ದೊಡ್ಡಬಳ್ಳಾಪುರ, (ಫೆ.08): ತಾಲೂಕಿನ ತೂಬಗೆರೆ ಹೋಬಳಿ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಮತ್ತೆ ಮುಂದುವರೆದಿದ್ದು, ದೊಡ್ಡರಾಯಪನಹಳ್ಳಿ ವ್ಯಾಪ್ತಿಯ ಗ್ರಾಮದಲ್ಲಿ ದಾಳಿ ಮಾಡಿ ಹಸುವನ್ನು ಬಲಿ ಪಡೆದಿದೆ.
ಗ್ರಾಮದ ರೈತ ಮುನೇಗೌಡ ಎಂಬುವವರು ಗ್ರಾಮದ ಹೊರವಲಯದಲ್ಲಿರುವ ತೋಟದ ಶೆಡ್ ನಲ್ಲಿ ಹಸುವನ್ನು ಕಟ್ಟಿ ಹಾಕಿದ್ದು. ತಡರಾತ್ರಿ ಶೆಡ್ ಗೆ ನುಗ್ಗಿರುವ ಚಿರತೆ ಹಸುವನ್ನು ಕೊಂದು ಹಾಕಿದೆ.
ಇದರಿಂದ ಸುಮಾರು 15 ರಿಂದ 20 ಸಾವಿರ ರೂಪಾಯಿ ಬೆಲೆ ಬಾಳುವ ಹಸು ಸಾವನಪ್ಪಿರುವ ಕಾರಣ ಮುನೇಗೌಡ ನಷ್ಟಕ್ಕೆ ಒಳಗಾಗಿದ್ದಾರೆ.
ಸ್ಥಳಕ್ಕೆ ಪಶು ಇಲಾಖೆ ವೈದ್ಯಾಧಿಕಾರಿ ಡಾ.ರವಿಕಿರಣ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆರಂಭದಲ್ಲಿ ನಾಯಿಯ ದಾಳಿ ಎಂದು ಶಂಕಿಸಲಾಗಿತ್ತಾದರೂ, ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಬಳಿಕೆ ಚಿರತೆ ದಾಳಿ ಎಂಬುದು ಖಚಿತವಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….