ಬೆಂಗಳೂರು, (ಏ.06); ಈಶ್ವರಪ್ಪ ತಮ್ಮ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಫೋಟೋ ಬಳಸುವಂತಿಲ್ಲ, ಅವರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ವಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತಾಡಿದ ಅವರು, ರ್ಕಾರೀ ಕಾರ್ಯಕ್ರಮ ಅಥವಾ ಮದುವೆಯಂಥ ಸಮಾರಂಭಗಳಲ್ಲಿ ಫೋಟೋ ಬಳಸಬಹುದು, ಆದರೆ ಅನಧಿಕೃತವಾಗಿ ಬಳಸುವಂತಿಲ್ಲ, ಚುನಾವಣಾ ಸಂದರ್ಭದಲ್ಲಿ ಕೇವಲ ಬಿಜೆಪಿಗೆ ಮಾತ್ರ ಪ್ರಧಾನಿಯವರ ಫೋಟೋ ಬಳಸುವ ಅವಕಾಶವಿದೆ ಎಂದು ಅಶೋಕ ಹೇಳಿದರು.
ಈಶ್ವರಪ್ಪ ಬಿಜೆಪಿ ಸದಸ್ಯರು ಹೌದಾ ಅಥವಾ ಅಲ್ಲವಾ ಅಂತ ಪಕ್ಷ ತೀರ್ಮಾನಿಸುತ್ತದೆಯೇ ಹೊರತು ಅವರಲ್ಲ ಎಂದು ಇದೇ ವೇಳೆ ಹೇಳಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….