ಬೆಂಗಳೂರು: ಸಚಿವ ಎಸ್.ಟಿ.ಸೋಮಶೇಖರ್ ಅವರ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಭೇಟಿ ನೀಡಿ, ಸೋಮಶೇಖರ್ ತಾಯಿಯ ಜತೆ ಮಾತನಾಡಿದ್ದಾರೆ.
ಸಹಕಾರ ಸಚಿವ ಸೋಮಶೇಖರ್ ಅವರ ತಾಯಿ ಸೀತಮ್ಮ ತಿಮ್ಮೇಗೌಡ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ದೊಡ್ಡ ಅಭಿಮಾನಿಯಂತೆ. ಈ ಕಾರಣಕ್ಕೆ ಮಗನ ಜೊತೆ ನಾನು ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಬೇಕು ಎಂದು ತಮ್ಮ ಆಸೆಯನ್ನು ಹೇಳಿಕೊಂಡಿದ್ದರೆನ್ನಲಾಗಿದೆ.
ಸೋಮಶೇಖರ್ ಅವರ ತಾಯಿಯ ಆಸೆ ತಿಳಿದ ಎಸ್.ಎಂ.ಕೃಷ್ಣ, ಹಿರಿಯರಾದ ತಾಯಿ ನಮ್ಮ ಮನೆವರೆಗೆ ಬರುವುದು ಬೇಡ. ನಾನೇ ನಿಮ್ಮ ಮನೆಗೆ ಬರುತ್ತೇನೆ ಎಂದು ಸೋಮಶೇಖರ್ ಮನೆಗೆ ಭೇಟಿ ನೀಡಿದ್ದಾರೆ.
ಅಮ್ಮನ ಆಸೆಯನ್ನು ಈಡೇರಿಸಲು ಸೋಮಶೇಖರ್, ತಮ್ಮ ಮನೆಗೆ ಕೃಷ್ಣರನ್ನು ಕರೆದೊಯ್ದಿದ್ದಾರೆ. ಹಲವು ದಿನಗಳ ಆಸೆ ಪೂರೈಸಿದ ಮಗ ಸೋಮಶೇಖರ್ ತಾಯಿಯ ಸಂತಸ ಕಂಡು ಹರ್ಷಗೊಂಡರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……