ತುಮಕೂರು, (ಡಿ.13): ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ ವಿಜಯೇಂದ್ರ ಹಾಗೂ ವಿಪಕ್ಷ ಸ್ಥಾನಕ್ಕೆ ಆರ್.ಅಶೋಕ್ ಆಯ್ಕೆಯಾದಾಗಿನಿಂದ, ನಿರಂತರವಾಗಿ ಸ್ವಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ ಹೊರಹಾಕುತ್ತಿರುವ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ತುಮಕೂರಿನಲ್ಲಿ ಮಾತನಾಡಿದ ರೇಣುಕಾಚಾರ್ಯಾ, ಯತ್ನಾಳ್ ಹಿರಿಯರಿದ್ದಾರೆ, ಅವರ ಮೇಲೆ ಗೌರವ ಇದೆ. ನೀವು ಆಡಿಯೋ ಮಾಡಿ ಲೀಕ್ ಮಾಡಿದ್ದೀರಲ್ಲ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಅಧಿಕಾರದಿಂದ ಇಳಿಸಿದ್ರಿ, ಬಿಜೆಪಿ ಸೋಲಿಗೆ ಕಾರಣ ನೀವು ನಿರಂತರವಾಗಿ ಮಾತನಾಡಿದ್ದ ಪಕ್ಷದ ಸೋಲಿಗೆ ಕಾರಣ. ಯಡಿಯೂರಪ್ಪ ಬಗ್ಗೆ ಮಾತನಾಡಲು ನಿಮಗೆ ಯಾವುದೇ ನೈತಿಕತೆ ಇಲ್ಲ ಯಡಿಯೂರಪ್ಪ ರಾಜೀನಾಮೆ ಕೊಟ್ಟ ಮೇಲೂ ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಹಾದಿ-ಬೀದಿಯಲ್ಲಿ ಮಾತನಾಡಿದ್ದಿರಿ ಎಂದು ಯತ್ನಾಳ್’ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಿಕಾರಿಪುರದಲ್ಲಿ ವಿಜಯೇಂದ್ರ ಅವರನ್ನು ಸೋಲಿಸಲು ಕೆಲವರು ಷಡ್ಯಂತ್ರ ನಡೆಸಿದರು. ಸ್ವಪಕ್ಷದವರೇ ಷಡ್ಯಂತ್ರ ಮಾಡಿದರು. ಆದರೆ ಶಿಕಾರಿಪುರದ ಜನರ ಆಶೀರ್ವಾದದಿಂದ ವಿಜಯೇಂದ್ರ ಗೆದ್ದರು. ವಿಜಯೇಂದ್ರ ಗೆದ್ದರೆ ದೊಡ್ಡ ನಾಯಕನಾಗಿ ಹೊರ-ಹೊಮ್ಮುತ್ತಾರೆ ಎಂದು ವಿಜಯೇಂದ್ರ ಅವರನ್ನು ಸೋಲಿಸಲು ಷಡ್ಯಂತ್ರ ಮಾಡಿದರು. ಷಡ್ಯಂತ್ರ ನಡೆಸಿದವರ ಹೆಸರನ್ನ ಮುಂದಿನ ದಿನಗಳಲ್ಲಿ ಹೇಳುತ್ತೀನಿ ಎಂದಿದ್ದಾರೆ.
ಸೋಮಣ್ಣ ಅವರ ಸೋಲಿಗೆ ಯಡಿಯೂರಪ್ಪ-ವಿಜಯೇಂದ್ರ ಕಾರಣರಲ್ಲ. ಬೊಮ್ಮಾಯಿಯನ್ನ ಸೋಲಿಸಬೇಕೆಂದು ವಿಜಯೇಂದ್ರ ಮತ್ತು ಯಡಿಯೂರಪ್ಪ ಎಲ್ಲೂ ಕೂಡ ಪ್ರಯತ್ನ ಮಾಡಿಲ್ಲ. ಗೋವಿಂದರಾಜ ನಗರ ಕ್ಷೇತ್ರದಲ್ಲಿ ಫಲಿತಾಂಶ ತದ್ವಿರುದ್ಧ ಆಗಲಿದೆ ಎಂದು ತಿಳಿದು ಸ್ವತಃ ಸೋಮಣ್ಣ ಅವರೇ, ಮೈಸೂರಿಗೆ ಹೋದರು. ಲಿಂಗಾಯತ ನಾಯಕರಾಗಬೇಕು ಮತ್ತು ಸಿಎಂ ಆಗಬೇಕೆಂದು ಹಗಲುಗನಸ್ಸು ಕಂಡು ಅಲ್ಲಿಗೆ ಹೋದರು. ಯಡಿಯೂರಪ್ಪ ಅವರ ಹೆಸರನ್ನ ಹೇಳಿದ್ದಕ್ಕೆ ಸೋಮಣ್ಣ ಅವರಿಗೆ ಅಷ್ಟು ಮತಗಳು ಬಂದಿವೆ. ಸೋಮಣ್ಣ ಮತ್ತು ಯತ್ನಾಳ್ ಇಬ್ಬರೂ ಮೆದುಳು-ನಾಲಿಗೆಗೆ ಲಿಂಕ್ ಇಲ್ಲದಂತೆ ಮಾತನಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ನಲ್ಲಿ ಸೋಮಣ್ಣಗೆ ಯಾವುದೇ ಸ್ಥಾನಮಾನ ಕೊಟ್ಟಿರಲಿಲ್ಲ. ಹಾಗಾಗಿ ಯಡಿಯೂರಪ್ಪರ ಕಾಲನ್ನ ಹಿಡಿದುಕೊಂಡು ಕಾಡಿ ಬೇಡಿ ಬಿಜೆಪಿಗೆ ಬಂದರು. ಸೋತ ತಕ್ಷಣ ಕಣ್ಣೀರು ಹಾಕ್ತಾ ಇದ್ರು ಸೋಮಣ್ಣ ಮನೆಗೆ ಹೋಗಿ ಯಡಿಯೂರಪ್ಪ ಸಮಾಧಾನ ಮಾಡಿದ್ದರು.
ಅವರ ಕಣ್ಣೀರು ಒರೆಸಿ ಸಮಾಧಾನ ಮಾಡಿದ್ದು ಯಡಿಯೂರಪ್ಪ ಸೋಮಣ್ಣ ಕಾಂಗ್ರೆಸ್ ನಿಂದ ಬಂದಿದ್ದಾರೆ. ಯಡಿಯೂರಪ್ಪ ಕಟ್ಟಿ ಬೆಳೆಸಿದ ಬಿಜೆಪಿ ಬಗ್ಗೆ ಮಾತನಾಡುವುದಕ್ಕೆ ಸೋಮಣ್ಣಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.
ಸೋಮಣ್ಣ ಸತ್ಯ ಹರಿಶ್ಚಂದ್ರ ಅನ್ನುವ ಹಾಗೆ ಮಾತನಾಡುತ್ತಾರೆ. ಸುಳ್ಳಿಗೆ ಮತ್ತೊಂದು ಹೆಸರೇ ಸೋಮಣ್ಣ ಎಂದು ಜನ ಮಾತನಾಡುತ್ತಿದ್ದಾರೆ. ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲುವುದಕ್ಕೆ ಸೋಮಣ್ಣನೇ ಕಾರಣ ಬಿಜೆಪಿಯಲ್ಲಿ ಪ್ರಶ್ನಾರ್ತಿತ ನಾಯಕ ಅಂದ್ರೆ ಯಡಿಯೂರಪ್ಪ ಅವರು. ಯಡಿಯೂರಪ್ಪನ ಟೀಕೆ ಮಾಡೋ ನೈತಿಕ ಹಕ್ಕು ಸೋಮಣ್ಣ ಅವರಿಗೆಲ್ಲ. ಈಗಲಾದರೂ ವಾಗ್ದಾಳಿ ನಡೆಸುವುದನ್ನ ಬಿಡಿ ಎಂದು ಸೋಮಣ್ಣ ವಿರುದ್ಧ ಹರಿಹಾಯ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….