ಶಿಕ್ಷಕರು, ಪದವೀಧರರು ನಾಡಿನ ಅಭಿವೃದ್ಧಿ ಪರವಾಗಿ ಇದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, (ಸೆ.8): ಶಿಕ್ಷಕರು ಮತ್ತು ನಾಡಿನ ಪದವೀಧರರು ನಾಡಿನ ಅಭಿವೃದ್ಧಿ ಪರವಾಗಿ ಇದ್ದಾರೆ. ಹೀಗಾಗಿ ಅವರೆಲ್ಲಾ ನಮ್ಮ ಪರವಾಗಿರುವುದರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ನಮಗೆ ಅನುಕೂಲಕರ ವಾತಾವರಣವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. 

ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ನಡೆದ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಮಾತನಾಡಿದರು. 

ಜನವರಿಯಿಂದ ವಿದ್ಯಾವಂತ ನಿರುದ್ಯೋಗಿಗಳಿಗೆ ಯುವನಿಧಿ ಕಾರ್ಯಕ್ರಮ ಆರಂಭವಾಗಲಿದೆ. ನಾವು ವಿದ್ಯಾವಂತ ಯುವಕ ಯುವತಿಯರಿಗೆ 24 ತಿಂಗಳ ಕಾಲ ಯುವನಿಧಿ ಕೊಡುವ ಜತೆಗೆ ಉದ್ಯೋಗ ಸೃಷ್ಟಿಗೆ ಹಲವು ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದರು. 

ಟಿಕೆಟ್ ಆಕಾಂಕ್ಷಿಗಳು ಶಿಕ್ಷಕ ಸದಸ್ಯರು ಮತ್ತು ಪದವೀಧರ ಸದಸ್ಯರ ಜತೆ ನಿರಂತರ ಸಂಪರ್ಕದಲ್ಲಿದ್ದು ಅವರ ಮಾತು ಮತ್ತು ಬೇಡಿಕೆಗಳನ್ನು ಕೇಳಿಸಿಕೊಂಡು ನಮಗೆ ತಿಳಿಸಿ. ನಾಡಿನ ಅಭಿವೃದ್ಧಿ ಒಂದೇ ನಮ್ಮ ಗುರಿ. ಇದಕ್ಕಾಗಿ ಪಕ್ಷ ಮತ್ತು ಸರ್ಕಾರ ಶ್ರಮಿಸಲಿದೆ. ಇದನ್ನು ಮತದಾರರಿಗೆ ಸರಿಯಾಗಿ ಅರ್ಥ ಮಾಡಿಸಿ ಚುನಾವಣೆಯಲ್ಲಿ ಗೆದ್ದು ಬನ್ನಿ ಎಂದು ಹಾರೈಸಿದರು. 

ಟಿಕೆಟ್ ಆಕಾಂಕ್ಷಿಗಳು ಮತ್ತು ಎಲ್ಲಾ ಶಾಸಕರು ಮತ್ತು ಜಿಲ್ಲಾ ಪದಾಧಿಕಾರಿಗಳ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಹೆಸರನ್ನು ಘೋಷಿಸುತ್ತೇವೆ. ಟಿಕೆಟ್ ಯಾರಿಗೇ ಸಿಕ್ಕರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದರು. 

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಸಚಿವ ರಾಮಲಿಂಗಾರೆಡ್ಡಿ ಅವರು ಉಪಸ್ಥಿತರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಹುಬ್ಬಳ್ಳಿ ಪ್ರಕರಣ; ಎನ್ ಕೌಂಟರ್ ಮಾಡಿದ್ದು ಸರಿ – ನಿಖಿಲ್ ಕುಮಾರಸ್ವಾಮಿ

ಹುಬ್ಬಳ್ಳಿ ಪ್ರಕರಣ; ಎನ್ ಕೌಂಟರ್ ಮಾಡಿದ್ದು ಸರಿ – ನಿಖಿಲ್ ಕುಮಾರಸ್ವಾಮಿ

ಹುಬ್ಬಳ್ಳಿ ಪ್ರಕರಣದಲ್ಲಿ ಶೂಟ್ ಔಟ್ ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಎರಡು ವರ್ಷಗಳಿಂದ ಅನೇಕ ಘಟನೆಗಳು ನಡೆಯುತ್ತಿವೆ. ಇಂತಹ Nikhil Kumaraswamy

[ccc_my_favorite_select_button post_id="105302"]
ಅಂಬೇಡ್ಕರ್ ದೇಶ ಕಂಡ ಮಹಾನ್ ನಾಯಕರು ಹಾಗೂ ಮಾನವತಾವಾದಿ; ಸಿಎಂ ಸಿದ್ದರಾಮಯ್ಯ

ಅಂಬೇಡ್ಕರ್ ದೇಶ ಕಂಡ ಮಹಾನ್ ನಾಯಕರು ಹಾಗೂ ಮಾನವತಾವಾದಿ; ಸಿಎಂ ಸಿದ್ದರಾಮಯ್ಯ

ಮನುವಾದಿಗಳು ಇಂದು ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ತಮ್ಮ ಸ್ವಂತ ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. Cmsiddaramaiah

[ccc_my_favorite_select_button post_id="105290"]
ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ರಾಮೇಶ್ವರಂ: ತಮಿಳುನಾಡಿನ ಪಂಬನ್ ಮತ್ತು ಹಿಂದೂ ಮಹಾಸಾಗರದಲ್ಲಿನ ದ್ವೀಪದ ರಾಮೇಶ್ವರಂ ನಗರವನ್ನು ಸಂಪರ್ಕಿಸುವ ಪಂಬನ್ ವರ್ಟಿಕಲ್ ಲಿಫ್ಟ್ (ಮೇಲ್ಮುಖ ತೆರೆದುಕೊಳ್ಳುವ) ಪಂಬನ್ ಸೇತುವೆಯನ್ನು (Pamban pridge) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ 12.30ರಲ್ಲಿ

[ccc_my_favorite_select_button post_id="105011"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಚೆಸ್ ಮೈಗೂಡಿಸಿಕೊಳ್ಳುವ ಮಕ್ಕಳು ಶಿಸ್ತನ್ನು ಕಲಿಯುತ್ತಾರೆ: ಡಿಕೆ ಶಿವಕುಮಾರ್

ಚೆಸ್ ಮೈಗೂಡಿಸಿಕೊಳ್ಳುವ ಮಕ್ಕಳು ಶಿಸ್ತನ್ನು ಕಲಿಯುತ್ತಾರೆ: ಡಿಕೆ ಶಿವಕುಮಾರ್

ರಾಜಕೀಯ ಚೆಸ್ ಆಟವಿದ್ದಂತೆ ಎಂದು ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ನಾವು ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆಯಿಂದ ಇರಬೇಕು. ರಾಜಕೀಯದಲ್ಲಿ DK Shivakumar

[ccc_my_favorite_select_button post_id="105178"]
Doddaballapura: ಈಜಲು ಹೋಗಿದ್ದ ಯುವಕ ಸಾವು..!

Doddaballapura: ಈಜಲು ಹೋಗಿದ್ದ ಯುವಕ ಸಾವು..!

ಬಿಸಿಲಿನ ಬೇಗೆ ನೀಗಿಸಿಕೊಳ್ಳಲು ಚಿಕರಾಯಪ್ಪನಹಳ್ಳಿ ಕೆರೆ ಸಮೀಪದ ಸುಮಾರು 15 ಅಡಿಯಷ್ಟು ಆಳದ ನೀರಿದ್ದ ಬಾವಿಯಲ್ಲಿ ಈಜಾಡಲು Doddaballapura

[ccc_my_favorite_select_button post_id="105281"]
Video: ಹೆಲಿಕಾಪ್ಟರ್ ಪತನ.. ಮಕ್ಕಳು ಸೇರಿ 6 ಮಂದಿ ದುರ್ಮರಣ

Video: ಹೆಲಿಕಾಪ್ಟರ್ ಪತನ.. ಮಕ್ಕಳು ಸೇರಿ 6 ಮಂದಿ ದುರ್ಮರಣ

ಹೆಲಿಕಾಪ್ಟರ್‌ನ ಮುಖ್ಯ ರೋಟರ್‌ಗಳು ಬಾಲ ಬೂಮ್‌ಗೆ ಬಡಿದು ತುಂಡಾಗಿರುವ ಸಾಧ್ಯತೆ ಇದೆ. helicopter

[ccc_my_favorite_select_button post_id="105183"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!