ದೊಡ್ಡಬಳ್ಳಾಪುರ: ಶಾಲೆ ಕಾಲೇಜುಗಳಿಗೆ ತೆರಳುವ ಹಾಗೂ ಮರಳಿ ಬರುವ ವೇಳೆ ಸಮರ್ಪಕ ಸಾರಿಗೆ ಬಸ್ ನೀಡುವಂತೆ ಒತ್ತಾಯಿಸಿ, ನಡು ರಸ್ತೆಯಲ್ಲಿಯೇ ನಾಲ್ಕು ಬಸ್ಸುಗಳನ್ನು ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ನೆಲ್ಲುಕುಂಟೆ ಕ್ರಾಸ್ ಬಳಿ ನಡೆದಿದೆ.
ದೊಡ್ಡಬಳ್ಳಾಪುರದಿಂದ ಹೊಸಹಳ್ಳಿ ಮಾರ್ಗಕ್ಕೆ ತೆರಳುವ ಬಸ್ ಮಾರ್ಗದಲ್ಲಿ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸಕ್ಕೆಂದು ದೊಡ್ಡಬಳ್ಳಾಪುರಕ್ಕೆ ತೆರಳುವುದರಿಂದ ಅಗತ್ಯ ಬಸ್ ಸೌಲಭ್ಯ ಇಲ್ಲದೆ ಪರದಾಡುವಂತಾಗಿದೆ ಎಂಬುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣ.
ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹೊಸಹಳ್ಳಿ – ದೊಡ್ಡಬಳ್ಳಾಪುರ, ಕಲ್ಲುಕುಂಟೆ – ದೊಡ್ಡಬಳ್ಳಾಪುರ, ಕೊಟ್ಟಿಗೇ ಮಾಚೇನಹಳ್ಳಿ – ದೊಡ್ಡಬಳ್ಳಾಪುರ, ಉಜ್ಜನಿ – ದೊಡ್ಡಬಳ್ಳಾಪುರ ನಡುವೆ ಸಂಚರಿಸುವ ಬಸ್ ಗಳನ್ನು ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ವಿಷಯ ತಿಳಿದ ಡಿಪೋ ವ್ಯವಸ್ಥಾಪಕರು ಮತ್ತೊಂದು ಬಸ್ ಅನ್ನು ಕಳುಹಿಸಿದ್ದು, ಈ ಬಸ್ ಒಂದು ದಿನಕ್ಕೆ ಸೀಮಿತವಾಗದೇ ನಿತ್ಯ ಸಂಚರಿಸಬೇಕೆಂಬ ಷರತ್ತಿನ ಮೇಲೆ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.
ಇದೇ ರೀತಿ ಮಂಗಳವಾರ ಸಂಜೆ ಸಹ ಕಂಟನಕುಂಟೆ ಬಳಿಮಿತಿ ಮೀರಿದ ಪ್ರಯಾಣಿಕರು ತುಂಬಿ, ಬಸ್ ಹತ್ತಲು ಸಾದ್ಯವಾಗದ ಕಾರಣ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……