ಚಿಕ್ಕಬಳ್ಳಾಪುರ: ಆಟೋ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ತಾಲೂಕಿನ ನಂದಿಗಿರಿಧಾಮದ ಬಳಿ ನಡೆದಿದೆ.
ಕೇರಳ ಮೂಲದ ಕಿರಣ್ (24) ಮೃತ ಬೈಕ್ ಸವಾರ. ಹಿಂಬದಿ ಸವಾರ ಆನಂದ್‌ಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ನಂದಿಗಿರಿಧಾಮ ಪೊಲೀಸ್‌ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.