ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಮೂರು ದಿನಗಳಿಂದ ಬಿಳುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿನ ರಾಗಿ, ಅಡಿಕೆ ಸೇರಿದಂತೆ ತರಕಾರಿ ಬೆಳೆಗಳು ಜಲಾವೃತ್ತಗೊಂಡಿವೆ. ಹಾಗೆಯೇ ದೊಡ್ಡಬಳ್ಳಾಪುರ ನಗರದ ವೀರಭದ್ರನಪಾಳ್ಯದಲ್ಲಿ ಮನೆಯ ಗೋಡೆ ಕುಸಿದಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕೂಲಿ ಕೆಲಸ ಮಾಡಿ ಸುಮಾರು 35 ವರ್ಷಗಳ ಹಿಂದೆ ಕಟ್ಟಿಸಿದ್ದ ಮನೆ ಮಳೆ ಹೆಚ್ಚಾಗಿದ್ದರಿಂದ ಗೋಡೆ ಕುಸಿತವಾಗಿದೆ ಎಂದು ವೃದ್ದೆ ಅಕ್ಕಯ್ಯಮ್ಮ ಅಳಲು ತೋಡಿಕೊಂಡಿದ್ದಾರೆ.
ಇದ್ದ ಒಬ್ಬ ಮಗ ಹೆಂಡತಿಯ ಮನೆ ಸೇರಿಕೊಂಡಿದ್ದಾನೆ. ಆರು ತಿಂಗಳ ಹಿಂದೆಯಷ್ಟೇ ಗಂಡ ಸಹ ಮೃತಪಟ್ಟಿದ್ದಾರೆ. ಈಗ ನೋಡಿದರೆ ಮನೆ ಗೋಡೆಯು ಕುಸಿದಿದೆ. ಹೆಗೋ ಜೀವನ ನಡೆಸುತ್ತಿದ್ದ ನನಗೆ ಆಸೆರೆಯಾಗಿದ್ದ ಸೂರು ಈಗ ಇಲ್ಲದಾಗಿದ್ದು, ದಿಕ್ಕೇ ತೋಚದಾಗಿದೆ ಎಂದರು.
ದಾಬಸ್ಪೇಟೆ-ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಸುಮಾರು ಆರು ವರ್ಷಗಳಿಂದಲು ಮಳೆ ನೀರು ಹರಿದು ಹೋಗುತ್ತಿದ್ದ ರಾಜಕಾಲುವೆಯನ್ನು ಮುಚ್ಚಲಾಗಿದೆ. ಹೀಗಾಗಿ ಕೆರೆಗೆ ಹೋಗಬೇಕಿದ್ದ ನೀರು ರಾಜಕಾಲುವೆ ಅಕ್ಕಪಕ್ಕದಲ್ಲಿನ ಅಡಿಕೆ, ಬಾಳೆ,ರಾಗಿ ಹಾಗೂ ಜೋಳಕ್ಕೆ ನುಗ್ಗುತ್ತಿವೆ. ಇದರಿಂದ ವಾರಗಟ್ಟಲೆ ನೀರು ನಿಂತು ಬೆಳೆ ಹಾಳಾಗುತ್ತಿದೆ ಎಂದು ಕಸಬಾ ಹೋಬಳಿ ಕೊಡಿಗೇಹಳ್ಳಿ ಗ್ರಾಮದ ರೈತ ಮುರುಳಿ ಅಳಲು ತೋಡಿಕೊಂಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….