ಬೆಂಗಳೂರು, (ಡಿ.27); ಕೋವಿಡ್ ಹೆಸರಲ್ಲಿ ಸಾವಿರಾರು ಕೋಟಿ ಹಗರಣ ನಡೆದಿರುವುದು ತಿಳಿದಿದ್ದರು ಮುಚ್ಚಿಟ್ಟಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ನ್ಯಾಯಾಲಯ ಸ್ವಯಂ ದೂರು ದಾಖಲಿಸಿ, ಅಕ್ರಮದ ತನಿಖೆ ಆದೇಶಿಸಿ, ಆರೋಪಿಗಳನ್ನು ಶಿಕ್ಷಿಸಬೇಕೆಂದು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನಕಾರ್ಯದರ್ಶಿ ರಾಜಘಟ್ಟರವಿ ಮನವಿ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಅವಧಿಯ ವೇಳೆ ಕೋವಿಡ್ ಕಾರಣ ಚಿಕಿತ್ಸೆ ನೆಪದಲ್ಲಿ 40 ಸಾವಿರ ಕೋಟಿ ರೂ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ವಿಷಯ ತಿಳಿದಿದ್ದರು ದೂರು ನೀಡದೆ ಈಗ ತಮ್ಮ ಸ್ವಾರ್ಥಕ್ಕಾಗಿ ಬ್ಲಾಕ್ ಮೇಲ್ ಮಾಡ್ತಾಯಿರುವ ಯತ್ನಾಳ್ ನಿಲುವು ಖಂಡನೀಯ.
ತಮ್ಮ ವಯಕ್ತಿಕ ಸ್ವಾರ್ಥಕ್ಕಾಗಿ ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡುತ್ತಿರುವ ಇಂತವರಿಂದ ಜನರ ತೆರಿಗೆ ಹಣ ದುರ್ಬಳಕೆಯಾಗುತ್ತಿದೆ. ಕೋವಿಡ್ ಹೆಸರಲ್ಲಿ ಹಗರಣ ನಡೆದಿದ್ದೆ ಆದರೆ ಇಷ್ಟು ದಿನ ಮೌನವಾಗಿದ್ದ ಯತ್ನಾಳ್ ಈಗ ಬಿಜೆಪಿ ನಾಯಕರ ಬ್ಲಾಕ್ ಮೇಲ್ ಮಾಡ್ತಾ ಇರೋದ್ ಏಕೆ…? ಎಂದು ಪ್ರಶ್ನಿಸಿರುವ ರಾಜಘಟ್ಟರವಿ, ರಾಜಕಾರಣಿಗಳ ಈ ರೀತಿಯಾದ ಬ್ಲಾಕ್ ಮೇಲ್ ಮನಸ್ಥಿತಿಗೆ ಕಡಿವಾಣ ಹಾಕಲು ಹಾಗೂ ಅಕ್ರಮದ ವಿರುದ್ಧ ನೈಜ ತನಿಖೆ ನಡೆಸಲು ಘನ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆಗೆ ಆದೇಶಿಸಬೇಕಿದೆ.
ಆ ಮೂಲಕ ಸ್ವಾರ್ಥಕ್ಕಾಗಿ ಹಗರಣ ಮುಚ್ಚಿಟ್ಟಿರುವವರ ಹಾಗೂ ಪ್ರಪಂಚವನ್ನೇ ಕಾಡಿದ ಮಹಾಮಾರಿ ಹೆಸರಲ್ಲಿ ಹಣ ಲೂಟಿ ಮಾಡಿದವರಿಗೆ ತಕ್ಕ ಶಿಕ್ಷೆಯಾಗುವಂತೆ ಮಾಡಬೇಕೆಂದು ರಾಜಘಟ್ಟರವಿ ಒತ್ತಾಯಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….