ದೊಡ್ಡಬಳ್ಳಾಪುರ: ಸತತವಾಗಿ ಸುರಿದ ಮಳೆಗೆ ಸುಮಾರು 23 ವರ್ಷಗಳ ನಂತರ ತುಂಬಿದ ನಾಗರಕೆರೆಗೆ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ನಗರಸಭೆ ಸದಸ್ಯರು ಬಾಗಿನ ಅರ್ಪಿಸಿದರು.
ಮಂಗಳ ವಾದ್ಯದೊಂದಿಗೆ ಕೆರೆ ಕೋಡಿ ಬಳಿ ಬಂದ ಮುಖಂಡರು ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ವರುಣನ ಕೃಪೆಯಿಂದ ತಾಲೂಕಿನಲ್ಲಿ ಶೇ.40 ರಿಂದ 50 ಕೆರೆಗಳು ತುಂಬಿದ್ದು, ಮತ್ತಷ್ಟು ಕೆರೆಗಳು ತುಂಬುವ ಸಮೀಪದಲ್ಲಿದೆ. ಗುಂಡಮಗೆರೆ ಕೆರೆ ತಾಲೂಕಿನಲ್ಲಿ ಮೊದಲು ತುಂಬಿದ ಕೆರೆಯಾಗಿದ್ದು, ಎಲ್ಲಾ ಕೆರೆಗಳಿಗೂ ಬಾಗಿನ ಅರ್ಪಿಸಲಾಗುತ್ತಿದೆ.
ನಗರದ ಹೃದಯ ಭಾಗದಲ್ಲಿರುವ ನಾಗರಕೆರೆ ತುಂಬಿರುವುದು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಲು ಅನುಕೂಲವಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಪ್ರಸಾದ ವಿನಿಯೋಗ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಜೆ.ರಾಜೇಂದ್ರ, ಕಾಂಗ್ರೆಸ್ ನಗರ ಅಧ್ಯಕ್ಷ ಕೆ.ಪಿ.ಜಗನಾಥ್, ಕಸಬಾ ಹೋಬಳಿ ಅಧ್ಯಕ್ಷ ಅಪ್ಪಿ ವೆಂಕಟೇಶ್, ಮುಂಖಡರಾದ ಸೋಮರುದ್ರ ಶರ್ಮ, ಆಂಜನಮೂರ್ತಿ, ಹೇಮಂತರಾಜು, ಪು.ಮಹೇಶ್, ಅಖಿಲೇಶ್, ರೇವತಿ ಅನಂತರಾಮ್, ಬಶೀರ್, ರಾಮಾಂಜಿನಪ್ಪ, ಗುರುರಾಜ್, ಸೇರಿದಂತೆ, ನ್ಯಾಯವಾದಿ ರವಿ, ನಗರಸಭೆ ಸದಸ್ಯರು ಹಾಗೂ ಅನೇಕ ಮುಖಂಡರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……