ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ. ಕನಕಪುರ ಕೋಟೆಯಿಂದ ಬೆಂಗಳೂರಿನವರೆಗೂ ಕಾಲ್ನಡಿಗೆ ಜಾಥಾ ಸಾಗಲಿದೆ.
ಇಂದಿನಿಂದ ಜನವರಿ 19ರವರೆಗೂ 11 ದಿನಗಳ ಕಾಲ ಪಾದಯಾತ್ರೆ ನಡೆಯಲಿದ್ದು, 165ಕ್ಕೂ ಹೆಚ್ಚು ಕಿಲೋ ಮೀಟರ್ ದೂರ ಹೆಜ್ಜೆ ಹಾಕಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ತಂಡ ತಯಾರಾಗಿದೆ.
ದಿನ 1: 15 ಕಿ.ಮೀ. ಪಾದಯಾತ್ರೆ (ಮೇಕೆದಾಟು ಸಂಗಮದಿಂದ ದೊಡ್ಡ ಆಲದಹಳ್ಳಿ)
ದಿನ 2 ಜನವರಿ 10: 16 ಕಿಲೋ ಮೀಟರ್ ಪಾದಯಾತ್ರೆ (ದೊಡ್ಡ ಆಲದಹಳ್ಳಿಯಿಂದ ಕನಕಪುರ)
ದಿನ 3 ಜನವರಿ 11: 14.5 ಕಿಲೋ ಮೀಟರ್ ಪಾದಯಾತ್ರೆ(ಕನಕಪುರದಿಂದ ಚಿಕ್ಕೇಹಳ್ಳಿ ಗ್ರಾಮ)
ದಿನ 4 ಜನವರಿ 12: 15 ಕಿಲೋ ಮೀಟರ್ ಪಾದಯಾತ್ರೆ (ಚಿಕ್ಕೇನಹಳ್ಳಿಯಿಂದ ರಾಮನಗರ ಟೌನ್)
ದಿನ 5 ಜನವರಿ 13: 13 ಕಿಲೋ ಮೀಟರ್ ಪಾದಯಾತ್ರೆ (ರಾಮನಗರ ಟೌನ್ನಿಂದ ಬಿಡದಿ ಟೌನ್)
ದಿನ 6 ಜನವರಿ 14: 16 ಕಿಲೋ ಮೀಟರ್ ಪಾದಯಾತ್ರೆ (ಬಿಡದಿ ಟೌನ್ನಿಂದ ಕೆಂಗೇರಿ ಪೊಲೀಸ್ ಸ್ಟೇಷನ್)
ದಿನ 7 ಜನವರಿ 15: 15.5 ಕಿಲೋ ಮೀಟರ್ ಪಾದಯಾತ್ರೆ (ಕೆಂಗೇರಿ ಪೊಲೀಸ್ ಸ್ಟೇಷನ್ನಿಂದ ಸಾರಕ್ಕಿ ಸಿಗ್ನಲ್)
ದಿನ 8 ಜನವರಿ 16: 16 ಕಿಲೋ ಮೀಟರ್ ಪಾದಯಾತ್ರೆ (ಸಾರಕ್ಕಿ ಸಿಗ್ನಲ್ನಿಂದ ಮಾರತ್ತಹಳ್ಳಿ ಜಂಕ್ಷನ್)
ದಿನ 9 ಜನವರಿ 17: 13.5 ಕಿಲೋ ಮೀಟರ್ ಪಾದಯಾತ್ರೆ (ಮಾರತ್ತಹಳ್ಳಿ ಜಂಕ್ಷನ್ನಿಂದ ಲಿಂಗರಾಜಿಪುರ ಜಂಕ್ಷನ್)
ದಿನ 10 ಜನವರಿ 18: 14 ಕಿಲೋ ಮೀಟರ್ ಪಾದಯಾತ್ರೆ (ಲಿಂಗರಾಜಿಪುರ ಜಂಕ್ಷನ್ನಿಂದ ಡಿಸಿಸಿ ಕಾಂಗ್ರೆಸ್ ಭವನ)
ದಿನ 11 ಜನವರಿ 19: 8 ಕಿಲೋ ಮೀಟರ್ ಪಾದಯಾತ್ರೆ (ಕಾಂಗ್ರೆಸ್ ಭವನದಿಂದ ನ್ಯಾಷನಲ್ ಕಾಲೇಜು, ಬಸವನಗುಡಿ) ಜನವರಿ 19ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಸಲು ಸಿದ್ದತೆ ನಡೆಸಲಾಗಿದೆ.
ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ವೀಕೆಂಡ್ನಲ್ಲಿ ರಾಜಕೀಯ, ಸಭೆ, ಸಮಾರಂಭಗಳಿಗೆಲ್ಲಾ ನಿಷೇಧವಿದೆ. ಈ ನಿಯಮದ ಮಧ್ಯೆಯೂ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ಕೈ ನಾಯಕರನ್ನು ಅರೆಸ್ಟ್ ಮಡುವುದು ಬೇಡಾ ಎಂದು ಹಿರಿಯ ಸಚಿವರು ಸಿಎಂ ಬೊಮ್ಮಾಯಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಅಲ್ಲದೆ ಕಾಂಗ್ರೆಸ್ ನಾಯಕರು ನಿಯಮ ಉಲ್ಲಂಘಿಸಿದರು ಅಂತಾ ಜನರ ಮುಂದೆ ತೋರಿಸಿ. ಕರೊನಾ ಸಮಸ್ಯೆ ಆದರೆ ಅವರೇ ಜವಾಬ್ದಾರಿಯಾಗುತ್ತಾರೆ. ಸರ್ಕಾರದಷ್ಟೇ ಅವರಿಗೂ ಜವಾಬ್ದಾರಿ ಇದೆ. ಪಾದಯಾತ್ರೆ ಮಾಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಿರಿಯ ಸಚಿವರು ಸಲಹೆ ನೀಡಿದ್ದಾರೆ. ಸಚಿವರ ಮಾತಿಗೆ ಸಿಎಂ ಬೊಮ್ಮಾಯಿ ಕೂಡ ಸಹಮತ ವ್ಯಕ್ತಪಡಿಸಿದ್ದು, 500 ಜನ ಸೇರಿದರು ಬಂಧಿಸದಂತೆ ನಿರ್ಧಾರ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….