ಚನ್ನಪಟ್ಟಣ, (ಆಗಸ್ಟ್.23): ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಹೊಂಗನೂರು ಜಿ.ಪಂ. ವ್ಯಾಪ್ತಿಯ ಗ್ರಾಮಗಳಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಭೇಟಿ ನೀಡಿ ಸ್ಥಳೀಯ ಜನರ ಮತ್ತು ರೈತರ ಸಮಸ್ಯೆಗಳನ್ನು ಆಲಿಸಿದರು.
ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು: ನಾನು ಚನ್ನಪಟ್ಟಣ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ, ಆಕಾಂಕ್ಷಿಯೂ ನಾನಲ್ಲ. ನಾನು ಜನರ ಸಮಸ್ಯೆಯನ್ನು ಆಲಿಸಿ, ಉಪ ಚುನಾವಣೆಗೆ ಬಗ್ಗೆ ಮುಖಂಡರ ಜೊತೆ ಚರ್ಚೆ ಮಾಡಲು ಬಂದಿದ್ದೇನೆ ಎಂದರು.
ಚನ್ನಪಟ್ಟಣ, ಶಿಂಗ್ಗಾವಿ, ಸಂಡೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್ ನಡೆಯಬೇಕಿದೆ. ರಾಜ್ಯದಲ್ಲಿ ಮೂರು ಕ್ಷೇತ್ರದಲ್ಲಿ ಉಪಚುನಾವಣೆ ಬಗ್ಗೆ ಶೀಘ್ರವೇ ದಿನಾಂಕ ಘೋಷಣೆಯಾಗಲಿದೆ ಎಂದರು.
ಜನರ ಸಮಸ್ಯೆ ಆಲಿಸಲು ಬಂದಿದ್ದೇನೆ: ಹೆಚ್‌ಡಿ ಕುಮಾರಸ್ವಾಮಿ ಅವರ ಸ್ವ ಕ್ಷೇತ್ರದಲ್ಲಿ ಕೆರೆಗಳು ಖಾಲಿ ಇವೆ.ಜತೆಗೆ ಹಲವಾರು ಸಮಸ್ಯೆ ಇವೆ. ಹೀಗಾಗಿ ಜನರ ಸಮಸ್ಯೆ ಆಲಿಸಲು ನಾನು ಬಂದಿದ್ದೇನೆ.ಅಲ್ಲದೇ ಉಪ ಚುನಾವಣೆ ಬಗ್ಗೆ ಮುಖಂಡರ ಜತೆ ಚರ್ಚೆ ಮಾಡಲು ಬಂದಿದ್ದೇನೆ ಎಂದರು..ಚನ್ನಪಟ್ಟಣದಲ್ಲಿ NDA ಅಭ್ಯರ್ಥಿ ಗೆಲುವಾಗಬೇಕು.
ಹೀಗಾಗಿ ತಳಮಟ್ಟದಿಂದ ಎರಡೂ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ.ಈಗಾಗಲೇ ಚನ್ನಪಟ್ಟಣ ಕ್ಚೇತ್ರಕ್ಕೆ ಸಂಬಂಧಿಸಿದಂತೆ ವರದಿ ಸಿದ್ದಪಡಿಸಿದ್ದೇವೆ.ಆ ವರದಿಯನ್ನ ಬಿಜೆಪಿ ರಾಷ್ಟ್ರೀಯ ನಾಯಕರು ಗಮನಕ್ಕೆ ಕುಮಾರಸ್ವಾಮಿ ತರುತ್ತಾರೆ ಎಂದರು.
ಚನ್ನಪಟಣದಲ್ಲಿ ನಾನು ಸ್ಪರ್ಧೆ ಮಾಡೋ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಿಲ್ಲ.ಸಾರ್ವತ್ರಿಕ ಚುನಾವಣೆಗೆ ಮೂರು ಮುಕ್ಕಾಲು ವರ್ಷ ಬಾಕಿ ಇದೆ.ಪಕ್ಷದ ತಳಮಟ್ಟದ ಕಾರ್ಯಕರ್ತರಗಳನ್ನ ಗುರುತಿಸಲು ನಾನು ಕೆಲಸ ಮಾಡಲು ಬಂದಿದ್ದೇನೆ.
ಮುಂದಿನ ವಾರ ಬೇರೆ ಜಿಲ್ಲಾ ಪ್ರವಾಸದ ಸಮಯ ನಿಗದಿ ಮಾಡಿದ್ದೇನೆ.ಸದ್ಯ ಚನ್ನಪಟ್ಟಣ ಕಾರ್ಯಕರ್ತರ ಭಾವನೆಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ.
ನಾನು ಸ್ಪರ್ಧೆ ಮಾಡುವ ಯಾವುದೇ ಪ್ರಶ್ನೆ ಇಲ್ಲ, ಆಕಾಂಕ್ಷಿಯೂ ಅಲ್ಲ ಎಂದರು.
ದೆಹಲಿ ಮಟ್ಟದಲ್ಲಿ ತಿರ್ಮಾನ ಆಗುತ್ತೆ: ಇನ್ನು CP ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಯೋಗೇಶ್ವರ್ ಬಿಜೆಪಿಯಲ್ಲಿ ಎಂಎಲ್‌ಸಿ ಇದ್ದಾರೆ.
ಯೋಗೇಶ್ವರ್ ಅಥವಾ ಕುಮಾರಸ್ವಾಮಿ ಆಗಲಿ ಯಾವುದೆ ಅಪಸ್ವರಕ್ಕೆ ದಾರಿ ಮಾಡಿಕೊಟ್ಟಿಲ್ಲ.ಅಂತಿಮ ತಿರ್ಮಾನ ಏನಾದ್ರೂ ಇದ್ರೆ ದೆಹಲಿ ಮಟ್ಟದಲ್ಲಿ ತಿರ್ಮಾನ ಆಗುತ್ತೆ.ಎಲ್ಲಾ ವಿಚಾರಗಳಿಗೂ ತಲೆ ಭಾಗಿ ಒಳ್ಳೆಯ ತಿರ್ಮಾನಕ್ಕೆ ಬರುತ್ತೇವೆ.ಯೋಗೇಶ್ವರ್ ಅವರನ್ನೂ ಕೂಡ ವಿಶ್ವಾಸವಾಗಿ ತೆಗೆದುಕೊಳ್ಳುತ್ತೇವೆ ಎಂದರು.
ನನ್ನ ಕೆಲಸ ಆರಂಭಿಸಿದ್ದೇನೆ: ನನಗೆ ಶಾಸಕನಾಗಬೇಕು, ವಿಧಾನಸೌಧದ ಮೆಟ್ಟಿಲು ಹತ್ತಬೇಕು ಎಂಬ ನಿರೀಕ್ಷಿ ಇಟ್ಟುಕೊಂಡು ಕೆಲಸ ಮಾಡುತ್ತಿಲ್ಲ. ದೇವೇಗೌಡರು ಪ್ರಾದೇಶಿಕ ಪಕ್ಷವನ್ನ ಕಟ್ಟಿ ಬೆಳೆಸಿದ್ದಾರೆ.ಇದನ್ನ ಕುಮಾರಣ್ಣ ಉಳಿಸಿಕೊಂಡು ಬೇಳೆಸಿಕೊಂಡು ಹೋಗುತ್ತಿದ್ದಾರೆ.ನಾನು ತಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಆಗಬೇಕು ಅಂತ ನನ್ನ ಕೆಲಸ ಆರಂಭಿಸಿದ್ದೇನೆ ಎಂದರು..
ನಿಖಿಲ್ ಕುಮಾರಸ್ವಾಮಿರಾಜಕೀಯ ಷಡ್ಯಂತ್ರಕ್ಕೆ ಬಲಿಯಾದ್ರು ಅಂತ ನನ್ನ ಮೇಲೆ ಸಾಕಷ್ಟು ಒತ್ತಡ ಇತ್ತು.ಆದ್ರೆ ನಾನು ಚುನಾವಣೆಗೆ ಸ್ಪರ್ಧೆ ಮಾಡೊ ಸೂಕ್ತ ಸಮಯ ಅಲ್ಲ.ರಾಜ್ಯಧ್ಯಂತ ಕಾರ್ಯಕರ್ತರ ಜೊತೆ ಒಡನಾಟ ಬೆಳೆಸಿಕೊಳ್ಳಬೇಕು ಅಂತ ಕೆಲಸ ಆರಂಭಿಸಿದ್ದೇನೆ.ನಾನು ಯಾವುದೇ ಆಕಾಂಕ್ಷಿ ಅಲ್ಲ. ಅಪೇಕ್ಷೆಯೂ ಇಲ್ಲ.
ಏನಾದ್ರು ಜನತಾದಳದ ಚಿನ್ಹೆ ಅಡಿ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಬೇಕು ಅನ್ನೊ ಸಂದರ್ಭ ಬಂದರೆ ನೂರಕ್ಕೆ ನೂರರಷ್ಟು ನಮ್ಮ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುತ್ತೇವೆ ಎಂದರು.
ಕುಮಾರಸ್ವಾಮಿ ಬಂಧನ ಹೇಳಿಕೆ, ರಾಜಕೀಯ ಷಡ್ಯಂತ್ರ: ಸಂದರ್ಭ ಬಂದರೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರನ್ನು ಬಂಧನ ಮಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
ಚನ್ನಪಟ್ಟಣದ ಕೆಂಗಲ್‌ನಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ‘ಇದು ರಾಜಕೀಯ ಷಡ್ಯಂತ್ರ, ರಾಜ್ಯದ ಜನ ಇದನ್ನ ಗಮನಿಸುತ್ತಿದ್ದಾರೆ’ ಎಂದು ಹೇಳಿದರು.
ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಆಡಳಿತ ಪಕ್ಷಗಳ ಒತ್ತಾಯದ ಬಗ್ಗೆಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ‘ವೆಂಕಟೇಶ್ವರ ಮೈನಿಂಗ್ ಕುಮಾರಸ್ವಾಮಿ ಅನುಮತಿ ಕೊಟ್ರು ಅಂತ ಆರೋಪ ಇದೆ. ಈ ಬಗ್ಗೆ 2017ರಲ್ಲೇ ಕುಮಾರಣ್ಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಮುಡಾ, ವಾಲ್ಮೀಕಿ ಹಗರಣದ ಬಗ್ಗೆ ನಾವು ಪಾದಯಾತ್ರೆ ಮಾಡಿದ್ವಿ.
ಆಡಳಿತ ಪಕ್ಷವೇ ವಿಪಕ್ಷಗಳನ್ನ ಪ್ರಶ್ನೆ ಮಾಡುವ ಪರಿಸ್ಥಿತಿ ಬಂದಿದೆ. ಇದು ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಕೆಲಸ. ಕುಮಾರಸ್ವಾಮಿ ಅವರು ಯಾವುದೇ ಕಡತಕ್ಕೂ ಸಹಿ ಹಾಕಿಲ್ಲ. ಪ್ರಕರಣ ಸುಪ್ರೀಂ ನಲ್ಲಿರೋದ್ರಿಂದ ಪ್ರಾಸಿಕ್ಯೂಷನ್ ಕೊಡುವ ಅಗತ್ಯ ಇಲ್ಲ. ಸುಪ್ರೀಂ ಕೋರ್ಟ್ ಎಸ್ಐಟಿ, ಲೋಕಾಯುಕ್ತಕ್ಕೆ ಡೈರೆಕ್ಷನ್ ಕೊಟ್ಟ ಮೇಲೆ ಪ್ರಾಸಿಕ್ಯೂಷನ್ ಗೆ ಯಾಕೆ ಅನುಮತಿ ಕೊಡಬೇಕು’ ಎಂದು ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರಶ್ನೆ ಮಾಡಿದರು..
ಜನ ಕುಮಾರಣ್ಣ ಪರ ಇರುವುದು ಕಾಂಗ್ರೆಸ್‌ಗೆ ಹತಾಶೆ: ಲೋಕಸಭಾ ಚುನಾವಣೆ ಬಳಿಕ ಹಳೇ ಮೈಸೂರು ಭಾಗದ ಫಲಿತಾಂಶ ಕಾಂಗ್ರೆಸ್ ಗೆ ನಿದ್ದೆಗೆಡಿಸಿದೆ. ಹಾಸನ ಹೊರತು ಪಡಿಸಿ ಬಹುತೇಕ ಕ್ಷೇತ್ರಗಳು ಮೈತ್ರಿ ಪಕ್ಷದ ಪಾಲಾಗಿದೆ. ರಾಜ್ಯದ ಜನತೆ ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬಿದ್ದಾರೆ. ಬಹುಶಃ ಇದು ಕಾಂಗ್ರೆಸ್ ನವರಿಗೆ ಹತಾಶೆ ತರಿಸಿದೆ. ಹಾಗಾಗಿ ಈ ರೀತಿಯ ಹೇಳಿಕೆ ಕೊಡ್ತಿದ್ದಾರೆ ಎಂದು ನಿಖಿಲ್ ಅವರು ಕಿಡಿಕಾರಿದರು.
ಡಿಸಿಎಂಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು: ಇನ್ನೂ ಬೆಂಗಳೂರು ನಾಗರೀಕರ ಬಗ್ಗೆ ಡಿಸಿಎಂ ಲಘುವಾಗಿ ಮಾತಮಾಡಿದ್ದಾರೆ.ಬೆಂಗಳೂರಿಗರಿಗೆ ಉಪಕಾರ ಸ್ಮರಣೆ ಇಲ್ಲ ಅಂದವ್ರೆ. ಅವರಿಗೆ ನಾನು ಒಂದು ಪ್ರಶ್ನೆ ಕೇಳ್ತೇನೆ. 136 ಜನ ಶಾಸಕರನ್ನ ಗೆಲ್ಲಿಸಿದಾಗ ಉಪಕಾರ ಸ್ಮರಣೆ ಇತ್ತಾ.? ಬೆಂಗಳೂರಿನಲ್ಲಿ 12 ಮಂದಿ ಶಾಸಕರನ್ನ ಗೆಲ್ಲಿಸಿದಾಗ ಉಪಕಾರ ಸ್ಮರಣೆ ಇತ್ತಾ.? ಜನಾಭಿಪ್ರಾಯ ಜೊತೆಯಲ್ಲಿ ಇದ್ದಾಗ ಎಲ್ಲವೂ ಸರಿ.
ಲೋಕಸಭಾ ಚುನಾವಣೆ ಬಳಿಕ ಈ ರೀತಿಯ ಲಘುವಾಗಿ ಮಾತನಾಡೋದು ಅವರ ಸ್ಥಾನಕ್ಕೆ ಶೋಭೆ ತರಲ್ಲ. ಜನ ಆಶಿರ್ವಾದ ಮಾಡಿದ್ದಾರೆ, ಅದಕ್ಕೆ ತಕ್ಕನಾಗಿ ನಡೆದುಕೊಳ್ಳಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ 136 ಸ್ಥಾನ ಎಲ್ಲಿಗೆ ಬಂದು ನಿಲ್ಲುತ್ತೋ ನೋಡಿಕೊಳ್ಳಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು..
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….