ಮೇಷ: ಪ್ರತಿಯೊಂದು ಕೆಲಸದಲ್ಲಿಯೂ ವಿಳಂಬ ಉಂಟಾಗುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳು ಹೆಚ್ಚಾಗುವವು. ವೃಥಾ ತಿರುಗಾಟ ಇರುವುದು ಆದರೂ ಕೀರ್ತಿದಾಯಕ ಫಲವಿದೆ.
ವೃಷಭ: ಮಾತು ಹಿಡಿತದಲ್ಲಿರಲಿ. ಅನವಶ್ಯಕ ವಾಗ್ವಾದ ಉಂಟಾಗುವ ಸಂಭವವಿದೆ. ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಕಂಡುಬರುವುದು. ಹಿತೈಷಿಗಳ ಸಲಹೆಯಂತೆ ಮುಂದುವರೆಯಿರಿ.
ಮಿಥುನ: ಕೈಹಾಕಿದ ಕೆಲಸಗಳು ನಿರಾತಂಕವಾಗಿ ಮುಂದುವರೆಯುವವು. ಉತ್ತಮವಾದ ಸಮಯ ಇರುವುದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರುವುದು. ಹೊಸ ಯೋಜನೆಗಳಿಗೆ ಚಾಲನೆ ದೊರೆಯುವುದು.
ಕಟಕ: ಉನ್ನತ ಹುದ್ದೆ ದೊರೆಯುವ ಸಾಧ್ಯತೆ ಇದೆ. ಸಾಧನೆಗೆ ಸೂಕ್ತ ಅವಕಾಶ ದೊರೆಯುವುದು. ಹಣಕಾಸಿನ ತೊಂದರೆಗಳು ಪರಿಹಾರವಾಗುವವು. ವ್ಯವಹಾರಗಳಲ್ಲಿ ಗೌಪ್ಯತೆ ಇರಲಿ. ಹಿತಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ.
ಸಿಂಹ: ಪೂರ್ವತಯಾರಿ ಇಲ್ಲದ ಕೆಲಸವನ್ನೂ ಸಕಾಲಕ್ಕೆ ಮುಗಿಸುವಿರಿ. ಅನಿಯಮಿತ ಬದುಕು ಇರುವುದು. ಮೇಲಧಿಕಾರಿಗಳ ಒತ್ತಡ ಬೇಸರ ತರುವುದು. ಕಾರ್ಯಕ್ಷೇತ್ರದಲ್ಲಿ ಗೌರವ ಪ್ರಾಪ್ತಿಯಾಗುವುದು. ಶ್ರಮಕ್ಕೆ ತಕ್ಕ ಲಾಭ ದೊರೆಯುವುದು.
ಕನ್ಯಾ: ಸಹನೆ ಇಲ್ಲದ ಆತುರದ ನಡೆಯಿಂದ ಹಾನಿ ಸಂಭವ ಎಚ್ಚರಿಕೆ ವಹಿಸಿರಿ. ಅನೀರೀಕ್ಷಿತವಾಗಿ ಬರುವ ವಿಘ್ನಗಳು ತಾವಾಗಿಯೇ ಪರಿಹಾರ ಕಾಣುವವು. ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಸಿದ್ಧಿಸುವವು.
ತುಲಾ: ಭಾವುಕತೆಯಿಂದ ಕಾರ್ಯಸಾಧಿಸಲು ಪ್ರಯತ್ನಿಸುವಿರಿ. ಪರಾವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ. ಸಂಶಯಿತ ನಡೆಯಿಂದ ಮನಸ್ತಾಪ. ಸಣ್ಣಪುಟ್ಟ ಕೆಲಸಗಳೂ ವಿಳಂಬವಾಗುವ ಸಾಧ್ಯತೆ ಇದೆ. ಅಭದ್ರತೆ ಕಾಡುವುದು.
ವೃಶ್ಚಿಕ: ಅನವಶ್ಯಕ ಅಲೆದಾಟದ ಸಾದ್ಯತೆ ಇದೆ. ಕರ್ತವ್ಯಕ್ಕೆ ಚ್ಯುತಿಯಾಗದಂತೆ ನಡೆದುಕೊಳ್ಳಲು ಪ್ರಯತ್ನ ಮಾಡುವಿರಿ. ಹಿತಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ಆರ್ಥಿಕ ಬಲ ಕುಗ್ಗುವ ಸಂಭವವಿದೆ. ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ.
ಧನಸ್ಸು: ಅನಿರೀಕ್ಷಿತ ಧನ ನಷ್ಟ. ತಿರುಗಾಟ ಒದಗಿಬಂದು, ದೇಹಾಲಸ್ಯವು ತಲೆ ದೋರುವುದು, ಅರ್ಥಾರ್ಜನೆಯ ಮಾರ್ಗವು ಸುಗಮವಿದ್ದು, ಸಾಂಸಾರಿಕ ದೃಷ್ಟಿಯಲ್ಲೂ ಉತ್ತಮವಿರುವುದರಿಂದ ಚಿಂತೆಯ ಅವಶ್ಯಕತೆ ಇಲ್ಲ.
ಮಕರ: ಅತಿಯಾದ ಆತ್ಮವಿಶ್ವಾಸ, ಆಲಸ್ಯದಿಂದ ಬಹುವಿಧವಾದ ಕಷ್ಟನಷ್ಟಗಳ ಅನುಭವವಾಗುವುದು. ಸಹನೆಯಿಂದ ವ್ಯವಹರಿಸಿರಿ. ಗುರುಬಲ ವೃದ್ಧಿಸುವುದು. ಮದುವೆಯ ಸಂಭ್ರಮದ ವಾತಾವರಣ ಕಂಡುಬರುವುದು. ಹಿರಿಯರ ಮಾತಿನಂತೆ ನಡಯುವುದು ಉತ್ತಮ.
ಕುಂಭ: ಅಲ್ಪ ತ್ರಾಸದಾಯಕ. ಗಡಿಬಿಡಿಯ ವಾತಾವರಣ, ಆರೋಗ್ಯದಲ್ಲಿ ಏರುಪೇರು ಸಂಭವ. ಮಹತ್ವದ ಕೆಲಸಗಳನ್ನು ಮುಂದೂಡುವುದು ಒಳ್ಳೆಯದು. ಮಂಗಳಕಾರ್ಯ, ಹೆಸರು, ಕಡಲೆ ದಾನ ಮಾಡಿರಿ.
ಮೀನ: ಆರಂಭದಲ್ಲಿ ಹರ್ಷ, ಉತ್ಸಾಹ ಇರುವುದು ಕೊನೆಗೆ ಮನೋವ್ಯಥೆ. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಗ್ರಹೋಪಯೋಗಿ ವಸ್ತುಗಳ ಖರೀದಿ, ಮನೆ ರಿಪೇರಿ ಮೊದಲಾದ ಕೆಲಸಗಳಾಗುವವು. ಶ್ರೀಲಕ್ಷ್ಮೀಸ್ತೋತ್ರ ಪಠಿಸಿರಿ.
ತಿಥಿ: ತೃತೀಯ
ನಕ್ಷತ್ರ: ಪುಷ್ಯ ನಕ್ಷತ್ರ
ರಾಹುಕಾಲ: 12:22 ರಿಂದ 01:47
ಗುಳಿಕಕಾಲ: 10:56 ರಿಂದ 12:22
ಯಮಗಂಡಕಾಲ: 08:04 ರಿಂದ 09:30
ಈ ದಿನದ ವಿಶೇಷ: ಶ್ರೀ ಸಂಕಷ್ಟಹರ ಚತುರ್ಥಿ, ಚಂದ್ರೋದಯ: 8:48PM
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್. ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು. ಮೊ:9620445122
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….