ಹೊಸಕೋಟೆ: ತಾಲ್ಲೂಕಿನ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ (house theft) ತಾವರೆಕೆರೆ ಗ್ರಾಮದಲ್ಲಿ ಮನೆ ಬೀಗ ಮುರಿದು ಹಣ-ಒಡವೆ ದೋಚಿ ಖದೀಮರು ಪರಾರಿಯಾದ ಘಟನೆ ನಡೆದಿದೆ.
ಇದನ್ನೂ ಓದಿ: ದೇವಾಲಯಗಳಿಂದ ಸಾಯಿಬಾಬಾ ಮೂರ್ತಿ ತೆರವು..!; ಸನಾತನ ರಕ್ಷಕ ದಳದ ಮುಖ್ಯಸ್ಥನ ಬಂಧನ| ವಿಡಿಯೋ ನೋಡಿ
ಗ್ರಾಮದ ಶ್ರೀರಾಮಪ್ಪ ಎಂಬುವವರು ಮನೆಗೆ ಬೀಗ ಹಾಕಿ ಸಂಬಂದಿಕರ ಮನೆಗೆ ತೆರಳಿದ ಸಮಯದಲ್ಲಿ ತಡರಾತ್ರಿ 1.30ರ ಸಮಯದಲ್ಲಿ ಬಂದ 4 ಜನರ ಗುಂಪು ಮನೆಯ ಬೀಗ ಮುರಿದು ಮನೆಯಲ್ಲಿದ್ದ ಚಿನ್ನ ಹಾಗೂ ಅಂದಾಜು 50-60 ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆ.
ಹೊಸಕೋಟೆ; ತಾವರೆಕೆರೆ ಗ್ರಾಮದಲ್ಲಿ ಮನೆ ಬೀಗ ಮುರಿದು ಹಣ-ಒಡವೆ ದೋಚಿದ ಮುಸುಕುಧಾರಿಗಳು..!#latestupdate #latestnews pic.twitter.com/pB1fZzF6Oo
— Harithalekhani (@harithalekhani) October 4, 2024
house-theft ತಡರಾತ್ರಿ ಗ್ರಾಮದ ಇತರೆ ಬೀದಿಗಳಲ್ಲಿ ಸಹ ಸಂಚರಿಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.
house theft ಸ್ಥಳಕ್ಕೆ ನಂದಗುಡಿ ಪೊಲೀಸರು ಹಾಗೂ ಬೆರಳಚ್ಚು ತಂತ್ರಜ್ಞಾನರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬೈಕ್‌ಗಳ ನಡುವೆ ಅಪಘಾತ: ಓರ್ವ ಸಾವು.. ಪೊಲೀಸರಿಗೆ ಗಾಯ..!
ರಾಮನಗರ: ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ನಗರದ ಕನಕಪುರ ವೃತ್ತದಲ್ಲಿ ಗುರುವಾರ ನಡೆದಿದೆ.
ಚನ್ನಪಟ್ಟಣ ತಾಲೂಕಿನ ಮಾಳಗಾಲು ಗ್ರಾಮದ ಯಶವಂತ್ (20) ಮೃತ ದುರ್ದೈವಿ. ಗಾಯಾಳುಗಳಾದ ಗುರುರಾಜ್ ಮತ್ತು ನಾಗೇಶ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಮನಗರದಿಂದ ಚನ್ನಪಟ್ಟಣಕ್ಕೆ ಯಶವಂತ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ಕನಕಪುರ ವೃತ್ತದಲ್ಲಿ ಅಡ್ಡ ಬಂದ ಗುರುರಾಜ್ ಮತ್ತು ನಾಗೇಶ್ ಅವರಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ.
ಗಾಯಾಳುಗಳು ಪೊಲೀಸ್ ಪೇದೆಗಳೆಂದು ತಿಳಿದು ಬಂದಿದೆ. ಈ ಅಪಘಾತದ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಾರಿ ಕ್ಲೀನರ್ ಎದೆ ಸೀಳಿದ್ದ ಕಬ್ಬಿಣ ಪೈಪ್ ತೆಗೆದ ಕೆಎಂಸಿಆರ್‌ಐ ವೈದ್ಯರು: ಭಾರೀ ಮೆಚ್ಚುಗೆ
ಹುಬ್ಬಳ್ಳಿ: ಚಲಿಸುತ್ತಿದ್ದ ಲಾರಿ ಪಲ್ಟಿಯಾಗಿ ಲಾರಿ ಕ್ಲೀನರ್ ಎದೆಗೆ ಚುಚಿದ್ದ 98 ಸೆಂ. ಮೀ ಕಬ್ಬಿಣದ ಪೈಪ್ ಹೊರತೆಗೆಯುವಲ್ಲಿ ಹುಬ್ಬಳ್ಳಿಯ ಕೆಎಂಸಿಆರ್‌ಐ ವೈದ್ಯರು ಯಶಸ್ವಿಯಾಗಿದ್ದಾರೆ. ವೈದ್ಯರ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಬುಧವಾರ ರಾಣಿಬೆನ್ನೂರಿನ ನ್ಯೂರಿನ ಹೂಲಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಕಬ್ಬಿಣದ ಪೈಪ್ ಲಾರಿ ಕ್ಲೀನರ್ ದಯಾನಂದ ಶಂಕರ ಬಡಗಿ (27)ಯ ಎದೆ ಸೀಳಿ ಸರ್ವಿಸ್ ರಸ್ತೆಯ ಕಬ್ಬಿಣದ ಪೈಪ್ ಹೊರ ಬಂದಿತ್ತು.
ತಕ್ಷಣ ದಾವಣಗೆರೆ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕೆಎಂ ಸಿಆರ್‌ಐನ ತುರ್ತು ಚಿಕಿತ್ಸಾ ಘಟಕಕ್ಕೆ ಕರೆ ತರಲಾಗಿತ್ತು. ಡಾ.ರಮೇಶ ಹೊಸಮನಿ ನೇತೃತ್ವದ ತಂಡವು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಪೈಪ್ ಹೊರ ತೆಗೆದಿದೆ.
ಶಸ್ತ್ರಚಿಕಿತ್ಸೆಗೆ ಯಾವುದೇ ಹಣ ಪಡೆದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.