ತೆನಾಲಿ ರಾಮನ ಜಾಣ ಮಗ ಒಂದು ದಿನ ತೆನಾಲಿ ರಾಮನ ಮಗ ಅರಮನೆಯನ್ನು ಪ್ರವೇಶಿಸಿದ. ಅವನು ಕೆಲವು ಸುಂದರ ಗುಲಾಬಿ ಹೂಗಳನ್ನು ನೋಡಿದ. ಅವನ ತಾಯಿಗಾಗಿ ತೆಗೆದುಕೊಂಡು ಹೋಗಲು ಕೆಲವು ಹೂಗಳನ್ನು ಕಿತ್ತ.
ಆಕಡೆಯಿದಿಂದ ರಕ್ಷಣಾ ಪಡೆಯವರು ಹೇ ನೋಡಲ್ಲಿ ಯಾರೋ ಒಬ್ಬ ಹುಡುಗ ಗುಲಾಬಿ ಹೂ ಕೀಳುತ್ತಿದ್ದಾನೆ. ಅವನನ್ನು ಹಿಡಿಯಿರಿ. ಅರಮನೆಯ ರಕ್ಷಕರು ಹುಡುಗನನ್ನು ರಾಜನ ಬಳಿಗೆ ಕರೆದುಕೊಂಡು ಹೋಗುತ್ತಿದ್ದಾಗ. ದಾರಿಯಲ್ಲಿ ಏನು ವಿಷಯ ನನ್ನ ಮಗನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ ಎಂದು ತೆನಾಲಿ ರಾಮ ಕೇಳಿದ.
ನಿಮ್ಮ ಮಗ ತೋಟದಿಂದ ಗುಲಾಬಿ ಹೂಗಳನ್ನು ಕದ್ದು ಕಿತ್ತಿದ್ದಾನೆ. ನಾವು ಅವನನ್ನು ಕೈಯಲ್ಲಿ ಗುಲಾಬಿ ಹೂಗಳ ಸಮೇತ ಹಿಡಿದೆವು. ಆದುದರಿಂದ ನಾವು ಅವನನ್ನು ರಾಜನ ಬಳಿಗೆ ಕರೆದುಕೊಂಡು ಹೋಗುತ್ತಿದ್ದೇವೆ. ಏನು ನನ್ನ ಮಗ ಅಂತಹ ತಪ್ಪು ಕೆಲಸ ಮಾಡುವುದಿಲ್ಲ. ಆಗ ರಕ್ಷಣಾ ಪಡೆಯವರು ನೋಡಿ ಅವನ ಕೈತುಂಬಾ ಹೂವುಗಳಿವೆ.
ನನ್ನ ಮಗ ಅಂತಹ ತಪ್ಪಾದ ಕೆಲಸ ಒಂದು ವೇಳೆ ಮಾಡಿದ್ದೇ ಆದರೆ ಅವನಿಗೆ ಶಿಕ್ಷೆ ಆಗಲೇಬೇಕು ನಾನು ಅದನ್ನು ತಡೆಯುವುದಿಲ್ಲ. ಆದರೆ ತೆನಾಲಿ ರಾಮನಿಗೆ ಅವನ ಮಗನಿಗೆ ಶಿಕ್ಷೆ ಆಗುವುದು ಬೇಕಿರಲಿಲ್ಲ. ಆದ್ದರಿಂದ ಅವನು ತನ್ನ ಮಗನ ಮುಖವನ್ನು ಮೇಲು ವಸ್ತ್ರದಿಂದ ಮುಚ್ಚಿದ. ಈ ದಿನ ಬಿಸಿಲು ಬಹಳ ಇದೆ ಆದ್ದರಿಂದ ಮೇಲು ವಸ್ತ್ರವು ನನ್ನ ಮಗನನ್ನು ಬಿಸಿಲಿನಿಂದ ಕಾಪಾಡುತ್ತದೆ.
ಇದರಿಂದ ಅವನ ತಂದೆ ಏನು ಹೇಳುತ್ತಿದ್ದಾನೆ ಎಂದು ಅವನಿಗೆ ಅರ್ಥವಾಯಿತು. ಆದ್ದರಿಂದ ರಕ್ಷಕರ ಕಣ್ಣು ತಪ್ಪಿಸಿ ಕೈಯಲ್ಲಿದ್ದ ಗುಲಾಬಿ ಹೂವುಗಳನ್ನು ತಿಂದುಬಿಟ್ಟ. ಅದನ್ನು ಆ ಮೇಲು ವಸ್ತ್ರ ಮರೆ ಮಾಚಿತು. ಆ ಹುಡುಗನನ್ನು ಅರಸರ ಮುಂದೆ ತಂದು ನಿಲ್ಲಿಸಿದರು.
“ಮಹಾರಾಜ, ಈ ಹುಡುಗ ತೆನಾಲಿ ರಾಮನ ಮಗ ಇವನು ಅರಮನೆಯಲ್ಲಿ ಗುಲಾಬಿ ಹೂಗಳನ್ನು ಕೀಳುತ್ತಿದ್ದ. ಆದ್ದರಿಂದ ಹೂವುಗಳ ಸಮೇತ ಇವನನ್ನು ಹಿಡಿದು ತಂದಿದ್ದೇವೆ. ಇವನನ್ನು ನೀವು ನೋಡಬಹುದು ಮಹಾ ಪ್ರಭು ಎಂದು ಹೇಳಿದರು”.
ಆ ಹುಡುಗ ಕಿತ್ತ ಗುಲಾಬಿ ಹೂಗಳು ನಿಮ್ಮ ಬಳಿ ಇವೆಯೇ ಎಂದು ಮಹಾರಾಜರು ಕೇಳಿದರು ಅದಕ್ಕೆ ಅವರು ಗುಲಾಬಿ ಹೂಗಳು ಆ ಹುಡುಗನ ಬಳಿಯಲ್ಲೇ ಇವೆ ಎಂದು ಹೇಳಿದರು.
“ಏನಿದು ಆ ಹುಡುಗನ ಕೈಯಲ್ಲಿ ಗುಲಾಬಿ ಹೂಗಳೇ ಕಾಣುತ್ತಿಲ್ಲವಲ್ಲ”ಎಂದರು ಮಹಾರಾಜರು. ಹುಡುಗ ಹೇಳಿದ ತನ್ನ ತಂದೆಗೆ ಕೆಟ್ಟ ಹೆಸರು ತರಬೇಕೆಂಬ ಉದ್ದೇಶದಿಂದ ರಕ್ಷಕರು ತನ್ನನ್ನು ಹಿಡಿದರು ಎಂದು ಹೇಳಿದ.
ರಾಜರು ಹುಡುಗನನ್ನು ಮನೆಗೆ ಕಳುಹಿಸಿ ರಕ್ಷಕರನ್ನು ಬೈದರು ಹೀಗಾಗಿ ತೆನಾಲಿ ರಾಮನ ಮಗ ಜಾಣ ತನದಿಂದ ಪಾರಾದ.
ಕೃಪೆ: ಸಾಮಾಜಿಕ ಜಾಲತಾಣ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….