ಕನ್ಯಾಕುಮಾರಿ, (ಜೂ.02); ಚುನಾವಣೆಯ ಪ್ರಚಾರ ಮುಗಿದ ನಂತರ ನರೇಂದ್ರ ಮೋದಿ ಅವರು ತಮಿಳುನಾಡಿನ ಕನ್ಯಾಕುಮಾರಿಯ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಮಾಡಿದ್ದ ತಮ್ಮ 45 ಗಂಟೆಗಳ ಸುದೀರ್ಘ ಧ್ಯಾನವನ್ನು ಶನಿವಾರ ಸಂಜೆ ಮುಕ್ತಾಯಗೊಳಿಸಿದರು.
ಈ ಹಿಂದೆ ಶುಕ್ರವಾರವೇ ಆರಂಭವಾಗಿದ್ದ ಅವರ ಧ್ಯಾನವು ಮುಗಿದಿದ್ದು, ಈ ಬಳಿಕ ಮೋದಿ ತಮಿಳು ಸಂತ ಕವಿ ತಿರುವಳ್ಳುವರ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
ಇಡೀ ಧ್ಯಾನದಲ್ಲಿ ಅವರು ಕೇಸರಿ ಬಟ್ಟೆ ದರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದಾದ ಬಳಿಕ ಅವರು ತಮ್ಮ ಧ್ಯಾನ ಮುಕ್ತಾಯಗೊಳಿಸಿ ಬಿಳಿ ಬಟ್ಟೆಯನ್ನು ಧರಿಸಿ, ರಾಕ್ ಸ್ಮಾರಕದ ಪಕ್ಕದಲ್ಲಿರುವ 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಗೆ ಭೇಟಿ ನೀಡಿ, ಪುಷ್ಪ ನಮನ ಸಲ್ಲಿಸಿದರು.
ಪ್ರಧಾನಿ ಮೋದಿ, ದೋಣಿ ಮೂಲಕ ಪ್ರತಿಮೆ ಸಂಕೀರ್ಣಕ್ಕೆ ಆಗಮಿಸಿದರು ಮತ್ತು ನಂತರ ದೋಣಿ ಸೇವೆಯನ್ನು ಬಳಸಿಕೊಂಡು ದಡ ತಲುಪಿದರು. ಸೂರ್ಯೋದಯದ ವೇಳೆ ಸೂರ್ಯ ಅರ್ಥ್ಯ’ ನೀಡುವ ಮೂಲಕ ಎರಡನೇ ಮತ್ತು ಅಂತಿಮ ದಿನದ ಧ್ಯಾನವನ್ನು ಆರಂಭಿಸಿದ್ದರು.
ವಿವೇಕಾನಂದ ರಾಕ್ ಸ್ಮಾರಕದಲ್ಲಿ ಧ್ಯಾನದಲ್ಲಿ ನಿರತರಾಗಿದ್ದ ವೇಳೆ ಮೋದಿ ಕೇಸರಿ ಬಟ್ಟೆ ಧರಿಸಿದ್ದರು. ಕನ್ಯಾಕುಮಾರಿಯು ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ ಮತ್ತು ಸ್ಮಾರಕವು ತೀರದ ಸಮೀಪವಿರುವ ಒಂದು ಸಣ್ಣ ದ್ವೀಪದಲ್ಲಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….