ದೊಡ್ಡಬಳ್ಳಾಪುರ: ಚಾಕು ತೋರಿಸಿ ಸಾರ್ವಜನಿಕರಿಂದ 4 ಸಾವಿರ ಹಣ ಕಸಿದು, ದ್ವಿಚಕ್ರ ವಾಹನದಲ್ಲಿ ಪರಾರಿಯಾಗುತ್ತಿದ್ದ ಖದೀಮರನ್ನು ಬೆನ್ನಟ್ಟಿದ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದ ರಾಮಣ್ಣನ ಬಾವಿ ಬಳಿ ನಡೆದಿದೆ.
ರೈಲ್ವೇ ಸ್ಟೇಷನ್ ಬಳಿ ಬೆದರಿಸಿ ಹಣ ಕಸಿದಿದ್ದಾರೆ ಎನ್ನಲಾದ ದರೋಡೆಕೋರರು ದ್ವಿಚಕ್ರ ವಾಹನದಲ್ಲಿ ಪರಾರಿಯಾಗುತ್ತಿದ್ದ ವೇಳೆ ಬೆನ್ನತ್ತಿದ ಸಾರ್ವಜನಿಕರು, ರೈಲ್ವೆ ಸ್ಟೇಷನ್ ವೃತ್ತದಿಂದ ರಂಗಪ್ಪ ಸರ್ಕಲ್ ವರೆಗೆ ಚೇಸ್ ಮಾಡಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಾಲ್ಕು ಮಂದಿ ಖದೀಮರಲ್ಲಿ, ಇಬ್ಬರು ಖದೀಮರು ಪರಾರಿಯಾಗಿದ್ದು. ಸಿಕ್ಕಿಬಿದ್ದ ಮತ್ತಿಬ್ಬರಿಗೆ ಸಾರ್ವಜನಿಕರು ಗೂಸ ನೀಡಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಬಳಿಕವೂ ಓರ್ವ ಪರಾರಿಯಾಗಲು ಯತ್ನಿಸಿ ಒಂಟಿ ಮನೆಗೆ ನುಗ್ಗಿದು, ಮನೆಯ ಶೆಡ್ ನಲ್ಲಿ ಅವಿತು ಕುತಿದ್ದ ಕಳ್ಳನನ್ನ ನಗರ ಠಾಣೆ ಪೊಲೀಸರು ಹಿಡಿದು, ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿಗೆ ಒಪ್ಪಿಸಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.
ಬಂಧಿತರನ್ನು ಬೆಂಗಳೂರು ಮೂಲದ ಇಮ್ರಾನ್, ಸಾದೀಕ್ ಎನ್ನಲಾಗಿದೆಯಾದರೂ, ಪೊಲೀಸ್ ಇಲಾಖೆಯಿಂದ ಇದುವರೆಗೂ ಈ ಕುರಿತು ಅಧಿಕೃತ ಮಾಹಿತಿ ದೊರೆತಿಲ್ಲ.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..