ದೊಡ್ಡಬಳ್ಳಾಪುರ: ನಗರದ 4ನೇ ವಾರ್ಡ್,ವಿನಾಯಕನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಖಿ ಒನ್ ಸ್ಟಾಪ್ ಸೆಂಟರ್ ವತಿಯಿಂದ ವಾರ್ಡಿನಲ್ಲಿರುವ ಹೆಣ್ಣುಮಕ್ಕಳಿಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ನಗರಸಭೆ ಸದಸ್ಯೆ ಬಿ.ನಾಗರತ್ನಮ್ಮ ಕೃಷ್ಣಮೂರ್ತಿ ಉದ್ಘಾಟಿಸಿದರು.
ಹಿರಿಯ ಕಾನೂನು ಸಲಹೆಗಾರರಾದ ಚಿನ್ನಮ್ಮನವರು ಮಹಿಳೆಯರ ರಕ್ಷಣೆ ಕುರಿತಾದ ಕಾನೂನಿನಲ್ಲಿರುವ ಸೌಲಭ್ಯಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂಘಟನಾ ಆಡಳಿತ ಅಧಿಕಾರಿ ಸುಮ ಪಾಟೀಲ್, ಸಖಿ ಓನ್ ಸ್ಟಾಪ್ ಸೆಂಟರ್ ನ ಸಿಬ್ಬಂದಿ ಸಹನ, ಶಾಲೆಯ ಮುಖ್ಯಶಿಕ್ಷಕ ಬಾಲಕೃಷ್ಣನಾಯಕ್, ಸಹ ಶಿಕ್ಷಕರಾದ ಲೋಕೇಶ್, ಹಾಗೂ ನಗರ ಬಿಜೆಪಿ ಕಾರ್ಯದರ್ಶಿ ತಿಮ್ಮರಾಜ್, ಆಶಾ ಕಾರ್ಯಕರ್ತೆ ಮಂಜಮ್ಮ ಮತ್ತಿತರರಿದ್ದರು .
ಕಾರ್ಯಕ್ರಮದ ಅಂಗವಾಗಿ ವಾರ್ಡಿನ ಪ್ರಮುಖ ರಸ್ತೆಯಲ್ಲಿ ಜನಜಾಗೃತಿ ಜಾಥಾವನ್ನು ನಡೆಸಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……