ಬೆಂಗಳೂರು: ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಪ ವಿಚಾರವಾಗಿ ವಿಧಾನಸೌಧದಲ್ಲಿ ಲೋಕಾಯುಕ್ತ ಎಸ್‌ಐಟಿ ಎಡಿಜಿಪಿ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.
ಖಾಸಗಿ ಸುದ್ದಿವಾಹಿನಿ ವರದಿಗಾರನ ಕುಮಾರಸ್ವಾಮಿ ಆರೋಪಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸುಳ್ಳು ಆರೋಪ ಅಂತ ಹೇಳಿದ್ದೇನೆ ಎಂದಿದ್ದಾರೆ.
ರಿಯಲ್ ಎಸ್ಟೇಟ್ನಲ್ಲಿ ಭಾಗಿಯಾಗಿದ್ದೀರಾ ಅಂತ ಕುಮಾರಸ್ವಾಮಿ ಆರೋಪ ಎಂದ ವರದಿಗಾರನ ಪ್ರಶ್ನೆಗೆ ಸುಳ್ಳು ಎಂದು ಪತ್ರ ಬರೆದಿದ್ದೇನೆ. ಯತೋ ಧರ್ಮಸ್ತತೋ ಜಯಃ ಎಂದಿದ್ದಾರೆ. ಅಲ್ಲದೆ ಪತ್ರ ಕಾಂಟ್ರವರ್ಸಿ ಆಗಿತ್ತು ಎಂಬ ಪ್ರಶ್ನೆಗೆ ಸಿಎಸ್ ಭೇಟಿಯಾಗುವುದಕ್ಕೆ ಬಂದಿದ್ದೆ ಎಂದು ಹೇಳಿ ತೆರಳಿದ್ದಾರೆ.