ಯಲಹಂಕ: ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರಿಗಿಂತಲೂ, ರಕ್ಷಕರ ಪಾತ್ರ ಹಿರಿಯದಾಗಿದೆ ಎಂದು ಖ್ಯಾತ ಶಿಕ್ಷಣ ತಜ್ಞ, ಆದಿ ಚುಂಚನಗಿರಿ ಮಠದ ಮುಖ್ಯ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ ಅಭಿಪ್ರಾಯಪಟ್ಟರು.
ಹೆಸರಘಟ್ಟದ ಜ್ಞಾನ ವೃಕ್ಷ ಸೋಷಿಯಲ್ ಅಂಡ್ ಎಜುಕೇಷನ್ ಸೆಂಟರ್‍ನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಏರ್ಪಡಿಸಿದ್ದ “ನಾವೆಲ್ಲರೂ ಒಟ್ಟಾಗಿ ಸಾಧಿಸೋಣ “ಎಂಬ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಶಿಕ್ಷಣದ ಉನ್ನತಿಯಲ್ಲಿ ಪ್ರಾಥಮಿಕ ಹಂತದಲ್ಲಿಯೇ ಪೋಷಕರು ಸೂಕ್ಷ ನಿಲುವು ಹೊಂದಿರಬೇಕು. ಎಂದರು.
ಅಂತರಾಷ್ಟ್ರೀಯ ಪಶುವೈದ್ಯ ತಜ್ಞ ಡಾ.ನಾರಾಯಣ್ ಪ್ರತಾಪ್ ಮಾತನಾಡಿ, ಅಕ್ಷರ ಜ್ಞಾನ ಒಂದೇ ಶಿಕ್ಷಣವಲ್ಲ. ಆದರೆ ಉತ್ತಮ ಭವಿಷ್ಯವನ್ನು ಕಂಡುಕೊಳ್ಳುವಲ್ಲಿ ಹಾಗೂ ಸಕಾರಾತ್ಮಕ ವ್ಯಕ್ತಿತ್ವವನ್ನು ರೂಪಗೊಳಿಸುವಲ್ಲಿ ಶಿಕ್ಣಣದ ಪಾತ್ರ ಮಹತ್ವದ್ದಾಗಿದೆ.
ಮಗುವಿನ ಮೊದಲ ಶಿಕ್ಷಣ ಪ್ರಾರಂಭವಾಗುವುದು ನಮ್ಮ ನಡೆ ನುಡಿಗಳನ್ನು ನೋಡಿಕೊಂಡೇ ಆಗಿರುತ್ತದೆ ಎಂದು ನಾವು ಯಾವತ್ತು ಮರೆಯಬಾರದು, ಹಿರಿಯರಾದ ನಾವು ನುಡಿದಂತೆ ನಡೆದು ಅದೇ ದಾರಿಯಲ್ಲಿ ನಮ್ಮ ಮಕ್ಕಳನ್ನು ನಡೆಯುವಂತೆ ನೋಡಿಕೊಳ್ಳಬೇಕಾಗಿರುವುದು ಪೋಷಕರಾದ ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಜ್ಞಾನವೃಕ್ಷ ಸೋಷಿಯಲ್ ಅಂಡ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ವೀಣಾ ನರೇಂದ್ರ ಮಾತನಾಡಿ, ವಿಭಿನ್ನ ರೀತಿಯ ಕಲಿಕಾ ಶಿಬಿರಗಳಲ್ಲಿ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಂಡಾಗ ಆತ್ಮ ವಿಶ್ವಾಸ ಮೂಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಉಚಿತ ನೋಟ್ ಬುಕ್ ವಿತರಣೆಯನ್ನು ಮಾಡಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……