![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ಬೆಂ.ಗ್ರಾ.ಜಿಲ್ಲೆ: ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಜ.23ರ ಬುಲೆಟಿನ್ ಅನ್ವಯ ಇಂದು ಜಿಲ್ಲೆಯಲ್ಲಿ ಹೊಸದಾಗಿ 925 ಜನರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ ಕೋವಿಡ್ ಸೋಂಕಿನಿಂದ 844 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
![hulukudi maharathotsava](https://www.harithalekhani.com/wp-content/uploads/2025/02/IMG-20250205-WA0002.jpg)
ವರದಿಯನ್ವಯ ಹೊಸಕೋಟೆ ತಾಲೂಕಿನ 97 ಪುರುಷರು, 61 ಮಹಿಳೆಯರು ಸೇರಿ 158.
ದೇವನಹಳ್ಳಿ ತಾಲೂಕಿನ 136 ಪುರುಷರು, 99 ಮಹಿಳೆಯರು ಸೇರಿ 235.
![Hulukudi mahajathre](https://www.harithalekhani.com/wp-content/uploads/2025/02/IMG-20250205-WA0001.jpg)
ದೊಡ್ಡಬಳ್ಳಾಪುರ ತಾಲೂಕಿನ 187 ಪುರುಷರು,123 ಮಹಿಳೆಯರು ಸೇರಿ 310.
ನೆಲಮಂಗಲ ತಾಲೂಕಿನ 98 ಪುರುಷರು, 122 ಮಹಿಳೆಯರು ಸೇರಿ 220 ಜನರಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಉಳಿದಂತೆ ಬೆಂಗಳೂರು ಉತ್ತರ ಹಾಗೂ ಅನ್ಯ ಜಿಲ್ಲೆಯ ಇಬ್ಬರು ಮಹಿಳೆಯರಿಗೆ ಸೋಂಕು ತಗುಲಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6620ಕ್ಕೆ ಏರಿಕೆಯಾಗಿದೆ. ಅಲ್ಲದೆ 23109 ಮಂದಿಯನ್ನು ಕಡ್ಡಾಯ ಗೃಹ ಬಂಧನದಲ್ಲಿ ಇಡಲಾಗಿದೆ.
ಇಂದಿನ ವರದಿಯ ಅನ್ವಯ 1592 ಮಂದಿಯ ಫಲಿತಾಂಶ ಬಾಕಿ ಉಳಿದಿದೆ.
(ಆತಂಕ ಬೇಡಾ, ಮುಂಜಾಗ್ರತೆ ಇರಲಿ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….