ನವದೆಹಲಿ, (ಆಗಸ್ಟ್.14): ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ ಅವರ ಪರವಾಗಿ ದೇಶಕ್ಕೊಂದು ಬೆಳ್ಳಿ ಪದಕ ಪಡೆಯಬೇಕೆಂಬ ಭಾರತೀಯರ ಕನಸು ನುಚ್ಚುನೂರಾಗಿದೆ. ಸಿಎಎಸ್ ಅಂದರೆ ಕ್ರೀಡಾ ನ್ಯಾಯಮಂಡಳಿಗೆ ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿ ವಜಾಗೊಂಡಿದೆ
100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕಾಗಿ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ 50 ಕೆಜಿ ಫ್ರೀ-ಸ್ಟೈಲ್ ಫೈನಲ್ನಿಂದ ವಿನೇಶ್ ಅನರ್ಹರಾಗಿದ್ದರು. ನಂತರ ವಿನೇಶ್ ಫೋಗಟ್ ಕ್ರೀಡಾ ನ್ಯಾಯಮಂಡಳಿಯ ಮುಂದೆ ತಮಗೆ ಮೆಡಲ್ ನೀಡುವ ಕುರಿತಾಗಿ ಮೇಲ್ಮನವಿ ಸಲ್ಲಿಸಿದ್ದರು.
ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮಂಡಳಿ ಒಲಿಂಪಿಕ್ ಮುಗಿಯುವುದರೊಳಗಾಗಿ ತೀರ್ಪು ಪ್ರಕಟಿಸೋದಾಗಿ ಹೇಳಿತ್ತು. ಆನಂತರ ತೀರ್ಪಿನ ಗಡುವನ್ನು ಆಗಸ್ಟ್ 13ರ ವರೆಗೆ ವಿಸ್ತರಿಸಿತ್ತು.
ಇಂದು ಪ್ರಕರಣದ ತೀರ್ಪು ಪ್ರಕಟಿಸಬೇಕಿದ್ದ ನ್ಯಾಯಮಂಡಳಿ ಮತ್ತೆ ಆಗಸ್ಟ್ 16ಕ್ಕೆ ದಿನಾಂಕ ನಿಗದಿಪಡಿಸಿ ತೀರ್ಪು ಮುಂದೂಡಿತ್ತು. ಆದರೆ ಇದೀಗ ಕ್ರೀಡಾ ನ್ಯಾಯ ಮಂಡಳಿ ವಿನೇಶ್ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ
ಸೆಮಿ ಫೈನಲ್ನಲ್ಲಿ ಗೆದ್ದು ಇನ್ನೇನು ಫೈನಲ್ ಆಡಬೇಕು ಎನ್ನುವಷ್ಟರಲ್ಲಿ ರಾತ್ರೋರಾತ್ರಿ ವಿನೇಶ್ ಫೋಗಟ್ ಅನರ್ಹಗೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಅಲ್ಲದೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿದ್ದವು.
ಇದರ ಬೆನ್ನಲ್ಲೆ ನ್ಯಾಯಾಲಯದ ಮೆಟ್ಟಿಲೇರಿದ ನಂತರ ಬೆಳ್ಳಿ ಪದಕ ಸಿಗುತ್ತಾ ಎಂಬ ಪ್ರಶ್ನೆಗೆ ಉತ್ತರ ದೊರಕಿದ್ದು, ಇದೀಗ ವಿನೇಶ್ ಬೆಳ್ಳಿ ಮೂಲಕ ಭಾರತಕ್ಕೆ ಪದಕ ಪಡೆಯುವ ಕನಸು ಭಗ್ನವಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….