ದೊಡ್ಡಬಳ್ಳಾಪುರ: ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಇಂದು 97ನೇ ವರ್ಷದ ಜನ್ಮದಿನದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ನಗರದ ಶ್ರೀ ಆರ್.ಎಲ್.ಜಾಲಪ್ಪ ಶಿಕ್ಷಣ ಸಮೂಹ ಸಂಸ್ಥೆಗಳವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಮೊದಲಿಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬ್ರೆಡ್, ಹಣ್ಣು, ಬಿಸ್ಕತ್ ವಿತರಿಸಲಾಯಿತು. ನಂತರ ಕಾಲೇಜಿನ ಆವರಣದಲ್ಲಿ ಜಾಲಪ್ಪ ಕುಟುಂಬದವರು ಅಂಚೆ ಇಲಾಖೆಯ ಸಹಯೋಗದೊಂದಿಗೆ ಹೊರತಂದಿರುವ ಜಾಲಪ್ಪರ ಭಾವಚಿತ್ರವುಳ್ಳ ಅಂಚೆ ಚೀಟಿಯನ್ನು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಜಾಲಪ್ಪರ ಮೊಮ್ಮಗ ರಾಕೇಶ್, ಇಂಜಿನಿಯರಿಂಗ್ ವಿಭಾಗದ ಎಇಇ ರಮೇಶ್, ಶ್ರೀ ದೇವರಾಜ್ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಯ ವ್ಯವಸ್ಥಾಪಕ ಎಸ್.ರವಿಕುಮಾರ್ ಮತ್ತಿತರರಿದ್ದರು.
ತಾಲೂಕಿನ ತೂಬಗೆರೆ ಗ್ರಾಮದ ಆರ್.ಎಲ್.ಜಾಲಪ್ಪನವರು ತಾಲೂಕಿನ ರಾಜಕೀಯ ಮುತ್ಸದ್ದಿ ಎಂದೇ ಬಿರುದಾಂಕಿತರಾದವರು, ಇವರು 4 ಬಾರಿ ಲೋಕಸಭೆಯ ಸದಸ್ಯರು ಮತ್ತು ಕೇಂದ್ರ ಸರಕಾರದ ಮಾಜಿ ಮಂತ್ರಿಗಳು ಆಗಿದ್ದರು. ಇವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅಲ್ಲದೆ ಕರ್ನಾಟಕ ವಿಧಾನಸಭೆಯ ಸದಸ್ಯರು ಕೂಡಾ ಆಗಿದ್ದು, ಪ್ರಸ್ತುತ ವೃದ್ಧಾಪ್ಯ ಜೀವನ ನಡೆಸುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…