ದೊಡ್ಡಬಳ್ಳಾಪುರ: ತೀವ್ರವಾಗಿ ಹರಡುತ್ತಿರುವ ಕೋವಿಡ್ ಸೋಂಕನ್ನು ತಡೆಗಟ್ಟಲು ಘೋಷಿಸಲಾದ ವಾರಾಂತ್ಯದ ಕರ್ಫ್ಯೂ ಸೋಮವಾರ ಬೆಳಗ್ಗಿನ ಜಾವ 5ಕ್ಕೆ ಮುಗಿಯಲ್ಲಿದ್ದು, ಭಾನುವಾರ ಕರ್ಪ್ಯೂ ಬಿಸಿ ಅಲ್ಪ ಮಟ್ಟಿಗೆ ಜನರಿಗೆ ತಟ್ಟಿದೆ.
ಮಧ್ಯಾಹ್ನ ರಸ್ತೆಗಿಳಿದ ಪೊಲೀಸರು ಅವಶ್ಯಕವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳನ್ನು ವಾಹನಗಳನ್ನು ತಡೆದು ಪ್ರಶ್ನಿಸಿದರು. ಈ ವೇಳೆ ಮೂರು ವಾಹನಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿ ಕಳುಹಿಸಲಾಯಿತು.
ಉಳಿದಂತೆ ದೊಡ್ಡಬಳ್ಳಾಪುರ ನಗರ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಪಾಡ ಸುಮಾರು 55 ಜನರಿಗೆ ದಂಡ ವಿಧಿಸಲಾಗಿದೆ.
ನಗರ ಪೊಲೀಸ್ ಠಾಣೆ ಬ್ ಇನ್ಸ್ ಪೆಕ್ಟರ್ ಗೋವಿಂದ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ರಾತ್ರಿ ಸಹ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಪೊಲೀಸ್ ಇಲಾಖೆ ಮೂಲಗಳ ಹರಿತಲೇಖನಿಗೆ ತಿಳಿಸಿವೆ
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….