ಯಲಹಂಕ: ಪಾಪಸ್ ಕಳ್ಳಿ ಎಂದರೆ ಉಪಯೋಗಕ್ಕೆ ಬಾರದ ಗಿಡ ಎಂಬುದು ಸಾಮಾನ್ಯವಾದ ವಿಚಾರ. ಆದರೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗವು ಶಾಖೆ ಆವರಣದಲ್ಲಿ ಸಂಶೋಧನೆ ಮಾಡಿ ಯಶಸ್ಸು ಕಂಡು ಪಾಪಸ್ ಕಳ್ಳಿಯಿಂದ ರೈತರಿಗೆ ಆಗುವ ಅನುಕೂಲಗಳನ್ನು ತೋರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಂಶೋಧನಾ ಕೇಂದ್ರದಲ್ಲಿ ಮುಳ್ಳು ಇಲ್ಲದ ಪಾಪಸ್ ಕಳ್ಳಿಯನ್ನು ಅಭಿವೃದ್ದಿ ಪಡಿಸಲಾಗಿದೆ. ಇದು ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ಬೆಳೆಯಬಹುದಾಗಿದ್ದು, ಹಸಿರು ಉಲ್ಲಿನಷ್ಟೆ ಇದರಲ್ಲೂ ಶೇ 6ರಿಂದ 8 ರಷ್ಟು ಪೋಷಕಾಂಶ ಇರುತ್ತದೆ. ಮೇವು ಬೆಳೆಯದ ಕಡೆಯಲ್ಲಿ ಬೆಳೆಯಬಹುದು.
ಕಳೆದ ಮೂರು ವರ್ಷದಿಂದ ರೈತರು ಉಪಯೋಗಿಸುತ್ತಿದ್ದು ಪೂನಾದಲ್ಲಿ ಕಂಡು ಹಿಡಿದಿದ್ದು ನಮ್ಮ ಕೇಂದ್ರದಲ್ಲಿ ಪ್ರಾಯೋಗಿಕವಾಗಿ ಬೆಳೆಯಬಹುದಾಗಿದೆ. ಒಂದು ಚಿಕ್ಕ ಎಲೆಯನ್ನು ಕಟಾವು ಮಾಡಿ ಹೂಣಿದರೆ ಅದು ಐದಾರು ತಿಂಗಳಲ್ಲಿ ಮೂರು ನಾಲ್ಕು ಎಲೆಯು ಬರುತ್ತದೆ. ಇದು ನಮ್ಮ ಮನೆಯಲ್ಲಿ ಸಾಕಿರುವ ಕುರಿ ಮೇಕೆಗಳಿಗೆ ಕತ್ತರಿಸಿ ನೀಡುಬಹುದು.
ಇತರ ಜಾನುವಾರುಗಳಿಗೆ ಉತ್ತಮ ಪೋಷಕಾಂಶ ಉಳ್ಳ ಮೇವು ರೂಪದಲ್ಲಿ ಬಳಸಬಹುದು ಎಂದು ಮೇವಿನ ಬೆಳೆಗಳ ವಿಭಾಗದ ಪ್ರಾಧ್ಯಾಪಕರಾದ ಡಾ. ಎಮ್. ಆರ್.ಕೃಷ್ಣಪ್ಪ ಸಲಹೆ ನೀಡುತ್ತಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……