕ್ರವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಉದಯ ಟಿವಿ ಚೆನ್ನೈನಲ್ಲಿ 19940 ಜೂನ್‌ನಲ್ಲಿ ಪ್ರಸಾರ ಆರಂಭಿಸಿತ್ತು. ಸನ್ ಟಿವಿ ಸಮೂಹದ ಅಧ್ಯಕ್ಷ ಕಲಾನಿಧಿ ಮಾರನ್ ಅವರು ಉದಯ ಟಿವಿ ಪ್ರಾರಂಭಿಸಿದರು. ಕನ್ನಡದಲ್ಲಿ ಪ್ರಸಾರ ಆರಂಭಿಸಿದ ಮೊದಲ ಉಪಗ್ರಹ ವಾಹಿನಿ ಎಂಬ ಹೆಗ್ಗಳಿಕೆ ಉದಯ ಟಿವಿಯದಾಗಿದೆ.
![Hulukudi mahajathre](https://www.harithalekhani.com/wp-content/uploads/2025/02/IMG-20250205-WA0001.jpg)
ಕಲಾನಿಧಿ ಮಾರನ್, ಕಾವೇರಿ ಕಲಾನಿಧಿ ಮತ್ತು ಎಸ್.ಸೆಲ್ವಂ ಉದಯ ಟಿವಿ ನಿರ್ದೇಶಕರು. ಸೆಲ್ವಂ ಉದಯ ಟಿವಿಯ ಬೆಂಗಳೂರು ಬ್ಯೂರೋ ನಿರ್ದೇಶಕರಾಗಿದ್ದರು.
2006ರ ನವೆಂಬರ್‌ನಲ್ಲಿ ಕಲಾನಿಧಿ ಮಾರನ್, ಉದಯ ಟಿವಿ ಲಿ. ಸಂಸ್ಥೆಯನ್ನು ಜೆಮಿನಿ ಟಿವಿ ಲಿ. ಜತೆ ಸನ್ ಟಿವಿ ನೆಟ್‌ವರ್ಕ್‌ನಲ್ಲಿ ವಿಲೀನಗೊಳಿಸಿದರು.