HDK: ಕಾಂಗ್ರೆಸ್ ಸರಕಾರ ಬಂದ ಮೇಲೆ ಅಭಿವೃದ್ಧಿಯಲ್ಲಿ ರಾಜ್ಯ 10 ವರ್ಷ ಹಿಂದಕ್ಕೆ – HD ಕುಮಾರಸ್ವಾಮಿ ಕಿಡಿ

ಬೆಂಗಳೂರು, (ಜುಲೈ.13): ಕಾಂಗ್ರೆಸ್ ಸರಕಾರ ಬಂದ ಮೇಲೆ ಅಭಿವೃದ್ಧಿ ವಿಷಯದಲ್ಲಿ ರಾಜ್ಯವು ಹತ್ತು ವರ್ಷಗಳಷ್ಟು ಹಿಂದಕ್ಕೆ ಹೋಗಿದೆ ಎಂದು ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.

ಅಂಕಿ ಅಂಶ, ಹಗರಣಗಳನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರಹಾರ ನಡೆಸಿದ ಅವರು; ಈ ಇಂಥ ಜನ ವಿರೋಧಿ ಸರ್ಕಾರದ ವಿರುದ್ಧ ಜೆಡಿಎಸ್ ಬಿಜೆಪಿ ಮೈತ್ರಿಕೂಟ ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಜಂಟಿಯಾಗಿ ಹೋರಾಟ ನಡೆಸಲಿದೆ ಎಂದು ಘೋಷಣೆ ಮಾಡಿದರು.

ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ನಡೆದ ಎನ್ ಡಿಎ ಮೈತ್ರಿಕೂಟದ ಸಮನ್ವಯ ಸಭೆಯ ನಂತರ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರೊಂದಿಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

ಈ ಸರ್ಕಾರ ಆರಂಭದಿಂದಲೂ ಹಗರಣಗಳಲ್ಲಿಯೇ ಮುಳುಗಿದೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ, ವರ್ಗಾವಣೆ ದಂಧೆ, ಪರಿಶಿಷ್ಟ ಜಾತಿ ವರ್ಗದ ಹಣ ದುರ್ಬಳಕೆ, ರೈತರ ಆತ್ಮಹತ್ಯೆ ಪ್ರಕರಣಗಳು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ನಮ್ಮ ಮೈತ್ರಿಕೂಟ ಸದನದಲ್ಲಿ ಹೋರಾಟ ನಡೆಸಲಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಮುಡಾ ಪ್ರಕರಣ ವಿಚಾರದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು; ಮುಖ್ಯಮಂತ್ರಿಯಿಂದಲೇ ಕಾನೂನು ಬಾಹಿರ ಚಟುವಟಿಕೆ ನಡೆದಿದೆ. ರೂ.62 ಕೋಟಿ ಪರಿಹಾರ ಯಾವ ಆಧಾರದಲ್ಲಿ ಅವರು ಕೇಳಿದರು? ಎಷ್ಟು ಜನ ಭೂಮಿ ಕಳೆದುಕೊಂಡವರಿಗೆ ಇವರು ಯಾವ ರೀತಿಯಲ್ಲಿ ಸರ್ಕಾರದಲ್ಲಿ ಪರಿಹಾರ ಕೊಟ್ಟಿದ್ದಾರೆ? ಅರ್ಕಾವತಿ ರೀಡೂ ಹಗರಣ ಮಾಡಿದರಲ್ಲ, ಅಲ್ಲಿ ₹300 ರಿಂದ ರೂ.400 ಕೋಟಿ ನಡೆದಿತ್ತಲ್ಲ, ಆ ಲೆಕ್ಕಾಚಾರದಲ್ಲಿದಲ್ಲಿ ರೂ.62 ಕೋಟಿ ಕೇಳಿರಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ಕೇಂದ್ರ ಸಚಿವರು ಆರೋಪ ಮಾಡಿದರು.

ಒಂದು ಕಡೆ ಮುಡಾ, ಮತ್ತೋಂದು ಕಡೆ ವಾಲ್ಮೀಕಿ ಹಗರಣ ದಲಿತ ಕುಟುಂಬದವರಿಗೆ ನೆರವು ಕೊಡುವಂತ ಹಣವನ್ನ ಲೂಟಿ ಮಾಡಿ ಸ್ವೆಚ್ಚಾಚಾರವಾಗಿ ಬಳಸಿಕೊಂಡಿದ್ದಾರೆ. ಇತರೆ ಎಲ್ಲಾ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಲು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಬರಗಾಲ ಸಮಸ್ಯೆ, ಮಳೆಯ ಅವಾಂತರ, ಡೆಂಗ್ಯೂದಿಂದ ಸಾವನ್ನಪ್ಪಿದ ಜನರ ಬಗ್ಗೆ, ಕಾನೂನು ಸುವ್ಯವಸ್ಥೆ, ಡಾಡುವ ಹೆಚ್.ಕೆ.ಪಾಟೀಲ್ ಅವರು ಸರ್ಕಾರಕ್ಕೆ ಬರೆದ ಪತ್ರದ ಬಗ್ಗೆ, ಹಾಲಿನ ದರ ಏರಿಕೆ ಮಾಡಿ ರೈತರಿಗೆ ಹಣ ನೀಡದೆ ಇರುವುದು.. ಹೀಗೆ ಹತ್ತಾರು ವಿಷಯಗಳ ಬಗ್ಗೆ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಸರ್ಕಾರದ ನಡವಳಿಕೆ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ತೀರ್ಮಾನಿಸಿದ್ದೇವೆ. ಬಡವರಿಗೆ ಗ್ಯಾರಂಟಿ ಎನ್ನುತ್ತಾರೆ, ಆ ಗ್ಯಾರಂಟಿಗಳನ್ನು ನೋಡಿಕೊಳ್ಳಲು ಒಬ್ಬ ಅಧ್ಯಕ್ಷ, ಅದರ ಮೂಲಕ ದುಂದುವೆಚ್ಚ.. ಇದು ಈ ಸರ್ಕಾರದ ಹಣೆಬರಹ. ಗ್ಯಾರಂಟಿಗಳಿಗೆ ಹಣ ಕೊಟ್ಟಿದ್ದರಿಂದ ರಾಜ್ಯದ ಅಭಿವೃದ್ಧಿಗೆ ಹಣ ಇಲ್ಲ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಯ ರಾಯರೆಡ್ಡಿ ಅವರೇ ಹೇಳಿದ್ದಾರಲ್ಲವೇ ಎಂದು ಅವರು ಕಿಡಿಕಾರಿದರು.

ಅಶೋಕ್ ನೇತೃತ್ವದಲ್ಲಿ ನಮ್ಮ ಎಲ್ಲಾ ಶಾಸಕರು ಚರ್ಚೆ ಮಾಡಿದ್ದೇವೆ. ಎರಡೂ ಸದನದಲ್ಲಿ ಪರಿಣಾಮಕಾರಿಯಾಗಿ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

Doddaballapura: ನ್ಯಾಯಾಲಯದ ಆವರಣದಲ್ಲಿ ಸಂಭ್ರಮದ ರಾಜ್ಯೋತ್ಸವ – ವಕೀಲರ ದಿನಾಚರಣೆ.!

Doddaballapura: ನ್ಯಾಯಾಲಯದ ಆವರಣದಲ್ಲಿ ಸಂಭ್ರಮದ ರಾಜ್ಯೋತ್ಸವ – ವಕೀಲರ ದಿನಾಚರಣೆ.!

ಅನ್ಯ ಭಾಷೆಯಿಂದ ನಮ್ಮ ಭಾಷೆಗೆ ಅನುವಾದ ಮಾಡುವಾಗ ನಮ್ಮ ಭಾಷೆ ಮೇಲಿನ ಹಿಡಿತ ಸಾಧಿಸಿರುವುದು ಮುಖ್ಯವಾಗುತ್ತದೆ. Doddaballapura

[ccc_my_favorite_select_button post_id="99213"]
ಅಂಬಾನಿ ಆದ್ರೆ ಅವರ ಮನೆಗೆ.. ರಸ್ತೆ ಬಂದ್ ಮಾಡಿದಕ್ಕೆ ಬೆಂಗಳೂರಿನ ಮಹಿಳೆ ಕ್ಲಾಸ್ – VIDEO ನೋಡಿ

ಅಂಬಾನಿ ಆದ್ರೆ ಅವರ ಮನೆಗೆ.. ರಸ್ತೆ ಬಂದ್ ಮಾಡಿದಕ್ಕೆ ಬೆಂಗಳೂರಿನ ಮಹಿಳೆ ಕ್ಲಾಸ್

ಇತ್ತೀಚೆಗೆ ನೀತಾ ಅಂಬಾನಿ ಅವರು ತಮ್ಮ ಮರ್ಸಿಡೀಸ್ ಬೆಂಜ್ ಬುಲೆಟ್ ಪ್ರೊಫ್ ಕಾರ್‌ನಲ್ಲಿ ಹೈ ಸೆಕ್ಯೂರಿಯಲ್ಲಿ ಆಗಮಿಸಿದ್ದರು. Video

[ccc_my_favorite_select_button post_id="99152"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ World Chess Championship

[ccc_my_favorite_select_button post_id="98503"]
ಮತ್ತೆ ದರ್ಶನ್ ಬೆನ್ನಿಗೆ ಬಿದ್ದ ಖಾಸಗಿ ಸುದ್ದಿ ವಾಹಿನಿಗಳು..!: ಸುಳ್ಳು ಸುದ್ದಿ ಮಾಡಬೇಡಿ ಎಂದು ಅಭಿಮಾನಿಗಳ ಆಕ್ರೋಶ| Darshan

ಮತ್ತೆ ದರ್ಶನ್ ಬೆನ್ನಿಗೆ ಬಿದ್ದ ಖಾಸಗಿ ಸುದ್ದಿ ವಾಹಿನಿಗಳು..!: ಸುಳ್ಳು ಸುದ್ದಿ ಮಾಡಬೇಡಿ

ಕೆಲ ಖಾಸಗಿ ಸುದ್ದಿವಾಹಿನಿಗಳ ಬಗ್ಗೆ ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗಡೆ, ಗೃಹಸಚಿವ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಈಶ್ವರಪ್ಪ ಸೇರಿದಂತೆ Darshan

[ccc_my_favorite_select_button post_id="99206"]
Accident| ಸರಣಿ ಅಪಘಾತ; ತಮ್ಮದಲ್ಲದ ತಪ್ಪಿಗೆ ಆರು ಮಂದಿ ದುರ್ಮರಣ..!| Video

Accident| ಸರಣಿ ಅಪಘಾತ; ತಮ್ಮದಲ್ಲದ ತಪ್ಪಿಗೆ ಆರು ಮಂದಿ ದುರ್ಮರಣ..!| Video

ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆ ಈ ಸರಣಿ ಅಪಘಾತ ನಡೆದಿದೆ. ವೇಗವಾಗಿ ಬಂದ ಲಾರಿಗಳ ನಡುವೆ ಅಪಘಾತವಾಗಿದೆ. Accident

[ccc_my_favorite_select_button post_id="99186"]

ಆರೋಗ್ಯ

ಸಿನಿಮಾ

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಬಂಧನಕ್ಕೊಳಗಾಗಿದ್ದ ಅಲ್ಲು ಅರ್ಜುನ್ ಅವರು ಇಂದು ಬೆಳಿಗ್ಗೆಯಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. Allu arjun

[ccc_my_favorite_select_button post_id="98682"]