ದೊಡ್ಡಬಳ್ಳಾಪುರ: ಸತತವಾಗಿ ಸುರಿದ ಮಳೆಗೆ ಸುಮಾರು 23 ವರ್ಷಗಳ ನಂತರ ತುಂಬಿದ ನಗರದ ನಾಗರಕೆರೆಗೆ ಭಾರತಿಯ ಜನತಾ ಪಕ್ಷದ ಮುಖಂಡರು, ನಗರಸಭೆ ಅಧ್ಯಕ್ಷೆ ಸದಸ್ಯರು ಬಾಗಿನ ಅರ್ಪಿಸಿದರು.
ಮಂಗಳ ವಾದ್ಯದೊಂದಿಗೆ ಕೆರೆ ಕೋಡಿ ಬಳಿ ಬಂದ ಮುಖಂಡರು ಮಹಿಳೆಯರಿಂದ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ನಗರ ಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ, ಸದಸ್ಯರಾದ ಶಿವಶಂಕರ್, ಬಂತಿ ವೆಂಕಟೇಶ್, ಮುಖಂಡರಾದ ಉಮಾಮಹೇಶ್ವರಿ, ಲೀಲಾಮಹೇಶ, ವತ್ಸಲ, ಕಮಲಾ ಶ್ರೀನಿವಾಸ, ವಾಣಿ ನಂದಕುಮಾರ್, ಶ್ವೇತಾ ಶಿವಶಂಕರ, ಸುಶೀಲಾ ರಾಘವ, ನಯನಾ ಸೇರಿದಂತೆ ಬಿಜೆಪಿಯ ಅನೇಕ ಮುಖಂಡರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……