ದೊಡ್ಡಬಳ್ಳಾಪುರ: ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾ, ಜಿ ಕೆ ವಿ ಕೆ ಹಾಗು ನವೋದಯ ಚಾರಿಟೆಬಲ್ ಟ್ರಸ್ಟ್ ಸಹಯೋಗದಲ್ಲಿ ತಾಲೂಕಿನ ಮೆಳೇಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ರಾಷ್ಟ್ರೀಯ ವನ್ಯಜೀವಿ ಸಪ್ತಾಹ’ ಆಚರಿಸಲಾಯಿತು.
ಅಕ್ಟೋಬರ್ 2 ರಿಂದ 8 ರ ವರೆಗೂ ನಡೆಯುವ ಈ ಸಪ್ತಾಹವನ್ನು ಶಾಲಾ ಮಕ್ಕಳಿಗೆ ವನ್ಯಜೀವಿಗಳ ಕುರಿತು ಅರಿವು ಮತ್ತು ರಸಪ್ರೆಶ್ನೆ ಕಾರ್ಯಕ್ರಮವನ್ನು ಆಚರಿಸುವುದರ ಮೂಲಕ ಆಚರಿಸಲಾಯಿತು ಮತ್ತು ಸಸಿ ನೆಡುವುದರ ಮೂಲಕ ಉದ್ಘಾಟಿಸಲಾಯಿತು.
ಡಬ್ಲ್ಯೂ ಡಬ್ಲ್ಯೂ ಎಫ್ ಸಂಸ್ಥೆಯ ಹಿರಿಯ ಯೋಜನಾಧಿಕಾರಿ ಲೋಹಿತ್.ವೈ.ಟಿ ಮಾತನಾಡಿ, ಹುಲಿ, ಆನೆಗಳನ್ನಷ್ಟೆ ವನ್ಯಜೀವಿಗಳೆಂದು ಪರಿಗಣಿಸಿದರೆ ಸಾಲದು, ಸಾಕು ಪ್ರಾಣಿಗಳನ್ನೂರತುಪಡಿಸಿ ನಮ್ಮ ಸುತ್ತಮುತ್ತಲಿನ ಪಕ್ಷಿಗಳು, ಕೀಟಗಳು, ಜೇಡಗಳು, ಸರೀಸೃಪಗಳು, ಜಲಚರಗಳು ಹಾಗೂ ಇತರೆ ಜೀವಿಗಳೆಲ್ಲವೂ ವನ್ಯಜೀವಿಗಳೆ ಮತ್ತು ಕೃಷಿಯನ್ನೊರೆತು ಪಡಿಸಿದ ಎಲ್ಲಾ ಸಸ್ಯವರ್ಗವೂ ವನ್ಯಜೀವಿಗಳೆಂದು ಪರಿಗಣಿಸಲಾಗುವುದು ಎಂದು ತಿಳಿಸಿದರು.
ಕಳೆದ 50 ವರ್ಷಗಳಲ್ಲಿ ಶೇ 70 ಪ್ರತಿಷ್ಠಿತ ಕಶೇರುಕಗಳ ನಾಶ, 75 ಪ್ರತಿಷಿತ ಕೀಟಗಳ ನಾಶ ಮತ್ತು 98 ಪ್ರತಿಷಿತ ರಣಹದ್ದುಗಳ ನಾಶವಾಗಿದೆ. ಭೂಮಿಯ ಮೇಲೆ ವನ್ಯಜೀವಿಗಳು ನಶಿಸಿದರೆ ಮಾನವ ಜನಾಂಗವು ನಶಿಸುತ್ತದೆ ಎಂದು ಎಚ್ಚರಿಸಿದರು.
ಅರಣ್ಯ ಇಲಾಖೆಯ ಸುಭಾಷ್ ಮಾತನಾಡಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ವನ್ಯಜೀವಿಗಳನ್ನು ರಕ್ಷಿಸಲಾಗುವುದು ಹಾಗು ಅವುಗಳಿಗೆ ತೊಂದರೆ ನೀಡುವುದು ಕಾನೂನಿನ ಪ್ರಕಾರ ಅಪರಾಧ ಎಂದು ತಿಳಿಸಿದರು.
ಮುಖ್ಯಶಿಕ್ಷಕ ಚಿದಾನಂದ ಐಹೊಳೆ ಮಾತನಾಡಿ, ಮಕ್ಕಳು ವಯಸ್ಸಿನಿಂದಲೆ ಪರಿಸರ ಹಾಗೂ ವನ್ಯಜೀವಿಗಳ ಕುರಿತು ಆಸಕ್ತಿ ಮೂಡಿಸಿಕೊಳ್ಳಬೇಕು ಮತ್ತು ಸಂರಕ್ಷಣೆ ಕಾರ್ಯದಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ಜಿ.ಕೆ.ವಿ.ಕೆ ಯ ವಿದ್ಯಾರ್ಥಿಗಳು ಶಾಲಾಮಕ್ಕಳಿಗೆ ವನ್ಯಜೀವಿಗಳ ಕುರಿತ ರಸಪ್ರಶ್ನೆ ಕಾರ್ಯಕ್ರಮ ನಡೆಸಿದರು ಮತ್ತು ಪಕ್ಷಿ ಕೈಪಿಡಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮೆಳೇಕೋಟೆ ಗ್ರಾಮ ಪಂಚಾಯತಿ ಸದಸ್ಯರಾದ ನಂಜೇಗೌಡ, ಹೈದರಾಲಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷನಂದೀಶ್, ನವೋದಯ ಚಾರಿಟೆಬಲ್ ಟ್ರಸ್ಟ್‌ನ ಜನಾರ್ಧನ.ಆರ್, ಜಿ.ಕೆ.ವಿ.ಕೆ ವಿದ್ಯಾರ್ಥಿ ಸಂಚಾಲಕಿ ಪೂಜಾ ರೆಡ್ಡಿ ಹಾಗು ಸಹಪಾಠಿಗಳು, ಶಾಲಾ ಶಿಕ್ಷಕರು ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….