ಶಿವಮೊಗ್ಗ, (ಜ.19): ಚಿಕ್ಕಬಳ್ಳಾಪುರ ಶಾಸಕರಾಗಿ ಪ್ರದೀಪ್ ಈಶ್ವರ್ ಆಯ್ಕೆಯ ನಂತರ ವಾದ ವಿವಾದಗಳಿಂದಲೇ ಪ್ರಸಿದ್ಧರಾದವರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅದರಲ್ಲಿಯೂ ಅವರ ಸುದ್ದಿ, ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗುತ್ತಿದ್ದಂತೆ ಪರ-ವಿರೋಧದ ಚರ್ಚೆಗಳ ಕಾರಣ ತೀವ್ರವಾಗಿ ವೈರಲ್ ಆಗುತ್ತದೆ.
ಈ ಕುರಿತಂತೆ ಇಂದು ಶಿವಮೊಗ್ಗದಲ್ಲಿ ಮಾತನಾಡಿರುವ ಪ್ರದೀಪ್ ಈಶ್ವರ್, ಬಿಜೆಪಿ ಐಟಿ ಸೆಲ್‌ನವರು ನನ್ನ ವಿಡಿಯೋ ಬರೋಕಿಲ್ಲ ಅದ್ಭುತವಾದ ಸಾಹಿತ್ಯವನ್ನು ಕಾಮೆಂಟ್ ಸೆಕ್ಷನ್‌ನಲ್ಲಿ ಹಾಕುತ್ತಿರುತ್ತಾರೆ. ಬಿಜೆಪಿ ಐಟಿ ಸೆಲ್‌ನವರಿಗೆ ಬಹಳ ಧನ್ಯವಾದ ಹೇಳ್ತಿನಿ, ನನ್ನ ವಿಡಿಯೋ ನನಗಿಂತ ಮುಂಚೆ ನೀವ್ ನೋಡ್ತಾ ಇದ್ದೀರಿ ಆಭಾರಿಯಾಗಿರುತ್ತೇನೆ. ಕಾಮೆಂಟ್ ಏನಾದ್ರೂ ಇರಲಿ ನಿಮ್ಮಿಂದ ಒಂದ್ ವ್ಯೂ ಜಾಸ್ತಿ ಬರ್ತಾ ಇದೆ ಸಾಕು ಎಂದಿದ್ದಾರೆ.
ಬಿಜೆಪಿ ಐಟಿ ಸೆಲ್ನವರು ಪಟ್ ಅಂತ ನೋಡ್ತಾರೆ ನನ್ ವಿಡಿಯೋನ ನೋಡ್ತಾರೆ ವಿಡಿಯೋ ಹಾಕೋಕಿಲ್ಲ 70ರಿಂದ 80 ವ್ಯೂಸ್ ಆಗೋಗಿರುತ್ತೆ. ನಲವತ್ತು ಕಾಮೆಂಟ್ ಬಿದ್ದಿರುತ್ತೆ! ಎಲ್ಲಾ ನಲವತ್ತು ನೆಗೆಟಿವೇ. ಆ ನಲವತ್ತು ಜನ ಒಂದೇ ರೀತಿ ಕಾಮೆಂಟ್ ಮಾಡ್ತಾ ಇರ್ತಾರೆ. ಬಾಯಿಗ್ ಬಂದಾಗ್ ಬೈಯ್ತಾರೆ, ನಮಗೂ ಬಹಳ ಖುಷಿ ಇದೆ. ಪರವಾಗಿಲ್ಲ ಗಲ್ಲಿಯಲ್ಲಿಯಲ್ಲಿ ಗೊತ್ತಿರಲಿಲ್ಲ ಈಗ ಕರ್ನಾಟಕದ ಗೂಗಲ್ ನಲ್ಲಿ ನನ್ನ ನೋಡುತ್ತಿದ್ದಾರೆ ಧನ್ಯವಾದಗಳು ಎಂದು ನೆಗೆಟಿವ್ ಕಾಮೆಂಟ್ ಮಾಡುವವರನ್ನು ಪ್ರದೀಪ್ ಈಶ್ವರ್ ಕಿಚಾಯಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….