ದೊಡ್ಡಬಳ್ಳಾಪುರ; ತಾಲೂಕಿನ ತಪಸೀಹಳ್ಳಿ ಸಮೀಪ ಅಪರಿಚಿತ ವ್ಯಕ್ತಿಯೋರ್ವನಿಗೆ ಅಪಘಾತವಾಗಿದ್ದು (accident), ಈ ವೇಳೆ ಕಾಲಿಗೆ ತೀವ್ರ ಪೆಟ್ಟಾಗಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಅಪಘಾತವಾದ ಕೂಡಲೇ ಸ್ಥಳೀಯರು ಅಂಬುಲೆನ್ಸ್ ಮೂಲಕ ಗಾಯಾಳುವನ್ನು ನಗರದ ಸರ್ಕಾರಿ ಆಸ್ಪತ್ರೆ ದಾಖಲಿಸಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ಆರಂಭಿಸಿದ್ದಾರೆ. ಆದರೆ ಅಪಘಾತಕ್ಕೀಡಾದ ವ್ಯಕ್ತಿ ಕಾಲಿನ ಮೂಳೆ ಮುರಿದ್ದು, ಆಪರೇಷನ್ ಅನಿವಾರ್ಯವಾಗಿತ್ತು ಎನ್ನಲಾಗಿದೆ.
ಈ ವಿಷಯ ತಿಳಿದ ಡಾ.ಮಂಜುನಾಥ್ ಅವರು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರಮೇಶ್ ಅವರ ಗಮನಕ್ಕೆ ತಂದಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಂತೆಯೇ ಡಾ.ರಮೇಶ್ ಅವರ ಸಹಕಾರದೊಂದಿಗೆ ಶಸ್ತ್ರ ಚಿಕಿತ್ಸೆ ಆರಂಭಿಸಿದ್ದು, ಹಲವು ಗಂಟೆಗಳ ನಂತರ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮುಗಿಸಿದ್ದಾರೆ.
ಅಪರಿಚಿತ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡಲು ಡಾ.ಮಂಜುನಾಥ್ ಅವರಿಗೆ ಡಾ.ರಾಜು, ಡಾ.ನಾಗಸೋನಮ್, ಭವ್ಯ ಸಿಸ್ಟರ್ ಮತ್ತು ಬಾಬು ಅವರು ಸಹಕಾರ ನೀಡಿದ್ದು, ಗಾಯಾಳು ವ್ಯಕ್ತಿಯನ್ನು ನಿಗಾದಲ್ಲಿ ಇರಿಸಲಾಗಿದೆ.
ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ತಮಿಳುನಾಡು ಮೂಲದವನ್ನು ಎನ್ನಲಾಗುತ್ತಿದ್ದು, ಸುಮಾರು 50 ವರ್ಷದ ವ್ಯಕ್ತಿ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದು, ಸಂಬಂಧಿಸಿದವರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ.