ದೊಡ್ಡಬಳ್ಳಾಪುರ: ನಗರದ ವಾಸವಿ ಕಲ್ಯಾಣ ಮಂದಿರದ ಪಕ್ಕದಲ್ಲಿನ ಶ್ರೀ ವೈಕುಂಠ ಜನಾರ್ದನ ಸ್ವಾಮಿ ದೇವಾಲಯದಲ್ಲಿ ಡಿ.23ರಂದು ಇ-ಶ್ರಮ್ ಕಾರ್ಡ್ ಅಭಿಯಾನವನ್ನು ಆಯೋಜಿಸಲಾಗಿದೆ.
ಭಾರತ ಸರ್ಕಾರದ ಉದ್ಯೋಗದ ನೇಮಕಾತಿ ಸಚಿವಾಲಯ (NDUW ), ಕಾರ್ಮಿಕ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ,), ದೊಡ್ಡಬಳ್ಳಾಪುರ ತಾಲ್ಲೂಕು, ಶ್ರೀ ಗಾಯತ್ರಿ ವಿಪ್ರ ವೇದಿಕೆ, ದೊಡ್ಡಬಳ್ಳಾಪುರ ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿರುದ್ಧಿ ಸಂಘ (ರಿ,) ಮತ್ತು ಸಾಮಾನ್ಯ ಸೇವಾ ಕೇಂದ್ರ ಇವರ ಸಹಕಾರದೊಂದಿಗೆ ಈ ಅಭಿಯಾನವನ್ನು ಏರ್ಪಡಿಸಲಾಗಿದೆ.
ಅಭಿಯಾನ ಬೆಳಿಗ್ಗೆ 11.00 ರಿಂದ ಆರಂಭಾವಾಗಿ ಸಂಜೆಯವರೆಗೂ ನಡೆಸಲಾಗುತ್ತಿದ್ದು, ಅರ್ಹ ಫಲಾನುಭವಿಗಳು
ಆಧಾರ್ ಕಾರ್ಡ್ ಒರಿಜಿನಲ್ ಹಾಗೂ ಝೆರಾಕ್ಸ್, ಬ್ಯಾಂಕ್ ಪಾಸ್ಬುಕ್ ಒರಿಜಿನಲ್ ಹಾಗೂ ಝೆರಾಕ್ಸ್, ಆಧಾರ್ ಲಿಂಕ್ ಆಗಿರುವ ಮೊಬೈಲ್ (OTP ಬರುವ ಕಾರಣ ಆಧಾರ್ ಲಿಂಕ್ ಆಗಿರುವ ಮೊಬೈಲ್) ತರಲು ಪ್ರಕಟಣೆ ಕೋರಿದೆ.
ಹೆಚ್ಚಿನ ಮಾಹಿತಿ: 918027622133 (Labour office), 9902536681, 9620445122 ಸಂಪರ್ಕಿಸಲು ಕೋರಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….