ಬೆಂಗಳೂರು: ತುಂಬಿದ ಗರ್ಭಿಣಿಗೆ ಕೋವಿಡ್ ದೃಢಪಟ್ಟ ಕಾರಣ ಆತಂಕಕ್ಕೆ ಒಳಗಾದ ಪತಿ, ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ನೆರವಿಗಾಗಿ ಮೊರೆಯಿಟ್ಟಿದ್ದು, ಮಾಜಿ ಸಚಿವರ ಸಮಯೋಚಿತ ಸ್ಪಂದನೆಯಿಂದ ಚಿಕಿತ್ಸೆ ದೊರೆತು, ಗರ್ಭಿಣಿ ಗಂಡು ಮಗುವಿಗೆ ಜನ್ಮನೀಡಿದ್ದಾರೆ.
ಈ ಕುರಿತು ಸುರೇಶ್ ಕುಮಾರ್ ಅವರು ಫೇಸ್‌ಬುಕ್ ನಲ್ಲಿ ಬರೆದುಕೊಂಡಿದ್ದು, ಗುರುವಾರ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಮದುವೆಯೊಂದರ ಆರತಕ್ಷತೆಯಿಂದ ಮನೆಗೆ ಬರುತ್ತಿದ್ದಾಗ ನನಗೆ ಕರೆಯೊಂದು ಬಂದಿತು.
ತನ್ನ ಪತ್ನಿ ತುಂಬು ಗರ್ಭಿಣಿಯಾಗಿದ್ದು ಆಕೆ ಕೋವಿಡ್ ಪಾಸಿಟಿವ್ ಎಂದು ಇದೀಗ ಗೊತ್ತಾಗಿದೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಆ ನಮ್ಮ ಕ್ಷೇತ್ರದ ವ್ಯಕ್ತಿ ತನ್ನ ಅಳಲು ತೋಡಿಕೊಂಡರು.
ತಕ್ಷಣ ನಾನು ನಮ್ಮ ಕ್ಷೇತ್ರದ ಹಿರಿಯ ಆರೋಗ್ಯ ಪರಿವೀಕ್ಷಕ ಸುಬ್ರಹ್ಮಣ್ಯ ಅವರಿಗೆ ಫೋನ್ ಮಾಡಿ ಅಗತ್ಯ ಟ್ರೈಯೇಜ್ ಪರೀಕ್ಷೆ ಮಾಡಿಸಿ ಸೂಕ್ತ ಸಹಾಯ ನೀಡಬೇಕು ಎಂದು ತಿಳಿಸಿದೆ. ಅದರಂತೆ ಸುಬ್ರಹ್ಮಣ್ಯ ರವರು ಕ್ರಮ ತೆಗೆದುಕೊಂಡು ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿದರು.
ಇಂದು ಬೆಳಗ್ಗೆ ಆಕೆ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ. ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಆರೋಗ್ಯ ಪರಿವೀಕ್ಷಕ ರಿಗೆ ಅಭಿನಂದನೆಗಳು ಎಂದವರು ತಿಳಿಸಿದ್ದಾರೆ.
ಮಾಜಿ ಸಚಿವರ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಪ್ರಶಂಸೆಗೆ ಕಾರಣವಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….